Oscar awards: ವಾರೆವ್ಹಾ.. ಮುಂದೆ ಯೂಟ್ಯೂಬ್‌ನಲ್ಲೇ ನೋಡ್ಬೋದು ಆಸ್ಕರ್ ಅವಾರ್ಡ್ ಸಮಾರಂಭ

98ನೇ ಅಕಾಡೆಮಿ ಅವಾರ್ಡ್ ಅಥವಾ ಆಸ್ಕರ್ ಅವಾರ್ಡ್ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧವಾಗುತ್ತಿದೆ. ಈ ಬಾರಿ ಭಾರತದ ಕೆಲ ಸಿನಿಮಾಗಳು ಸ್ಪರ್ಧೆಯಲ್ಲಿವೆ. ಅತ್ಯುತ್ತಮ ಅಂತರಾಷ್ಟ್ರೀಯ ಫೀಚರ್ ಸಿನಿಮಾ ವಿಭಾಗದ ಅಂತಿಮ ಪಟ್ಟಿಯಲ್ಲಿ 'ಹೋಮ್‌ಬೌಂಡ್' ಸಿನಿಮಾ ಜಾಗ ಮಾಡಿಕೊಂಡಿದೆ. ಜಾನ್ವಿ ಕಪೂರ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಹೊಂಬಾಳೆ ಫಿಲ್ಮ್ಸ್ ವಿತರಣೆ ಮಾಡಿದ್ದ 'ಮಹಾವತಾರ್ ನರಸಿಂಹ' ಸಿನಿಮಾ ಬೆಸ್ಟ್ ಆನಿಮೇಟೆಡ್ ಫೀಚರ್ ಸಿನಿಮಾ ವಿಭಾಗದಲ್ಲಿ 2026ರ ಅಕಾಡೆಮಿ ಪ್ರಶಸ್ತಿಗೆ(98 ನೇ ಆಸ್ಕರ್) ಅಧಿಕೃತವಾಗಿ ಅರ್ಹತೆ ಪಡೆದಿದೆ. ಹಾಗಾಗಿ ಈ ಬಾರಿ ಭಾರತೀಯ ಸಿನಿರಸಿಕರು ಕೂಡ ಆಸ್ಕರ್ ಪ್ರಶಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ. 2026ರ ಮಾರ್ಚ್ 15ರಂದು ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜನವರಿ 22ರಂದು ಅಂತಿಮವಾಗಿ ನಾಮಿನೇಟ್ ಆಗಿರುವವರ ಪಟ್ಟಿ ಬಿಡುಗಡೆ ಆಗಲಿದೆ.

Oscars to Stream Free on YouTube from 2029 Ending Decades-Long TV Broadcast Era

ಈ ಬಾರಿ ಕೂಡ ಅಮೆರಿಕದ ಲಾಸ್​ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ವಿಶೇಷ ಅಂದ್ರೆ ಮುಂದಿನ ದಿನಗಳಲ್ಲಿ ಯೂಟ್ಯೂಬ್‌ನಲ್ಲೇ ನೇರ ಪ್ರಸಾರ ವೀಕ್ಷಿಸುವ ಅವಕಾಶ ಸಿಗಲಿದೆ. ಹೌದು ಸಿನಿರಸಿಕರಿಗೆ ಇದು ಸಿಹಿ ಸುದ್ದಿ. ಪ್ರತಿ ವರ್ಷ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ABC ವಾಹಿನಿ, ಡಿಸ್ನಿ ಪ್ಲಸ್, ಹುಲು (Hulu) ನಂತಹ ಸ್ಟ್ರೀಮಿಂಗ್ ವೇದಿಕೆಗಳ ಮೂಲಕ ಪ್ರಸಾರ ಮಾಡಲಾಗುತ್ತಿದೆ. ಕೆಲವರಿಗೆ ಇದು ಗೊಂದಲ ಉಂಟು ಮಾಡುತ್ತಿತ್ತು.

ಇತ್ತೀಚಿನ ವರ್ಷಗಳಲ್ಲಿ ಜನ ಟಿವಿಗಿಂತ ಮೊಬೈಲ್‌ನಲ್ಲೇ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಯೂಟ್ಯೂಬ್ ಅಂತೂ ಬಹಳ ಜನಪ್ರಿಯವಾಗಿದೆ. ಉಚಿತವಾಗಿ ಸಾಕಷ್ಟು ಮನರಂಜನೆ, ಮಾಹಿತಿ ನೀಡುತ್ತಿದೆ. ಹೆಚ್ಚು ದಿನ ಯೂಟ್ಯೂಬ್ ಫಾಲೋ ಮಾಡುತ್ತಾರೆ. ಹಾಗಾಗಿ 2029ರಿಂದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭವು ಟಿವಿ ಪ್ರಸಾರ ಕೈಬಿಟ್ಟು, ಯೂಟ್ಯೂಬ್‌ಗೆ ಸ್ಥಳಾಂತರಗೊಳ್ಳಲಿದೆ. ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ & ಸೈನ್ಸಸ್ ಸಂಸ್ಥೆಯು 2029ರಿಂದ 4 ವರ್ಷಗಳ ಕಾಲ ಯೂಟ್ಯೂಬ್‌ಗೆ ಆಸ್ಕರ್‌ ಕಾರ್ಯಕ್ರಮ ಪ್ರಸಾರದ ಹಕ್ಕು ನೀಡಿರುವುದನ್ನು ಖಚಿತಪಡಿಸಿದೆ.

ಇನ್ನು 3 ವರ್ಷ ABC ವಾಹಿನಿಯಲ್ಲೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ಪ್ರಸಾರವಾಗಲಿದೆ. ಕಳೆದ 49 ವರ್ಷಗಳಿಂದ ABC ವಾಹಿನಿಯಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನೇರ ಪ್ರಸಾರ ಆಗುತ್ತಿದೆ. ಇತ್ತೀಚೆಗೆ ಟಿಆರ್‌ಪಿ ಕಮ್ಮಿ ಆಗುತ್ತಿದೆ. ಜನ ಟಿವಿ ನೋಡುವುದಕ್ಕೆ ಅಷ್ಟಾಗಿ ಆಸಕ್ತಿ ತೋರಿಸದೇ ಇರುವುದು ಇದಕ್ಕೆ ಕಾರಣ ಎನ್ನಲಾಗ್ತಿದೆ. ಹಾಗಾಗಿ ಇಂತಾದೊಂದು ನಿರ್ಧಾರಕ್ಕೆ ಬರಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ, ರೆಡ್ ಕಾರ್ಪೆಟ್ ಕಾರ್ಯಕ್ರಮ ಮತ್ತು ಬಿಹೈಂಡ್‌ ದ ಸೀನ್ಸ್ ಎಲ್ಲವನ್ನು ಉಚಿತವಾಗಿ ಯೂಟ್ಯೂಬ್‌ನಲ್ಲಿ ವೀಕ್ಷಿಸಬಹುದು.

ಪ್ರತಿಷ್ಠಿತ ಆಸ್ಕರ್ ವೇದಿಕೆಯಲ್ಲಿ ಭಾರತೀಯ ಸಿನಿಮಾಗಳ ಸಾಧನೆ ಕಡಿಮೆ ಎನ್ನುವುದನ್ನು ಒಪ್ಪಿಕೊಳ್ಳಲೇಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ನಮ್ಮ ಸಿನಿಮಾಗಳು ಅಲ್ಲಿ ಸದ್ದು ಮಾಡ್ತಿದೆ. 2 ವರ್ಷಗಳ ಹಿಂದೆ 'RRR' ಚಿತ್ರದ 'ನಾಟು ನಾಟು' ಗೀತೆಗೆ ಆಸ್ಕರ್ ಪ್ರಶಸ್ತಿ ಲಭಿಸಿದ್ದು ವಿಶೇಷ. ಇನ್ನುಳಿದಂತೆ ಶಾರ್ಟ್‌ ಫಿಲ್ಮ್, ಡಾಕ್ಯುಮೆಂಟರಿ ವಿಭಾಗಗಳಲ್ಲಿ ಕೂಡ ಕೆಲವರು ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚೆಗೆ ಸಾಕಷ್ಟು ಜನ ಆಸ್ಕರ್ ಕಡೆ ಮುಖ ಮಾಡಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

'ಕಾಂತಾರ- 1' ಚಿತ್ರವನ್ನು ಆಸ್ಕರ್ ರೇಸ್‌ಗೆ ತೆಗೆದುಕೊಂಡು ಹೋಗುವುದಾಗಿ ವಿಜಯ್ ಕಿರಗಂದೂರ್ ಹೇಳಿದ್ದರು. 'ನಾಟು ನಾಟು' ಗೀತೆಗೆ ಪ್ರಶಸ್ತಿ ಸಿಕ್ಕ ಬಳಿಕ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಜಕ್ಕಣ್ಣ ಕೂಡ ಕಣ್ಣಿಟ್ಟಿದ್ದಾರೆ. 'ವಾರಣಾಸಿ' ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಕಟ್ಟಿಕೊಡುತ್ತಿದ್ದಾರೆ. ಜೇಮ್ಸ್ ಕ್ಯಾಮರೂನ್ ಸೇರಿ ಹಾಲಿವುಡ್ ಮಂದಿಗೂ ಈ ಬಗ್ಗೆ ಗೊತ್ತಾಗಿದೆ. ಇನ್ನುಳಿದಂತೆ ಸಾಕಷ್ಟು ಮಂದಿ ಪ್ರತಿವರ್ಷ ತಮ್ಮ ಸಿನಿಮಾಗಳನ್ನು ಆಸ್ಕರ್ ಪ್ರಶಸ್ತಿಗೆ ಕಳುಹಿಸಿಕೊಡುವ ಪ್ರಯತ್ನ ಮಾಡುತ್ತಲೇ ಇದ್ದಾರೆ.

ಸಿನಿಪ್ರಪಂಚದಲ್ಲೇ ಆಸ್ಕರ್ ಬಹಳ ಪ್ರತಿಷ್ಠಿತ ಪ್ರಶಸ್ತಿ. ಇದು ಪ್ರತಿಯೊಬ್ಬ ಫಿಲ್ಮ್ ಮೇಕರ್ ಹಾಗೂ ಕಲಾವಿದರ ಕನಸು. ಅದಕ್ಕಾಗಿ ಸಾಕಷ್ಟು ಜನ ಹಗಳಿರುಳು ಶ್ರಮಿಸುತ್ತಲೇ ಇದ್ದಾರೆ. ಆಸ್ಕರ್ ಪ್ರಶಸ್ತಿ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಕೆಲವರು ಮಾತ್ರ ಪದೇ ಪದೆ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ.

More from Filmibeat

Read more about: oscar awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X