Golden Globes 2025 ; ಭಾರತೀಯ ಚಿತ್ರರಂಗಕ್ಕೆ ಈ ವರ್ಷ ಸಿಕ್ಕಿತಾ ಪ್ರತಿಷ್ಠಿತ ಪ್ರಶಸ್ತಿ, ಗೆದ್ದವರು ಯಾರ್ಯಾರು ?
ಆಸ್ಕರ್‌ನಷ್ಟೇ ಮಹತ್ವ ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ಇದೆ. ಪ್ರತಿ ವರ್ಷ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆಯುವ ಕನಸನ್ನು ಚಿತ್ರರಂಗದ ಅನೇಕರು ಕಾಣುತ್ತಾರೆ. ಯಾಕೆಂದರೆ ಇಲ್ಲಿ ಪ್ರಶಸ್ತಿ ಗೆದ್ದರೆ ಆಸ್ಕರ್‌ನಲ್ಲಿ ಪ್ರಶಸ್ತಿ ಸಿಗುವುದು ಬಹುತೇಕ ಖಚಿತವೆನ್ನುವ ಮಾತು ಇದೆ. ಕಾಲ ಕಾಲಕ್ಕೆ ಈ ಮಾತು ನಿಜಾ ಕೂಡ ಆಗಿದೆ.
ಇನ್ನು, ಆಸ್ಕರ್‌ನಂತೆಯೇ ಈ ಪ್ರಶಸ್ತಿ ಕೂಡ ಭಾರತಕ್ಕೆ ಮರಿಚೀಕೆಯಾದರೂ ಕೂಡ ಆಗಾಗ ಕೆಲ ಭಾರತದ ಚಿತ್ರಗಳು ಈ ಪ್ರಶಸ್ತಿ ಸಮಾರಂಭದಲ್ಲಿ ಸದ್ದು ಮಾಡುತ್ತವೆ. ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತವೆ. ಉದಾಹರಣೆಗೆ ಆರ್.ಆರ್.ಆರ್. 2023ರಲ್ಲಿ ಹಲವು ವಿಭಾಗಗಳಲ್ಲಿ ಸ್ಫರ್ಧೆಯನ್ನು ಮಾಡಿ ನಾಟು ನಾಟು ಹಾಡಿಗೆ ಪ್ರಶಸ್ತಿಯನ್ನು ಪಡೆದು ಆರ್.ಆರ್.ಆರ್ ಚಿತ್ರ ಇತಿಹಾಸ ನಿರ್ಮಾಣ ಮಾಡಿತ್ತು.

ಈ ಅವಕಾಶ ಈ ವರ್ಷ ಪಾಯಲ್ ಕಪಾಡಿಯಾ ನಿರ್ದೇಶನದ ಆಲ್ ವಿ ಇಮ್ಯಾಜಿನ್ ಆಸ್ ಲೈಟ್ ಚಿತ್ರಕ್ಕಿತ್ತು. ಪ್ರಶಸ್ತಿ ಗೆಲ್ಲುವ ಭರವಸೆಯಲ್ಲಿ ಕೂಡ ಚಿತ್ರತಂಡ ಇತ್ತು. ಆದರೆ. ಆ ಭರವಸೆ ಹುಸಿಯಾಯ್ತು. ಇಂಗ್ಲೀಷೇತರ ಭಾಷೆಯಲ್ಲಿ ಎಮಿಲಿಯಾ ಪೆರೆಜ್ ಚಿತ್ರದ ಎದುರು ಸೋತು ಹೋಯಿತು.
ಇನ್ನು ಇದೇ ಚಿತ್ರದ ನಿರ್ದೇಶನಕ್ಕೆ ಪಾಯಲ್ ಕಪಾಡಿಯಾ ಅತ್ಯುತ್ತಮ ನಿರ್ದೇಶಕಿ ಪ್ರಶಸ್ತಿ ರೇಸ್‌ನಲ್ಲಿದ್ದರು. ಈ ಮೂಲಕ ಗೋಲ್ಡನ್ ಗ್ಲೋಬ್ಸ್ ಇತಿಹಾಸದಲ್ಲಿಯೇ ಬೆಸ್ಟ್ ಡೈರೆಕ್ಟರ್ ವಿಭಾಗದಲ್ಲಿ ನಾಮ ನಿರ್ದೇಶನಗೊಂಡ ಮೂರನೇ ಏಷ್ಯಾದ ಮಹಿಳೆ ಎನ್ನುವ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದ್ದರು. ಆದರೆ ಇಲ್ಲಿಯೂ ಕೂಡ ನಿರಾಸೆ ಎದುರಾಯಿತು. 'ದಿ ಬ್ರೂಟ್‌ಲಿಸ್ಟ್'ಗಾಗಿ ಬ್ರಾಡಿ ಕಾರ್ಬೆಟ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಸೋತರು ಕೂಡ ಮುಖದಲ್ಲಿ ಮಂದಹಾಸ ಮತ್ತು ಆತ್ಮ ವಿಶ್ವಾಸದ ಜೊತೆ ಪಾಯಲ್ ಕಪಾಡಿಯಾ ಪ್ರಶಸ್ತಿ ಸಮಾರಂಭದಲ್ಲಿ ಕಾಣಿಸಿಕೊಂಡರು ಚಪ್ಪಾಳೆ ತಟ್ಟಿ ವಿಜೇತರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಇನ್ನುಳಿದಂತೆ 2025ನೇ ಸಾಲಿನಲ್ಲಿ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ.
ಗೋಲ್ಡನ್ ಗ್ಲೋಬ್ 2025 ಪ್ರಶಸ್ತಿ ಗೆದ್ದವರ ಪಟ್ಟಿ
ಅತ್ಯುತ್ತಮ ನಟ - ಸೆಬಾಸ್ಟಿಯನ್ ಸ್ಟಾನ್ { ಎ ಡಿಫರೆಂಟ್ ಮ್ಯಾನ್ ಚಿತ್ರ }
ಅತ್ಯುತ್ತಮ ನಟಿ - ಡೆಮಿ ಮೂರ್ { ದಿ ಸಬ್ ಸ್ಟಾನ್ಸ್ ಚಿತ್ರ }
ಅತ್ಯುತ್ತಮ ಪೋಷಕ ನಟಿ - ಜೋ ಸಲ್ಡಾನಾ { ಎಮಿಲಿಯಾ ಪೆರೆಜ್ ಚಿತ್ರ }
ಅತ್ಯುತ್ತಮ ಪೋಷಕ ನಟ - ಕೀರನ್ ಕುಲ್ಕಿನ್ { ಎ ರಿಯಲ್ ಪೇನ್ ಚಿತ್ರ }
ಅತ್ಯುತ್ತಮ ಚಿತ್ರಕಥೆ - ಚಿತ್ರ ಕಾನ್ಕ್ಲೇವ್, ಬರಹಗಾರ ಪೀಟರ್ ಸ್ಟ್ರಾಗನ್
ಅತ್ಯುತ್ತಮ ಇಂಗ್ಲಿಷೇತರ ಚಿತ್ರ - ಎಮಿಲಿಯಾ ಪೆರೆಜ್
ಅತ್ಯುತ್ತಮ ಚಿತ್ರ { ಅನಿಮೇಟೆಡ್ } - ಫ್ಲೋ
ಅತ್ಯುತ್ತಮ ನಿರ್ದೇಶಕ - ಬ್ರಾಡಿ ಕಾರ್ಬೆಟ್ { ದಿ ಬ್ರೂಟಲಿಸ್ಟ್ ಚಿತ್ರ }
ಬೆಸ್ಟ್ ಒರಿಜಿನಲ್ ಸ್ಕೋರ್ - ಚಾಲೆಂಜರ್ಸ್
ಬೆಸ್ಟ್ ಒರಿಜಿನಲ್ ಸಾಂಗ್ - ಎಲ್ ಮಾಲ್, ಎಮಿಲಿಯಾ ಪೆರೆಜ್
ಅತ್ಯುತ್ತಮ Tv ಸರಣಿ { ಮ್ಯೂಸಿಕಲ್/ ಹಾಸ್ಯ } - ಹ್ಯಾಕ್ಸ್
ಅತ್ಯುತ್ತಮ Tv ಸರಣಿ { ಡ್ರಾಮಾ } - ಶೋಗನ್
ಅತ್ಯುತ್ತಮ ಕಿರುತೆರೆ ನಟಿ - ಜೀನ್ ಸ್ಮಾರ್ಟ್ { ಹ್ಯಾಕ್ಸ್ Tv ಶೋ }
ಅತ್ಯುತ್ತಮ ಕಿರುತೆರೆ ನಟ - ಹಿರೋಯುಕಿ ಸನಡಾ { ಶೋಗನ್ ಸೀರಿಸ್ }
ಕಿರುತೆರೆಯ ಅತ್ಯುತ್ತಮ ಪೋಷಕ ನಟ - ತಡಾನೋಬು ಅಸಾನೊ { ಶೋಗನ್ ಸೀರಿಸ್ }
ಕಿರುತೆರೆಯ ಅತ್ಯುತ್ತಮ ಪೋಷಕ ನಟಿ - ಜೆಸ್ಸಿಕಾ ಗನ್ನಿಂಗ್ { ಬೇಬಿ ರೈನ್ಡೀರ್ }


Click it and Unblock the Notifications











