»   » ಪೆನೆಲೋಪ್ ಕ್ರೂಸ್ ಅತ್ಯಂತ ಸೆಕ್ಸಿ (ಜೀವಂತ) ಮಹಿಳೆ

ಪೆನೆಲೋಪ್ ಕ್ರೂಸ್ ಅತ್ಯಂತ ಸೆಕ್ಸಿ (ಜೀವಂತ) ಮಹಿಳೆ

Posted By:
Subscribe to Filmibeat Kannada

ಸ್ಪ್ಯಾನಿಷ್ ತಾರೆ ಪೆನೆಲೋಪ್ ಕ್ರೂಸ್ ಅವರನ್ನು ಅತ್ಯಂತ ಸೆಕ್ಸಿ ಮಹಿಳೆಯಾಗಿ ಎಸ್ಕ್ವಯರ್ ನಿಯತಕಾಲಿಕೆ ಆಯ್ಕೆ ಮಾಡಿದೆ. ಇದುವರೆಗೂ ಅತ್ಯಂತ ಸೆಕ್ಸಿ ಪಟ್ಟವನ್ನು 11 ಮಂದಿ ಮಹಿಳೆಯರು ತಮ್ಮ ಮುಡಿಗೇರಿಸಿಕೊಂಡಿದ್ದರು.

ಇದೀಗ ನಲವತ್ತರ ಹರೆಯದ ಪೆನೆಲೋಪ್ ಅವರು ಈ ಸೆಕ್ಸಿ ಕಿರೀಟವನ್ನು ಧರಿಸಿದ್ದಾರೆ. ಕಳೆದ ವರ್ಷ ಅತ್ಯಂತ ಸೆಕ್ಸಿ ಮಹಿಳೆಯಾಗಿ ನಟಿ ಸ್ಕ್ರಾರ್ಲೆಟ್ ಜಾನ್ಸನ್ ಅವರು ಆಯ್ಕೆಯಾಗಿದ್ದರು. ಇನ್ನೂ ಹಿಂದಕ್ಕೆ ಹೋದರೆ ಏಂಜಲೀನಾ ಜೋಲಿ, ರಿಹಾನಾ, ಚಾರ್ಲೆಜ್ ಥೆರಾನ್ ಹಾಗೂ ಹೇಲ್ ಬೆರ್ರಿ ಸಿಗುತ್ತಾರೆ. [ಫೋರ್ಬ್ಸ್ ಪಟ್ಟಿ: ಮಾಡೆಲಿಂಗ್ ಜಗತ್ತಿನ ರಾಣಿಯರು]


ರೂಪದರ್ಶಿ ಕಮ್ ನಟಿಯಾಗಿರುವ ಪೆನೆಲೋಪ್ ತಮ್ಮ ಮುಂದಿನ ಚಿತ್ರ 'ಮಾ ಮಾ' ಶೂಟಿಂಗ್ ಮುಗಿಸಿದ್ದಾರೆ. ಇನ್ನು ತಾವು ಚಿತ್ರಗಳನ್ನು ಕಡಿಮೆ ಮಾಡುತ್ತಾ, ಆದಷ್ಟು ಕುಟುಂಬದ ಕಡೆಗೆ ಹೆಚ್ಚು ಗಮನಕೊಡುತ್ತೇನೆ ಎಂದಿದ್ದಾರೆ.

ತಾವು ಸಸ್ಯಾಹಾರಿ ಎಂದು ಹೇಳಿಕೊಳ್ಳುವ ಪೆನೆಲೋಪ್ ಕ್ರೂಸ್ ಅವರು ಕ್ಯಾಥೋಲಿಕ್ ಆಗಿ ಬೆಳೆದರೂ ಬೌದ್ಧಧರ್ಮದ ಕಡೆಗೆ ಆಕರ್ಷಿತರಾದವರು. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ಪೆನೆಲೋಪ್ 1997ರಲ್ಲಿ ಎರ‍ಡು ತಿಂಗಳು ಉಗಾಂಡಾದಲ್ಲಿ ಸ್ವಯಂ ಸೇವಕಿಯಾಗಿ ಕಾರ್ಯನಿರ್ವಹಿಸಿದ್ದರು. (ಏಜೆನ್ಸೀಸ್)

English summary
Spanish actress Penelope Cruz has been named as the sexiest woman alive by a magazine. The 40-year-old star is the 11th woman to be given the title by Esquire magazine.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada