ಎಡಿಟೆಡ್ ಫೋಟೋಗಳನ್ನೇ ಹಾಕುತ್ತಿದ್ದ ಬೆಡಗಿ: ನೆಟ್ಟಿಗರಿಂದ ಮಂಗಳಾರತಿ
ಸುಂದರವಾಗಿ ಕಾಣಿಸುವುದು ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ.? ಸೋಷಿಯಲ್ ಮೀಡಿಯಾದಲ್ಲಂತೂ ಹೆಚ್ಚು ಲೈಕ್ಸ್, ಕಾಮೆಂಟ್ಸ್ ಸಿಗಬೇಕು ಅಂದ್ರೆ ಬ್ಯೂಟಿಫುಲ್ ಆಗಿ ಕಾಣಲೇಬೇಕು. ಈಗಂತೂ ಫೇಸ್ ಟ್ಯೂನ್ ಆಪ್ ಗಳಿರುವುದರಿಂದ ತಲೆಕೆಡಿಸಿಕೊಳ್ಳುವ ಹಾಗೇ ಇಲ್ಲ.
ಬಹುತೇಕ ನಟ-ನಟಿಯರು ತಮ್ಮ ಫೋಟೋಗಳನ್ನ ಫೇಸ್ ಬುಕ್, ಇನ್ಸ್ಟಾಗ್ರಾಮ್ ನಲ್ಲಿ ಹಾಕುವ ಮುನ್ನ ಫೇಸ್ ಟ್ಯೂನ್ ಮಾಡೇ ಮಾಡ್ತಾರೆ. ಆದರೆ ಪ್ರತಿಬಾರಿಯೂ ಅತಿ ಎನಿಸುವಷ್ಟು ಎಡಿಟ್ ಮಾಡಿದರೆ.? ಫೇಸ್ ಟ್ಯೂನ್ ನಿಂದಾಗಿ ಒರಿಜಿನಲ್ ಆಗಿ ಇರುವುದಕ್ಕೂ ಫೋಟೋದಲ್ಲಿ ಕಾಣುವುದಕ್ಕೂ ಭಾರಿ ವ್ಯತ್ಯಾಸ ಕಂಡುಬಂದರೆ.. ನೆಟ್ಟಿಗರು ಸುಮ್ಮನೆ ಇರ್ತಾರಾ.? ಮಂಗಳಾರತಿ ಮಾಡೋದು ಗ್ಯಾರೆಂಟಿ.
ಹಾಲಿವುಡ್ ರಿಯಾಲಿಟಿ ಸ್ಟಾರ್ ಕ್ಲೋಯಿ ಕರ್ದಾಶಿಯಾನ್ ಗೂ ಸದ್ಯ ಇದೇ ಪರಿಸ್ಥಿತಿ ಉಂಟಾಗಿದೆ. ಇನ್ಸ್ಟಾಗ್ರಾಮ್ ನಲ್ಲಿ ಪ್ರತಿ ಸಲವೂ ಫೇಸ್ ಟ್ಯೂನ್ ಬಳಸಿ ಅತಿ ಎನಿಸುವಷ್ಟು ಎಡಿಟ್ ಮಾಡಿದ ಫೋಟೋಗಳನ್ನು ಕ್ಲೋಯಿ ಕರ್ದಾಶಿಯಾನ್ ಶೇರ್ ಮಾಡುತ್ತಿದ್ದರು.

ಇದನ್ನ ಗಮನಿಸಿದ 'ಸೆಲೆಬ್ ಫೇಸ್' ಕ್ಲೋಯಿ ಕರ್ದಾಶಿಯಾನ್ ರವರ ರಿಯಲ್ ಫೋಟೋ ಮತ್ತು ಎಡಿಟೆಡ್ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಬಯಲು ಮಾಡಿದೆ. ಇಷ್ಟು ದಿನ ಎಡಿಟೆಡ್ ಫೋಟೋಗಳಿಂದ ತಮ್ಮನ್ನ ಫೂಲ್ ಮಾಡಿದ ಕ್ಲೋಯಿ ಕರ್ದಾಶಿಯಾನ್ ಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
''ಮುಖವನ್ನ ಫೇಸ್ ಟ್ಯೂನ್ ಮಾಡಬಹುದು. ಆದ್ರೆ, ನಮ್ಮಲ್ಲಿರುವ ಶಕ್ತಿ, ಚೈತನ್ಯಕ್ಕೆ ಫೇಸ್ ಟ್ಯೂನ್ ಮಾಡಲು ಆಗಲ್ಲ'' ಅಂತ ಕ್ಲೋಯಿ ಕರ್ದಾಶಿಯಾನ್ ಗೆ ನೆಟ್ಟಿಗರು ಕಿವಿ ಹಿಂಡುತ್ತಿದ್ದಾರೆ.
ಅಂದ್ಹಾಗೆ, ಕ್ಲೋಯಿ ಕರ್ದಾಶಿಯಾನ್ ಅಮೇರಿಕಾದ ಕಿರುತೆರೆಯಲ್ಲಿ ಪ್ರಖ್ಯಾತಿ ಪಡೆದಿರುವ ಮಾಡೆಲ್. 'ದಿ ಎಕ್ಸ್ ಫ್ಯಾಕ್ಟರ್' ಎರಡನೇ ಆವೃತ್ತಿ, 'ಕಾಕ್ ಟೇಲ್ಸ್ ವಿತ್ ಕ್ಲೋಯಿ' ಮುಂತಾದ ಶೋಗಳಲ್ಲಿ ಕ್ಲೋಯಿ ಕರ್ದಾಶಿಯಾನ್ ನಿರೂಪಣೆ ಮಾಡಿದ್ದಾರೆ.


Click it and Unblock the Notifications











