Oscars 2025; ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಲ್ಲಿ ಲೈವ್ ವೀಕ್ಷಿಸಬಹುದು?

2025ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಆಸ್ಕರ್ ಪ್ರಶಸ್ತಿಯನ್ನು ಅಕಾಡೆಮಿ ಪ್ರಶಸ್ತಿ ಎಂದು ಕರೆಯಲಾಗುತ್ತಿದೆ. 'RRR' ಚಿತ್ರದ 'ನಾಟು ನಾಟು' ಸಿಕ್ಕ ಬಳಿಕ ಆಸ್ಕರ್ ಬಗ್ಗೆ ಭಾರತೀಯರಲ್ಲಿ ಆಸಕ್ತಿ ಹೆಚ್ಚಾಗಿದೆ.

ಈ ವರ್ಷ ಆಸ್ಕರ್ ಪ್ರಶಸ್ತಿಯ ಯಾವುದೇ ವಿಭಾಗದಲ್ಲಿ ಭಾರತದ ಚಿತ್ರಗಳು ನಾಮಿನೇಟ್ ಆಗಿಲ್ಲ. ಆದರೆ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಗುನೀತ್ ಮೋಂಗಾ ನಿರ್ಮಾಣದ 'ಅನುಜಾ' ಕಿರುಚಿತ್ರ ಬೆಸ್ಟ್ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಪ್ರಶಸ್ತಿ ರೇಸ್‌ನಲ್ಲಿದೆ. ಅಮೆರಿಕನ್- ಹಿಂದಿ ಭಾಷೆಯ ಕಿರುಚಿತ್ರ ಇದು.

Oscars 2025 When and where to watch 97th academy awards streaming live in India

ನಾಳೆ (ಮಾರ್ಚ್ 3) ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ 97ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಹಾಸ್ಯನಟ ಕಾನನ್ ಒ'ಬ್ರಿಯನ್ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ. ತಿಂಗಳ ಹಿಂದೆಯೇ ಈ ಬಾರಿ ಆಸ್ಕರ್ ಪ್ರಶಸ್ತಿಗೆ ಎಲ್ಲಾ ವಿಭಾಗಗಳಲ್ಲಿ 5 ನಾಮಿನೇಷನ್ ಮಾಡಿ ಪಟ್ಟಿ ಬಿಡುಗಡೆ ಮಾಡಲಾಗಿತ್ತು. ನಾಮಿನೇಷನ್ ಆಗಿರುವ ಸಿನಿಮಾಗಳ ತಂಡದವರು ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ.

ಹಾಲಿವುಡ್ ಸಿನಿಮಾ ತಾರೆಯರು ಕೂಡ ಆಸ್ಕರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ. ಬಾಲಿವುಡ್ ನಟಿಯರು ಭಾಗಿ ಆದರೂ ಅಚ್ಚರಿ ಪಡಬೇಕಿಲ್ಲ. ಅಂದಹಾಗೆ ಭಾರತದಲ್ಲಿ ಕೂಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದು. ಭಾರತೀಯ ಕಾಲಮಾನದ ಪ್ರಕಾರ ನಾಳೆ ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ.

ಭಾರತದ ವೀಕ್ಷಕರು ಸ್ಟಾರ್ ಮೂವೀಸ್, ಸ್ಟಾರ್ ಮೂವೀಸ್ ಸೆಲೆಕ್ಟ್ ವಾಹಿನಿಗಳಲ್ಲಿ ಆಸ್ಕರ್ 2025 ಕಾರ್ಯಕ್ರಮ ನೇರವಾಗಿ ವೀಕ್ಷಿಸಬಹುದು. ಜಿಯೋ ಹಾಟ್‌ಸ್ಟರ್‌ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಕೂಡ ಲೈವ್ ಪ್ರಸಾರವಾಗಲಿದೆ. ಈ ಬಗ್ಗೆ ಹಾಟ್‌ಸ್ಟರ್ ತನ್ನ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಮಾಹಿತಿ ನೀಡಿದೆ.

ಈ ಬಾರಿ ಆಸ್ಕರ್ ಯಾರಿಗೆಲ್ಲಾ ಸಿಗುತ್ತದೆ ಎನ್ನುವ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಮಿಚಿಗನ್, ನ್ಯೂಜೆರ್ಸಿ, ಅರಿಜೋನಾ ಸೇರಿ ಕೆಲವು ಭಾಗಗಳಲ್ಲಿ ಬೆಟ್ಟಿಂಗ್ ಸಹ ನಡೆಯುತ್ತಿದೆ. 'ಎಲಿಮಿಯಾ ಪೆರೆಜ್' ಹಾಗೂ 'ಐಯಾಮ್ ಸ್ಟಿಲ್ ಹಿಯರ್' ಚಿತ್ರಗಳು ಹೆಚ್ಚು ಆಸ್ಕರ್ ಗೆಲ್ಲುವ ನಿರೀಕ್ಷೆಯಿದೆ. 'ಎಲಿಮಿಯಾ ಪೆರೆಜ್' ಬರೋಬ್ಬರಿ 13 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.

ಸೀನ್ ಬೇಕ್ ನಿರ್ದೇಶನದ 'ಅನೋರಾ' ಅತ್ಯುತ್ತಮ ಸಿನಿಮಾ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದು ಎನ್ನುವುದು ಹಲವರ ಲೆಕ್ಕಾಚಾರ. ಇದೇ ಚಿತ್ರದ ನಟನೆಗಾಗಿ ಮೈಕಿ ಮ್ಯಾಡಿಸನ್ ಅತ್ಯುತ್ತಮ ನಟಿ ಪ್ರಶಸ್ತಿ ಪಡೆಯಬಹುದು ಎನ್ನುವ ನಿರೀಕ್ಷೆ ದಟ್ಟವಾಗಿದೆ.

More from Filmibeat

English summary
Where and how to watch the Oscars 2025 live in India, here is complete nominations list
Read more about: oscars 2025 ott
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X