ಆಸ್ಕರ್ ವಿಜೇತ ಸಿನಿಮಾ ನಟ ಅನುಮಾನಾಸ್ಪದ ಸಾವು: ಕಾರಿನಲ್ಲಿ ಮೃತದೇಹ ಪತ್ತೆ

ಸೂಪರ್ ಹಿಟ್ 'ಪ್ಯಾರಾಸೈಟ್' ಸಿನಿಮಾ ನಟ ಲೀ ಸನ್ ಕ್ಯೂನ್ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿ ಸೌತ್ ಕೊರಿಯನ್ ನಟನ ಮೃತದೇಹ ಪತ್ತೆಯಾಗಿದ್ದು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಲೀ ನಟನೆಯ ಸೌತ್ ಕೊರಿಯನ್ ಚಿತ್ರ 'ಪ್ಯಾರಾಸೈಟ್' ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಗೆದ್ದುಕೊಂಡಿತ್ತು.

48 ವರ್ಷದ ಲೀ ಸೌತ್ ಕೊರಿಯಾದ ರಾಜಧಾನಿ ಸಿಯೋಲ್‌ನಲ್ಲಿ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಲೀ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ಇದೆ. ಗಾಂಜಾ ಸೇರಿದಂತೆ ಸೈಕೋಆಕ್ಟಿವ್ ಡ್ರಗ್ಸ್ ಸೇವಿಸಿದ್ದ ಆರೋಪ ಹೊತ್ತಿದ್ದ ಲೀ ವಿಚಾರಣೆಯ ಮರುದಿನವೇ ಶವವಾಗಿ ಪತ್ತೆಯಾಗಿರುವುದು ಗಮನಾರ್ಹ. ಲೀ ಮರಣದ ಕಾರಣ ತಿಳಿಯಬೇಕಿದೆ.

Parasite actor Lee Sun-kyun has passed away, His body was found in a car

ಸೆಂಟ್ರಲ್ ಸಿಯೋಲ್‌ನ ಪಾರ್ಕ್‌ ಬಳಿ ನಿಂತಿದ್ದ ಕಾರಿನಲ್ಲಿ ಲೀ ಸನ್ ಕ್ಯೂನ್ ಮೃತದೇಹವನ್ನು ಪೊಲೀಸರು ಪತ್ತೆ ಮಾಡಿದ್ದರು. ಬಾರ್ ನೌಕರನೊಂದಿಗೆ ಡ್ರಗ್ಸ್ ಸೇವಿಸಿದ ಆರೋಪ ಲೀ ಮೇಲಿತ್ತು. ಇದಲ್ಲದೇ, ತನ್ನ ಮನೆಯ ಬಳಿ ಲೀ ಹಲವು ಬಾರಿ ಡ್ರಗ್ಸ್ ಸೇವಿಸಿದ್ದಾಗಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ಟೋಬರ್‌ನಿಂದ ಡ್ರಗ್ಸ್ ಪ್ರಕರಣದ ತನಿಖೆ ನಡೆಯುತ್ತಿದೆ.

ಡ್ರಗ್ಸ್ ಸೇವನೆ ಆರೋಪವನ್ನು ಲೀ ಪದೇ ಪದೆ ನಿರಾಕರಿಸಿದ್ದರು. ಎಂದಿಗೂ ಡ್ರಗ್ಸ್ ಸೇವಿಸಿಲ್ಲ ಎಂದು ಹೇಳುತ್ತಾ ಬಂದಿದ್ದರು. ಅಗತ್ಯ ಬಿದ್ದರೆ ಯಾವುದೇ ಪರೀಕ್ಷೆ ನಡೆಸಬಹುದು ಎಂದಿದ್ದರು. ಈ ಹಿನ್ನೆಲೆಯಲ್ಲಿ ನಾರ್ಕೋಟಿಕ್ಸ್ ತಜ್ಞರು ಆತನಿಗೆ ಮಂಪರು ಪರೀಕ್ಷೆ ನಡೆಸಿದ್ದಾರೆ. ಈ ಪರೀಕ್ಷೆಗಳಲ್ಲಿ ಆತನ ವರದಿ ನೆಗೆಟಿವ್ ಎಂದು ತಿಳಿದುಬಂದಿದೆ.

ನಟಿ ಜಿಯೋನ್ ಹೈ ಜಿನ್ ಅವರನ್ನು ಪ್ರೀತಿಸಿ ನಟ ಲೀ ಕುನ್ ಮದುವೆ ಆಗಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. 2001ರಲ್ಲಿ 'ಲವರ್ಸ್' ಎಂಬ ಟಿವಿ ಶೋ ಮೂಲಕ ಉದ್ಯಮಕ್ಕೆ ಲೀ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಲೀ ಕುನ್ ಸುಮಾರು ಎರಡು ದಶಕಗಳಿಂದ ಸಿನಿಮಾ, ವೆಬ್‌ ಸೀರಿಸ್‌ಗಳಲ್ಲಿ ನಟಿಸುತ್ತಾ ಬಂದಿದ್ದರು. 2010 ರ ನಂತರ ಬಹಳ ಜನಪ್ರಿಯರಾದರು. 2019 ರಲ್ಲಿ ಲೀ ನಟನೆಯ 'ಪ್ಯಾರಸೈಟ್' ಚಿತ್ರ ದೇಶಾದ್ಯಂತ ಗುರುತಿಸಲ್ಪಟ್ಟಿತು. ಈ ಚಿತ್ರವು ಅತ್ಯುತ್ತಮ ವಿದೇಶಿ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಛಾಯಾಗ್ರಹಣ ಮತ್ತು ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ಆಸ್ಕರ್ ಪ್ರಶಸ್ತಿಗಳನ್ನು ಗೆದ್ದುಕೊಂಡಿತು. ಲೀ ಕೊನೆಯ ಬಾರಿಗೆ ಈ ವರ್ಷ 'ಸ್ಲೀಪ್' ಎನ್ನುವ ಚಿತ್ರದಲ್ಲಿ ನಟಿಸಿದ್ದರು.

ಡ್ರಗ್ಸ್ ಸೇವನೆ ಆರೋಪ ಬೆನ್ನಲ್ಲೇ ಲೀ ಕ್ಯೂನ್ ವೃತ್ತಿಜೀವನಕ್ಕೆ ಪೆಟ್ಟು ಬಿದ್ದಿತ್ತು. ಆತ ನಟಿಸುತ್ತಿದ್ದ ಅನೇಕ ಟಿವಿ ಕಾರ್ಯಕ್ರಮಗಳಿಂದಲೂ ಕೈಬಿಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದಾರೆ ಎನ್ನಲಾಗಿದೆ. ತಾನು ಮಾಡದ ತಪ್ಪಿಗೆ ತನ್ನನ್ನು ತಪ್ಪಿತಸ್ಥನನ್ನಾಗಿ ನೋಡಲಾಗುತ್ತಿದೆ ಎನ್ನುವ ಬೇಸರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಪೊಲೀಸರ ತನಿಖೆಯಿಂದ ನಿಜವಾದ ಸತ್ಯ ಹೊರಬೀಳುವ ಸಾಧ್ಯತೆ ಇದೆ.

ದಕ್ಷಿಣ ಕೊರಿಯಾದಲ್ಲಿ ಡ್ರಗ್ಸ್ ತೆಗೆದುಕೊಳ್ಳುವುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ವಿದೇಶಕ್ಕೆ ಪ್ರಯಾಣಿಸುವ ಮತ್ತು ಡ್ರಗ್ಸ್ ತರುವ ಯಾರಾದರೂ ದಕ್ಷಿಣ ಕೊರಿಯಾಕ್ಕೆ ಹೋದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ. ಒಂದು ವೇಳೆ ಅಪರಾಧ ಸಾಬೀತಾದರೆ, 5 ವರ್ಷಗಳವರೆಗೆ ಜೈಲು ಶಿಕ್ಷೆ ಇರುತ್ತದೆ.

ಹೆಲ್ಪ್‌ಲೆಸ್, ಆಲ್ ಎಬೊಟ್ ಮೈ ವೈಫ್, ಮ್ಯಾನ್ ಆಫ್ ವಿಲ್, ಎ ಸ್ಪೆಷಲ್ ಲೇಡಿ, ಟೇಕ್ ಪಾಯಿಂಟ್, ಪಜು ಸೇರಿದಂತೆ ಹಲವು ಸಿನಿಮಾಗಳಲ್ಲಿ ಲೀ ಸನ್-ಕ್ಯುನ್ ನಟಿಸಿದ್ದಾರೆ. 'ದಿ ಲ್ಯಾಂಡ್ ಆಫ್ ಹ್ಯಾಪಿನೆಸ್' ಎನ್ನುವ ಸಿನಿಮಾ ಬಿಡುಗಡೆ ಆಗಬೇಕಿದೆ.

More from Filmibeat

English summary
South Korean actor Lee Sun Kyun Dies At 48;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X