»   » ಪರಪರ ಕೆರೆದುಕೊಳ್ಳುವಂತೆ ಮಾಡಿದ ಪದ್ಮಾ ಲಕ್ಷ್ಮಿ ಟ್ವೀಟ್

ಪರಪರ ಕೆರೆದುಕೊಳ್ಳುವಂತೆ ಮಾಡಿದ ಪದ್ಮಾ ಲಕ್ಷ್ಮಿ ಟ್ವೀಟ್

Posted By: ರವಿಕಿಶೋರ್
Subscribe to Filmibeat Kannada

ಭಾರತೀಯ ಸಂಜಾತೆ ಹಾಗೂ ರೂಪದರ್ಶಿ ಪದ್ಮಾ ಲಕ್ಷ್ಮಿ ಅವರ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಸದಾ ಒಂದಿಲ್ಲೊಂದು ಸಂಚಲನಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಲ್ಲಿರುವ ಕಲೆ ಅವರಿಗೆ ಕರಗತ. ಈಗ ಅವರು ಮಾಡಿರುವ ಒಂದೇ ಒಂದು ಟ್ವೀಟ್ ಪಡ್ಡೆಗಳು ಪರಪರ ಎಂದು ಕೆರೆದುಕೊಳ್ಳುವಂತೆ ಮಾಡಿದೆ.

ತನ್ನ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಲ್ಲಿ ಬಿಕಿನಿ ಫೋಟೋವೊಂದನ್ನು ಹಾಕಿ ಅದಕ್ಕೆ ಶಿರೋನಾಮೆಯನ್ನೂ ನೀಡಿದ್ದರು. ಯಥಾವತ್ತಾಗಿ ಇಲ್ಲಿದೆ ಅದು ಓದಿ. "My friend claims it looks like I have a penis in this pic. One guess as to whether he's gay or not... #onhismind #tbt." LOL!,"

Padma Lakshmi

ಪದ್ಮಾ ಲಕ್ಷ್ಮಿ ಏನು ಹೇಳಿದ್ದಾರೋ ಅರ್ಥವಾಯಿತಲ್ಲವೇ! ಇದೀಗ ಈ ಫೋಟೋ ಹಾಗೂ ಅವರ ಹೇಳಿಕೆ ಭಾರಿ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಹೇಳಿಕೇಳಿ ಪದ್ಮಾ ಲಕ್ಷ್ಮಿ ಈ ರೀತಿಯ ಬೋಲ್ಡ್ ಹೇಳಿಕೆಗಳಿಗೆ ಹೆಸರಾದವರು, ಇದರಲ್ಲೇನು ವಿಶೇಷ ಇಲ್ಲ ಬಿಡಿ ಎಂದು ಕೆಲವರು ತೆಪ್ಪಗಿದ್ದರೆ ಇನ್ನು ಕೆಲವರು ಮಾತ್ರ ಏನೋ ಆದಂತೆ ಆಡುತ್ತಿದ್ದಾರೆ.

ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಅವರ ಮಾಜಿ ಪತ್ನಿಯಾದ ಪದ್ಮಾ ಲಕ್ಷ್ಮಿ 2010ರಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಆದರೆ ಆ ಮಗುವಿನ ತಂದೆ ಯಾರು ಎಂಬುದನ್ನು ಅವರು ಬಹಿರಂಗಪಡಿಸಿರಲಿಲ್ಲ. ಆ ಮಗುವಿಗೆ ಕೃಷ್ಣ ಎಂದು ಹೆಸರಿಟ್ಟಿದ್ದರು.

ಇದೀಗ ಪದ್ಮಾ ಲಕ್ಷ್ಮಿ ಹಾಗೂ ಕಿಸ್ಸಿಂಗ್ ಸ್ಟಾರ್ ರಿಚರ್ಡ್ ಗೇರ್ ಇಬ್ಬರೂ ಜೋಡಿ ಹಕ್ಕಿಯಾಗಿ ತಿರುಗಾಡುತ್ತಿದ್ದಾರಂತೆ. ಇಬ್ಬರೂ ರಹಸ್ಯವಾಗಿ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಅಮೆರಿಕಾದ ಪತ್ರಿಕೆಗಳು ಬೊಂಬಡಾ ಬಜಾಯಿಸುತ್ತಿವೆ.

English summary
Hottie Top Chef host, Padma Lakshmi decided to share a pic on throwback which will show her bikini body. Padma Lakshmi shared a bikini pic on Instagram which had a funny caption. "My friend claims it looks like I have a penis in this pic. One guess as to whether he's gay or not... #onhismind #tbt." LOL!," she captioned the pic and immediately our eyes like everyone went down there to check that ummm.. out!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada