twitter
    For Quick Alerts
    ALLOW NOTIFICATIONS  
    For Daily Alerts

    ಅತ್ಯುತ್ತಮ ಸಾಕ್ಷ್ಯಚಿತ್ರ (ಶಾರ್ಟ್) ಆಸ್ಕರ್ ಪ್ರಶಸ್ತಿ ಪಡೆದ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್'

    |

    91ನೇ ಅಕಾಡೆಮಿ ಪ್ರಶಸ್ತಿಗಳ ಸಾಕ್ಷ್ಯಚಿತ್ರ ವಿಭಾಗದಲ್ಲಿ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಅತ್ಯುತ್ತಮ ಸಾಕ್ಷ್ಯಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.

    ಅತ್ಯುತ್ತಮ ಸಾಕ್ಷ್ಯಚಿತ್ರ ವಿಭಾಗದಲ್ಲಿ ಒಟ್ಟು ಹತ್ತು ಚಿತ್ರಗಳು ಆಯ್ಕೆಯಾಗಿದ್ದು, ಈ ಚಿತ್ರಗಳ ಪೈಕಿ 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಸಿನಿಮಾಗೆ ಪ್ರಶಸ್ತಿ ಪಡೆದಿದೆ. ಈ ವಿಭಾಗದಲ್ಲಿ 'ಎಂಡ್ ಗೇಮ್', 'ಬ್ಲಾಕ್ ಶಿಪ್', 'ಎ ನೈಟ್ ಅಟ್ ದಿ ಗಾರ್ಡನ್', 'ಲೈಫ್ ಬೋಟ್' ಚಿತ್ರಗಳು ಪ್ರಮುಖವಾಗಿದ್ದವು. ಇಲ್ಲಿ ಒಟ್ಟು 104 ಸಾಕ್ಷ್ಯಚಿತ್ರಗಳು ಪ್ರವೇಶ ಪಡೆದುಕೊಂಡಿತ್ತು.

    The Oscars LIVE : ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ರೋಮಾ The Oscars LIVE : ಅತ್ಯುತ್ತಮ ವಿದೇಶಿ ಭಾಷಾ ಚಿತ್ರ ರೋಮಾ

    ಅಂದಹಾಗೆ, 'ಪಿರಿಯಡ್ ಎಂಡ್ ಆಫ್ ಸೆಂಟೆನ್ಸ್' ಡಾಕ್ಯೂಮೆಂಟರಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಸುವ ಯಂತ್ರಗಳನ್ನು ರೂಪಿಸಿದ ಮುರುಗನಂಥಮ್ ಅವರ ಕಥೆಯನ್ನ ಆಧರಿಸಿ ಮಾಡಲಾಗಿದೆತ್ತು. ಅಮೆರಿಕನ್ ನಿರ್ದೇಶಕ ರಾಯಕಾ ಖೆತಾಬ್ಚಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

    Period End of Sentence wins the Oscar for Best Documentary Award (Short).

    ಆಸ್ಕರ್ ಪ್ರಶಸ್ತಿ ಪಡೆದ ರಾಯಕಾ ಖೆತಾಬ್ಚಿ ''ಮುಟ್ಟಿನ ವಿಷಯದ ಮೇಲೆ ಮಾಡಿದ ಸಿನಿಮಾಗೆ ಆಸ್ಕರ್ ಪ್ರಶಸ್ತಿ ಬಂದಿದೆ ಎಂದು ನಂಬಲು ಸಾಧ್ಯ ಆಗುತ್ತಿಲ್ಲ.'' ಎಂದು ತಮ್ಮ ಸಂತಸ ವ್ಯಕ್ತ ಪಡಿಸಿದ್ದಾರೆ.

    'ಲಂಚ್ ಬಾಕ್ಸ್' ಮತ್ತು 'ಮಸಾನ್' ಅಂತಹ ಸಿನಿಮಾಗಳನ್ನ ನಿರ್ಮಿಸಿದ ಸಿಖ್ಯಾ ಎಂಟರ್ ಟೈನ್ಮೆಂಟ್ ಈ ಚಿತ್ರದ ಸಹ ನಿರ್ಮಾಣದ ವಹಿಸಿದೆ. ಅಂದಹಾಗೆ, 91ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭವು ಹಾಲಿವುಡ್ ನ ಡಾಲ್ಬಿ ಥಿಯೇಟರ್ ನಲ್ಲಿ ನಡೆದಿದೆ.

    ಆಸ್ಕರ್ ಅಂತಿಮ ಪಟ್ಟಿಗೆ ಆಯ್ಕೆಯಾದ 'ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್' ಆಸ್ಕರ್ ಅಂತಿಮ ಪಟ್ಟಿಗೆ ಆಯ್ಕೆಯಾದ 'ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್'

    ಇನ್ನು ವರ್ಷಗಳ ಹಿಂದೆ ಇದೇ ವಿಷಯದ ಬಗ್ಗೆ ಅಕ್ಷಯ್ ಕುಮಾರ್ 'ಪ್ಯಾಡ್ ಮ್ಯಾನ್' ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾಗೆ ದೊಡ್ಡ ಪ್ರಶಂಸೆ ವ್ಯಕ್ತವಾಗಿತ್ತು.

    English summary
    The Oscar winners 2019: Period End of Sentence wins the Oscar for Best Documentary Award. 'Period End of Sentence' is an india based documentary directed by Rayka Zehtabchi.
    Monday, February 25, 2019, 10:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X