Oscars 2023: ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಭಾರತೀಯರು ಎಲ್ಲಿ, ಯಾವಾಗ ನೋಡಬಹುದು?

95ನೇ ಅಕಾಡೆಮಿ ಅವಾರ್ಡ್ಸ್ ಸೆರೆಮನಿಗೆ ವೇದಿಕೆ ಸಿದ್ಧವಾಗಿದೆ. ಕೆಲವೇ ಗಂಟೆಗಳಲ್ಲಿ ಸಮಾರಂಭ ಆರಂಭವಾಗಲಿದೆ. ಈ ಬಾರಿ ಭಾರತೀಯ ಸಿನಿರಸಿಕರು ಕೂಡ ಕಾರ್ಯಕ್ರಮ ವೀಕ್ಷಿಸಲು ಉತ್ಸುಕರಾಗಿದ್ದಾರೆ. 'RRR' ಚಿತ್ರದ 'ನಾಟು ನಾಟು' ಸಾಂಗ್ ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ನಾಮಿನೇಟ್ ಆಗಿದೆ. ಹಾಗಾಗಿ ಸಹಜವಾಗಿಯೇ ಕುತೂಹಲ ಗರಿಗೆದರಿದೆ. ಈಗಾಗಲೇ ಸಿನಿಜಗತ್ತಿನ ಕೇಂದ್ರ ಲಾಸ್ ಏಂಜಲ್ಸ್ ತಾರೆಯರಿಂದ ತುಂಬಿ ತುಳುಕುತ್ತಿದೆ.

'ನಾಟು ನಾಟು' ಸಾಂಗ್ ಜೊತೆಗೆ ಈ ವಿಭಾಗದಲ್ಲಿ 'ಟೆಲ್‌ ಇಟ್‌ ಲೈಕ್‌ ಎ ವುಮೆನ್‌' ಚಿತ್ರದ 'ಅಪ್ಲಾಜ್‌' ಸಾಂಗ್‌, 'ಬ್ಲಾಕ್‌ಫ್ಯಾಂಥರ್: ವಕಾಂಡ ಫರೆವರ್‌' ಚಿತ್ರದ 'ಲಿಫ್ಟ್‌ ಮಿ ಅಪ್‌', 'ಎವ್ರೀಥಿಂಗ್‌ ಎವ್ರೀ ವೇರ್‌ ಆಲ್‌ ಎಟ್‌ ವನ್ಸ್‌' ಸಿನಿಮಾದ 'ದಿಸ್‌ ಈಸ್‌‌ ಎ ಲೈಫ್‌' ಹಾಗೂ 'ಟಾಪ್‌ಗನ್‌: ಮ್ಯಾವರಿಕ್‌' ಚಿತ್ರದಿಂದ 'ಹೋಲ್ಡ್‌ ಮೈ ಹ್ಯಾಂಡ್‌' ಸಾಂಗ್‌ ಕೂಡ ನಾಮಿನೇಟ್ ಆಗಿದೆ. ತೆಲುಗಿನ 'ನಾಟು ನಾಟು' ಸಾಂಗ್‌ಗೆ ಆಸ್ಕರ್ ಪ್ರಶಸ್ತಿ ಬಂದೇ ಬರುತ್ತದೆ ಎನ್ನುವ ನಿರೀಕ್ಷೆ ದಟ್ಟವಾಗಿದೆ. ಇನ್ನು ವೇದಿಕೆಯಲ್ಲಿ ಸಾಂಗ್ ಲೈವ್ ಪರ್ಫಾರ್ಮೆನ್ಸ್ ಕೂಡ ಇದೆ.

Oscars Awards 2023: When and where to watch the 95th Academy Awards ceremony in India

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಕಳೆದ ವರ್ಷ ಮಾರ್ಚ್‌ನಲ್ಲಿ ರಿಲೀಸ್ ಆಗಿತ್ತು. ಎಂ. ಎಂ ಕೀರವಾಣಿ ಸಂಗೀತದ 'ನಾಟು ನಾಟು' ಹಾಡಿಗೆ ಚಂದ್ರಬೋಸ್ ಸಾಹಿತ್ಯ ಬರೆದಿದ್ದರು. ರಾಹುಲ್ ಸಿಪ್ಲಿಗಿಂಜ್ ಹಾಗೂ ಕಾಲಭೈರವ ಹಾಡಿದ್ದರು. ಇವರಿಬ್ಬರು ಈಗ ಆಸ್ಕರ್ ಪ್ರಶಸ್ತಿ ಪ್ರದಾನ ವೇದಿಕೆಯಲ್ಲಿ ಮತ್ತೊಮ್ಮೆ ಹಾಡಿ ಎಲ್ಲರನ್ನು ಕುಣಿಸಲಿದ್ದಾರೆ. ರಾಮ್‌ಚರಣ್, ತಾರಕ್ ಇಬ್ಬರು ಹೆಜ್ಜೆ ಹಾಕುವ ಸಾಧ್ಯತೆ ಕೂಡ ಇದೆ. ಆ ಕ್ಷಣವನ್ನು ನೋಡಲು ಭಾರತೀಯ ಸಿನಿರಸಿಕರು ಕಾಯುತ್ತಿದ್ದಾರೆ.

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 'ನಾಟು ನಾಟು' ಹಾಡಿಗೆ ಭಾರೀ ಪೈಪೋಟಿ ಇರೋದು ಸುಳ್ಳಲ್ಲ. ಆದರೆ ಈಗಾಗಲೇ ಗೋಲ್ಡನ್ ಗ್ಲೋಬ್‌ ರೀತಿಯ ಅಂತರಾಷ್ಟ್ರಿಯ ಪ್ರಶಸ್ತಿ ಸಿಕ್ಕಿರುವುದರಿಂದ ಆಸ್ಕರ್ ಕೂಡ ಸಿಗಬಹುದು ಎನ್ನುವ ಲೆಕ್ಕಾಚಾರ ನಡೀತಿದೆ. ಭಾರತದ ಸಿನಿಮಾ ಆಸ್ಕರ್ ರೇಸ್‌ನಲ್ಲಿ ಇರುವುದರಿಂದ ಸಿನಿರಸಿಕರು ಕಾರ್ಯಕ್ರಮ ಲೈವ್ ನೋಡಲು ಕಾಯುತ್ತಿದ್ದಾರೆ. ಕಾರ್ಯಕ್ರಮ ಎಲ್ಲಿ ಪ್ರಸಾರ ಆಗುತ್ತದೆ? ಎಲ್ಲಿ ನೋಡಬಹುದು? ಎನ್ನುವ ಪ್ರಶ್ನೆ ಕೂಡ ಇರುತ್ತದೆ.

ಭಾರತೀಯ ಕಾಲಮಾನದ ಪ್ರಕಾರ ಮಾರ್ಚ್ 13(ನಾಳೆ)ರಂದು ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಲಾಸ್ ಏಂಜೆಲ್ಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಸೆರೆಮನಿ ನಡೆಯಲಿದೆ. ಆಸ್ಕರ್ 2023 ನೇರಪ್ರಸಾರವನ್ನು ABC ನೆಟ್‌ವರ್ಕ್‌ನಲ್ಲಿ ನೋಡಬಹುದು. ಅದೇ ರೀತಿ ಯೂಟ್ಯೂಬ್, ಟ್ವಿಟ್ಟರ್, ಫೇಸ್‌ಬುಕ್, ಓಟಿಟಿ ಫ್ಲಾಟ್‌ಫಾರ್ಮ್‌ಗಳಲ್ಲೂ ನೋಡಬಹುದು. ಹುಲು ಲೈವ್ ಟಿವಿ, ಡೈರೆಕ್ಟ್ ಟಿವಿ, ಫುಬೊ ಟಿಟಿವಿ ಮತ್ತು ಎಟಿ & ಟಿ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ.

Oscars Awards 2023: When and where to watch the 95th Academy Awards ceremony in India

ಒಂದು ವೇಳೆ 'ನಾಟು ನಾಟು' ಸಾಂಗ್‌ಗೆ ಅವಾರ್ಡ್ ಸಿಕ್ಕರೆ 'RRR' ಟೀಂ ಸೆಲೆಬ್ರೇಷನ್ ಕೂಡ ಲೈವ್‌ನಲ್ಲಿ ನೋಡುವ ಅವಕಾಶ ಸಿಗಲಿದೆ. ಒಟ್ನಲ್ಲಿ ಆಸ್ಕರ್ ವೇದಿಕೆ ಮೇಲೆ ತೆಲುಗು ಸಾಂಗ್ ಲೈವ್ ಪರ್ಫಾರ್ಮೆನ್ಸ್ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭದ ಮತ್ತೊಂದು ಆಕರ್ಷಣೆ ಎಂದರೆ ನಟಿ ದೀಪಿಕಾ ಪಡುಕೋಣೆ ನಿರೂಪಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿರುವುದು. ಇನ್ನು ಭಾರತದಿಂದ 'ನಾಟು ನಾಟು' ಸಾಂಗ್‌ ಜೊತೆಗೆ ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ಆಲ್ ದಟ್ ಬ್ರೀಥ್' ಹಾಗೂ ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ 'ದಿ ಎಲಿಫೆಂಟ್ ವಿಸ್ಪರ್ಸ್' ಆಸ್ಕರ್‌ಗೆ ನಾಮಿನೇಟ್ ಆಗಿದೆ.

More from Filmibeat

English summary
Oscars Awards 2023: When and where to watch the 95th Academy Awards ceremony in India. All eyes in India will be on the Oscars ceremony RRR Movie. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X