»   » ಪ್ರಣಯಭರಿತ ದೃಶ್ಯಕ್ಕಾಗಿ ಬೆತ್ತಲಾದ ಶೃಂಗಾರ ತಾರೆ

ಪ್ರಣಯಭರಿತ ದೃಶ್ಯಕ್ಕಾಗಿ ಬೆತ್ತಲಾದ ಶೃಂಗಾರ ತಾರೆ

By: ರವಿಕಿಶೋರ್
Subscribe to Filmibeat Kannada
ಹಾಲಿವುಡ್ ಚಿತ್ರಗಳಲ್ಲಿ ಈ ರೀತಿಯ ಒಂದು ಸನ್ನಿವೇಶ ಇದ್ದರೇನೆ ನೋಡಿ ಅದು ಪರಿಪೂರ್ಣ ಚಿತ್ರ ಎನ್ನಿಸಿಕೊಳ್ಳುವುದು. ಈ ರೀತಿಯ ಒಂದೋ, ಎರಡೋ ದೃಶ್ಯಗಳನ್ನು ಹಾಲಿವುಡ್ ಚಿತ್ರಗಳಲ್ಲಿ ನಿರೀಕ್ಷಿಸುವ ಅತಿದೊಡ್ಡ ಪ್ರೇಕ್ಷಕವರ್ಗಕ್ಕೂ ಬರವಿಲ್ಲ.

ಹಾಲಿವುಡ್ ಖ್ಯಾತನಾಮರ ಪೈಕಿ ಒಬ್ಬರಾದ ಪೆನಲೊಪ್ ಕ್ರೂಜ್ ಇಂಥಹದ್ದೇ ಒಂದು ರಸಭರಿತ ಸನ್ನಿವೇಶಕ್ಕಾಗಿ ಸಿದ್ಧವಾಗಿದ್ದಾರೆ. ಹಾಲಿವುಡ್ ನ 'ವೆನುಟೋ ಅಲ್ ಮೊಂಡೊ' (ಮರುಜನ್ಮ ಎಂಬ ಅರ್ಥ ಇದೆಯಂತೆ) ಎಂಬ ಚಿತ್ರಕ್ಕಾಗಿ ಬಟ್ಟೆ ಕಳಚಿಸಿದ್ದಾರೆ.

ಚಿತ್ರದ ನಾಯಕ ನಟ ಎಮಿಲಿ ಹಿರ್ಚ್ ಜೊತೆ ಪ್ರಣಯಭರಿತ ಸನ್ನಿವೇಶ ಒಂದರಲ್ಲಿ ಅಭಿನಯಿಸಿದ್ದು, ಅದು ನೈಜತೆಗಾಗಿ ಮೂಡಿಬರಲು ಬಟ್ಟೆ ಕಳಚಿ ಅಭಿನಯಿಸಿದ್ದಾರಂತೆ. ಪೆನಲೊಪ್ ಗೆ ಎಮಿಲಿ ಗಂಡನಾಗಿ ಅಭಿನಯಿಸುತ್ತಿದ್ದಾರೆ.

ಚಿತ್ರದಲ್ಲಿ ಪೆನಲೊಪ್ ಅವರು ಮಗುವೊಂದರ ತಾಯಿಯಾಗಿ ಕಾಣಿಸುತ್ತಿದ್ದಾರೆ. ತನ್ನ ಮಗನೊಂದಿಗೆ ಆಕೆ ಸರಜೆವೊಗೆ ಭೇಟಿ ನೀಡುತ್ತಾರೆ. ಅಲ್ಲಿ ಹದಿನಾರು ವರ್ಷಗಳ ಹಿಂದೆ ಬೋಸ್ನಿಯಾ ಯುದ್ಧದಲ್ಲಿ ಆಕೆಯ ಗಂಡ ಮೃತಪಟ್ಟಿರುತ್ತಾನೆ.

ಆಗ ತನ್ನ ಗಂಡನನ್ನು ನೆನಯುವ ಸಂದರ್ಭದಲ್ಲಿ ಫ್ಲಾಶ್ ಬ್ಯಾಕ್ ನಲ್ಲಿ ಈ ಸನ್ನಿವೇಶ ಮೂಡಿಬರುತ್ತದಂತೆ. ತಾನು ತನ್ನ ಗಂಡ ಎಷ್ಟೊಂದು ಅನ್ಯೋನ್ಯವಾಗಿದ್ದರು. ಅವರಿಬ್ಬರ ನಡುವಿನ ಅನುರಾಗ, ಪ್ರೇಮ ಹೇಗಿತ್ತು ಎಂಬ ನೇಪಥ್ಯದಲ್ಲಿ ಕಥೆ ಸಾಗುತ್ತದಂತೆ. ಆಗ ಈ ಶೃಂಗಾರಭರಿತ ಸನ್ನಿವೇಶ ತೆರೆಯ ಮೇಲೆ ಮೂಡಿಬರುತ್ತದೆ.

ಪೆನಲೊಪ್ ಕ್ರೂಜ್ ಅವರಿಗೆ ಈಗ ವಯಸ್ಸು 38 ಜಾರಿದ್ದರೂ ಇನ್ನೂ ಆಕೆಯನ್ನು ಆರಾಧಿಸುವ ಅಭಿಮಾನಿ ಬಳಗಕ್ಕೇನು ಕಡಿಮೆ ಇಲ್ಲ. ಆಕೆಗೆ ಎರಡು ವರ್ಷದ ಮಗ ಲಿಯೊನಾರ್ಡೋ ಇದ್ದಾನೆ. ಈಗ ತಾನು ಮತ್ತೊಮ್ಮೆ ಗರ್ಭಿಣಿ ಎಂದು ಪೆನಲೊಪ್ ಘೋಷಿಸಿದ್ದಾರೆ.

English summary
Hollywood actress Penelope Cruz strips off for shooting an intimate scene with Emile Hirsch for Italian film Venuto al Mondo which means ‘Twice Born’.
Please Wait while comments are loading...