»   » 2013: ಬಹು ನಿರೀಕ್ಷಿತ ಚಿತ್ರಗಳ ಪಟ್ಟಿ ಬಹಿರಂಗ

2013: ಬಹು ನಿರೀಕ್ಷಿತ ಚಿತ್ರಗಳ ಪಟ್ಟಿ ಬಹಿರಂಗ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

2013ರ ಹಾಲಿವುಡ್ ನ ಮೊದಲ ಅರ್ಧ ಬಹುತೇಕ ಮುಗಿಯುತ್ತಾ ಬಂದಿದೆ. ಹಲವು ಥ್ರಿಲ್ಲರ್ ಗಳನ್ನು ಈ ಅವಧಿಯಲ್ಲಿ ನೋಡಿ ಜನ ನಿಜಕ್ಕೂ ಖುಷಿಪಟ್ಟಿದ್ದರು. ಐರಾನ್ ಮ್ಯಾನ್ 3, ಸ್ಟಾರ್ ಟ್ರೆಕ್: ಇನ್ ಟು ಡಾರ್ಕ್ ನೆಸ್, ಫಾಸ್ಟ್ ಅಂಡ್ ಫ್ಯೂರಿಯಸ್ 6, ಮ್ಯಾನ್ ಆಫ್ ಸ್ಟೀಲ್, ದಿ ಗ್ರೇಟ್ ಗಟ್ಸ್ ಬಿ, ಒಬ್ಲಿವಿಯಾನ್, ದಿ ಹ್ಯಾಂಗೋವರ್ ಭಾಗ 3 ಹಾಗೂ ವರ್ಲ್ಡ್ ವಾರ್ ಜಡ್ ಪ್ರೇಕ್ಷರನ್ನು ಸೆಳೆಯುವಲ್ಲಿ ಸಫಲವಾಗಿತ್ತು.

ಡಿಸೆಂಬರ್ ತನಕ ಇನ್ನೂ ಅನೇಕ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಈಗಾಗಲೆ ಇಂಟರ್ನೆಟ್ ನಲ್ಲಿ ಚಿತ್ರಗಳ ಪ್ರೊಮೊ, ಟ್ರೇಲರ್, ಟೀಸರ್ ಗಳು ಹರಿದಾಡುತ್ತಿವೆ.

ಸರಿ ಸುಮಾರು 30ಕ್ಕೂ ಅಧಿಕ ಬಿಗ್ ಬಜೆಟ್ ಚಿತ್ರಗಳು ತೆರೆಗೆ ಅಪ್ಪಳಿಸಲು ಸಿದ್ಧವಾಗಿವೆ. ಹಲವು ಚಿತ್ರಗಳು ಪೋಸ್ಟ್ ಪ್ರೊಡೆಕ್ಷನ್ ನಲ್ಲಿವೆ. ಈ ಬಾರಿ ಹಲವು ಹಿಟ್ ಚಿತ್ರಗಳ ಮುಂದುವರೆದ ಭಾಗಗಳು ತೆರೆ ಕಾಣಲಿರುವುದರಿಂದ ಪ್ರೇಕ್ಷಕರಲ್ಲಿ ಸಹಜವಾಗಿ ಕಾತುರ ಹೆಚ್ಚಿದೆ.

2013ರ ಮುಂಬರುವ ಹಾಲಿವುಡ್ ಚಿತ್ರಗಳ ಮುನ್ನೋಟ, ಚಿತ್ರ ತಂಡ, ಇನ್ನಿತರ ವಿವರಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ..

ವೈಟ್ ಹೌಸ್ ಡೌನ್

ವೈಟ್ ಹೌಸ್ ಡಾನ್: ಅಮೆರಿಕನ್ ಸಾಹಸಭರಿತ ಚಿತ್ರ. ಅಮೆರಿಕದ ಶ್ವೇತಭವನಕ್ಕೆ ಅತಿಕ್ರಮಿಗಳು ನುಗ್ಗಿದಾಗ ಅಧ್ಯಕ್ಷ ಸೇರಿದಂತೆ ತನ್ನ ಮಗುವನ್ನು ರಕ್ಷಿಸುವ ಹೊಣೆ ನಾಯಕನ ಮೇಲೆ ಬೀಳುತ್ತದೆ. ನಾಯಕ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನಾಗಿ ಅಂತ್ಯ ಹಾಡುತ್ತಾನೆ. ಜೂ.28ಕ್ಕೆ ವಿಶ್ವದಾದ್ಯಂತ ಬಿಡುಗಡೆಗೊಂಡು ಯಶಸ್ವಿ ಪ್ರದರ್ಶನ ಕಾಣುತ್ತಿದೆ.

* ನಿರ್ದೇಶನ: ರೋಲ್ಯಾಂಡ್ ಎಮ್ಮೆರಿಚ್
* ತಾರಾಗಣ: ಚಾನಿಂಗ್ ಟಾಟಂ, ಜೇಮ್ಮಿ ಫಾಕ್ಸ್, ಮೆಗ್ಗಿ ಗಿಲೆನ್ ಹಾಲ್, ಜಾಸನ್ ಕ್ಲಾರ್ಕ್,
* ಚಿತ್ರದ ಅವಧಿ: 131 ನಿಮಿಷ

ದಿ ಲೋನ್ ರೇಂಜರ್

ದಿ ಲೋನ್ ರೇಂಜರ್ ಹೆಸರಿನ ರೇಡಿಯೋ ಸರಣಿ ಆಧಾರಿತ ಅಮೆರಿಕದ ಸಾಹಸಮಯ ಚಿತ್ರ, ಜಾನ್ ರೈಡ್ ನ್ಯಾಯದ ಪ್ರತೀಕವಾಗಿ ಬೆಳದ ಕಥೆಯನ್ನು ಅಮೆರಿಕದ ಸಾಹಸಿ ಟೊಂಟೊ ಪುನರ್ ಮನನ ಮಾಡಿಕೊಳ್ಳುವ ಕಥೆವುಳ್ಳ ಚಿತ್ರ.
* ನಿರ್ದೇಶನ: ಗೋರ್ ವೆರ್ಬಿಂಸ್ಕಿ
* ತಾರಾಗಣ: ಜಾನಿ ಡೆಪ್, ಆರ್ಮಿ ಹಮ್ಮರ್, ಟಾಮ್ ವಿಲ್ಕಿನ್ಸನ್
* ಚಿತ್ರದ ಅವಧಿ: 149 ನಿಮಿಷ
* ಬಿಡುಗಡೆ ದಿನಾಂಕ : ಜುಲೈ 3, 2013

ಎಕ್ಸ್-ಮೆನ್

ಎಕ್ಸ್ ಮೆನ್ ಸರಣಿಯ 6 ನೇ ಕಂತಿನ ಕಥೆ ಹೇಳುವ ದಿ ವೊಲ್ವೆರಿನ್ ಸೂಪರ್ ಹೀರೋ ಚಿತ್ರ ಕಾಮಿಕ್ ಪಾತ್ರವಾದ ವೊಲ್ವೆರಿನ್ ನ ಕಥೆ ಆಧಾರಿಸಿದೆ. ನಾಯಕ ಆಧುನಿಕ ಜಗತ್ತಿನ ಭಾಗವಾದ ಜಪಾನ್ ನಲ್ಲಿ ತನ್ನ ಹಳೆ ವೈರಿಗಳನ್ನು ಎದುರುಗೊಳ್ಳುತ್ತಾನೆ ಇದು ಅವನ ಭವಿಷ್ಯಕ್ಕೆ ಹೇಗೆ ಮಾರಕವಾಗುತ್ತದೆ ನೋಡಿ..
* ನಿರ್ದೇಶನ: ಜೇಮ್ಸ್ ಮ್ಯಾನ್ ಗೋಲ್ಡ್
* ತಾರಾಗಣ: ಹ್ಯೂ ಜಾಕ್ಮನ್, ವಿಲ್ ಯೂನ್ ಲೀ, ಟೋ ಓಕಮೊಟೊ, ಫಾಮ್ಕೆ ಜಾನ್ಸೆನ್
* ಬಿಡುಗಡೆ ದಿನಾಂಕ : ಜುಲೈ 24, 2013

ದಿ ವರ್ಲ್ಡ್ಸ್ ಎಂಡ್

ದಿ ವರ್ಲ್ಡ್ಸ್ ಎಂಡ್ ಬ್ರಿಟಿಷ್ ಸೈನ್ಸ್ ಫಿಕ್ಸಿಂಗ್ ಕಾಮಿಡಿ ಚಿತ್ರ. ಐದು ಜನ ಗೆಳೆಯರು 20 ವರ್ಷಗಳ ನಂತರ ಒಂದಾಗಿ ಹಳೆ ಜಗಳ ಮರೆತು ಮುಂದೆ ಬೆರೆಯುತ್ತಾರೆ. ಮಾನವ ಜನಾಂಗ ಏಕೈಕ ಆಸರೆಯಾಗಿ ಹೇಗೆ ಬೆಳೆಯುತ್ತಾರೆ ಎಂಬುದು ಕಥಾನಕ.
* ನಿರ್ದೇಶನ: ಏದ್ಗಾರ್ ರೈಟ್
* ತಾರಾಗಣ: ಸೈಮನ್ ಪೆಗ್, ನಿಕ್ ಫ್ರೊಸ್ಟ್, ಮಾರ್ಟಿನ್ ಫ್ರೀಮನ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಜುಲೈ 19, 2013

ಪರ್ಸಿ ಜಾಕ್ಸನ್

2010ರಲ್ಲಿ ತೆರೆಕಂಡ ಪರ್ಸಿ ಜಾಕ್ಸನ್ & ದಿ ಒಲಿಂಪಿಯನ್ಸ್: ದಿ ಲೈಟಿಂಗ್ ಥೀಫ್ ಚಿತ್ರದ ಮುಂದುವರೆದ ಭಾಗ. ಸೀ ಆಫ್ ಮಾನ್ ಸ್ಟರ್ಸ್ ಫ್ಯಾಂಟಸಿ ಸಾಹಸ ಚಿತ್ರ. ಇದು ರಿಕ್ ರಿಯೊಡನ್ ಅವರ ಕೃತಿ ಆಧಾರಿಸಿದೆ.

ಪರ್ಸಿ ಜಾಕ್ಸನ್ (ಲೋಗನ್ ಲೆರ್ ಮನ್ ) ಹಾಗೂ ಗೆಳೆಯರು ದೈತ್ಯರ ಟೈಟುಲರ್ ಸಮುದ್ರದಲ್ಲಿ ಗೋಲ್ಡನ್ ಫ್ಲೀಸ್ ಹುಡುಕಿ ಮ್ಯಾಜಿಕಲ್ ಮರ ರಕ್ಷಣಿಸುವ ಕಥೆ ಇದರಲ್ಲಿದೆ.

* ನಿರ್ದೇಶನ: ಥಾರ್ ಫ್ರುಡೆಂಥಾಲ್
* ತಾರಾಗಣ: ಲೊಗಾನ್ ಲೆರ್ಮನ್,ಅಲೆಕ್ಸಾಂಡ್ರಾ ಡಾಡ್ಡರಿಯೋ, ಬ್ರಂದನ್ ಜಾಕ್ಸನ್, ನಾಥನ್ ಫಿಲಿಯೊನ್
* ಬಿಡುಗಡೆ ದಿನಾಂಕ : ಆಗಸ್ಟ್ 7, 2013

ಕಿಕ್-ಆಸ್ 2

ಕಿಕ್ ಆಸ್ 2 ಕಾಮಿಕ್ ಪುಸ್ತಕದ ಪಾತ್ರ ಹಾಗೂ ಹಿಟ್ ಗರ್ಲ್ ಕಥೆ ಹೊಂದಿದೆ. 2010ರ ಕಿಕ್ ಆಸ್ ಚಿತ್ರದ ಮುಂದುವರೆದ ಭಾಗ ಇದಾಗಿದೆ.

* ನಿರ್ದೇಶನ: ಜೆಫ್ ವಾಡ್ಲೌ
* ತಾರಾಗಣ: ಅರೋನ್ ಟೇಲರ್-ಜಾನ್ಸನ್, ಸಿ ಗ್ರೇಸ್ ಮಾರ್ಟ್ಜ್, ಕ್ರಿಸ್ಟೋಫರ್ ಮಿಂಟ್ಜ್ ಪ್ಲಾಸೆ, ಜಿಮ್ ಕ್ಯಾರಿ
* ಚಿತ್ರದ ಅವಧಿ: 113 ನಿಮಿಷ
* ಬಿಡುಗಡೆ ದಿನಾಂಕ : ಆಗಸ್ಟ್ 14, 2013

ಸಿನ್ ಸಿಟಿ: ಎ ಡೇಮ್ ಟು ಕಿಲ್ ಫಾರ್ ಸಿನ್ ಸಿಟಿ

2005 ರ ಸಿನ್ ಸಿಟಿ ಚಿತ್ರದ ಮುಂದುವರೆದ ಭಾಗ ಎ ಡೇಮ್ ಟು ಕಿಲ್ ಫಾರ್ ಸಿನ್ ಸಿಟಿ

* ನಿರ್ದೇಶನ: ಫ್ರಾಂಕ್ ಮಿಲ್ಲರ್ , ರಾಬರ್ಟ್ ರೋಡ್ರಿಗ್ರೇಜ್
* ತಾರಾಗಣ: ಜೆಸ್ಸಿಕಾ ಆಲ್ಬಾ, ಮಿಕಿ ರೊರ್ಕೆ, ರೊಸಾರಿಯೊ ಡಾಸನ್, ಇವಾ ಗ್ರೀನ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಆಗಸ್ಟ್ 22, 2013

ರಿಡ್ಡಿಕ್ ರಿಡ್ಡಿಕ್

ರೂಲ್ ದಿ ಡಾರ್ಕ್ ಸೈನ್ ಫಿಕ್ಸಿಂಗ್ ಸಾಹಸ ಚಿತ್ರ. ರಿಡ್ಡಿಕ್ ಸರಣಿಯ ಎರಡನೇ ಚಿತ್ರ. ಸೌರ ಪ್ರಭಾವವಿರುವ ಗ್ರಹದಲ್ಲಿ ಸಾಯುವ ಸ್ಥಿತಿಯಲ್ಲಿದ್ದ ನಾಯಕ ರಿಡ್ಡಿಕ್ ಅನ್ಯಗ್ರಹ ಜೀವಿಗಳ ಜೊತೆ ಹೇಗೆ ಸೆಣಸಾಡುತ್ತಾನೆ ಎಂಬುದು ಕಥಾ ಹಂದರ.
* ನಿರ್ದೇಶಕ: ಡೇವಿಡ್ ಟ್ವೊಹಿ
* ತಾರಾಗಣ: ವಿನ್ ಡೀಸೆಲ್, ಕರ್ಲ್ ಅರ್ಬನ್, ಕಾಟಿ ಸ್ಯಖೊಫ್, ಜೋರ್ಡಿ ಮೊಲ್ಲಾ
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಸೆಪ್ಟೆಂಬರ್ 6, 2013

ಕ್ಲೌಡಿ ವಿತ್ ಎ ಚಾನ್ಸ್ ಆಫ್ ಮೀಟ್ ಬಾಲ್ಸ್ 2

ಕಂಪ್ಯೂಟರ್ ಅನಿಮೇಟಡ್ ಕಾಮಿಡಿ ಚಿತ್ರ. 2009ರ ಕ್ಲೌಡಿ ಚಿತ್ರದ ಮುಂದುವರೆದ ಭಾಗ.
* ನಿರ್ದೇಶಕ: ಕೊಡಿ ಕೆಮರೂನ್, ಕ್ರಿಸ್ ಪರ್ನ್
* ತಾರಾಗಣ: ಬಿಲ್ ಹಾಡರ್, ಅನ್ನಾ ಫಾರಿಸ್, ವಿಲ್ ಫೊರ್ಟ್, ನೀಲ್ ಪ್ಯಾಟ್ರಿಕ್ ಹ್ಯಾರಿಸ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಸೆಪ್ಟೆಂಬರ್ 27, 2013

ಕ್ಯಾಪ್ಟರ್ನ್ ಫಿಲಿಫ್ಸ್

2009ರಲ್ಲಿ ಸೋಮಾಲಿ ಕಡಲ್ಗಳ್ಳರ ಕೈಗೆ ಸಿಕ್ಕಿಬಿದ್ದಿದ್ದ ಕ್ಯಾಪ್ಟನ್ ರಿಚರ್ಡ್ ಫಿಲಿಫ್ಸ್ ನೈಜ ಕಥೆ ಆಧಾರಿಸಿದ ಚಿತ್ರ.
* ನಿರ್ದೇಶಕ: ಪಾಲ್ ಗ್ರೀನ್ ಗ್ರಾಸ್
* ತಾರಾಗಣ: ಟಾಮ್ ಹಾಂಕ್ಸ್, ಕ್ಯಾಥರೀನ್ ಕೀನರ್, ಮ್ಯಾಕ್ಸ್ ಮಾರ್ಟಿನಿ, ಜನ್ ಮಾಗರೊ
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಅಕ್ಟೋಬರ್ 11, 2013

ದಿ ಕೌನ್ಸಿಲರ್

ವಕೀಲನೊಬ್ಬನ ಕಥೆಯುಳ್ಳ ಥ್ರಿಲ್ಲರ್ ಚಿತ್ರ ದಿ ಕೌನ್ಸಿಲರ್. ಡ್ರಗ್ಸ್ ಮಾಫಿಯಾಗೆ ಸಿಲುಕಿದ ವಕೀಲ ಹೇಗೆ ಹೊರ ಬರುತ್ತಾನೆ ಎಂಬುದು ಕಥೆ.
* ನಿರ್ದೇಶಕ: ರಿಡ್ಲೆ ಸ್ಕಾಟ್
* ತಾರಾಗಣ: ಬ್ರಾಡ್ ಪಿಟ್, ಗೊರಾನ್ ವಿಸ್ನ್ ಜಿಕ್, ಮೈಕಲ್ ಫಾಸ್ ಬೆನ್ಡರ್, ಜಾವಿಯರ್ ಬಾರ್ಡೆಮ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಅಕ್ಟೋಬರ್ 25, 2013

ಥಾರ್: ದಿ ಡಾರ್ಟ್ ವರ್ಲ್ಡ್ ಥಾರ್

ಕಾಮಿಕ್ ಪಾತ್ರ ಥಾರ್ ಆಧಾರಿತ ಚಿತ್ರ 2011ರ ಚಿತ್ರದ ಮುಂದುವರೆದ ಭಾಗ. 8 ಭಾಗಗಳಲ್ಲಿ ಚಿತ್ರವನ್ನು ಹೊರ ತರಲಾಗುತ್ತದೆ.
* ನಿರ್ದೇಶಕ: ಅಲಾನ್ ಟೇಲರ್
* ತಾರಾಗಣ: ಕ್ರಿಸ್ ಹೆಮ್ಸ್ ವರ್ಥ್, ನಾತಾಲಿ ಪೊರ್ಟ್ ಮನ್, ಕ್ರಿಸ್ಟೊಫರ್ ಎಕ್ಸ್ ಲೆಸ್ಟನ್, ಅಂಟೋನಿ ಹಾಪ್ಕಿನ್ಸ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ನವೆಂಬರ್ 8 , 2013

ದಿ ಹಂಗರ್ ಗೇಮ್ಸ್

ಕ್ಯಾಚಿಂಗ್ ಫೈರ್ ದಿ ಹಂಗರ್ ಗೇಮ್ಸ್: ಸೈನ್ಸ್ ಫಿಕ್ಷನ್ ಸಾಹಸ ಚಿತ್ರ ಸುಜಾನ್ ಕಾಲಿನ್ ಅವರ 'ಕ್ಯಾಚಿಂಗ್ ಫೈರ್' ಕೃತಿ ಆಧಾರಿತ ಚಿತ್ರ. ಮೂರು ಚಿತ್ರಗಳ ಸರಣಿಯ ಎರಡನೇ ಚಿತ್ರ ಇದು.
* ನಿರ್ದೇಶನ: ಫ್ರಾನ್ಸಿಸ್ ಲಾರೆನ್ಸ್

* ತಾರಾಗಣ: ಜೆನ್ನಿಫರ್ ಲಾರೆನ್ಸ್, ಜೋಸ್ ಹಚರ್ಸನ್, ಲಿಯಾಮ್ ಹೆಮ್ಸ್ ವರ್ಥ್, ಫಿಲಿಫ್ಸೆಯೊ ಮೌರ್ ಹಾಫಮನ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ನವೆಂಬರ್ 11, 2013

ದಿ ಹಾಬಿಟ್

ಡಿಸ್ಲೊಲೇಷನ್ ಆಫ್ ಸ್ಮೌಗ್ ದಿ ಹಾಬಿಟ್- ಐತಿಹಾಸಿಕ ಸಾಹಸಭರಿತ ಚಿತ್ರ. 1937ರ ಜೆಅರ್ಆರ್ ಟೊಕಿನ್ಸ್ 'ದಿ ಹಾಬಿಟ್' ಕಾದಂಬರಿ ಆಧಾರಿತ ಚಿತ್ರದ ಎರಡನೇ ಆವೃತ್ತಿ ಇದಾಗಿದೆ.
ಡ್ವರ್ವ್ಸ್, ಬಿಲ್ಬೊ, ಗ್ಯಾಂಡಾಲ್ಫ್ ಅವರು ಮಿಸ್ಟಿ ಪರ್ವತದಿಂದ ಎಸ್ಕೇಪ್ ಆಗುತ್ತಾರೆ. ಡ್ರ್ಯಾಗನ್ ನಿಂದ ಚಿನ್ನ ತರುವ ಪಣ ತೊಟ್ಟ ಬಿಲ್ಬೊ ಕಥೆ ಏನಾಗುತ್ತದೆ ತೆರೆಯ ಮೇಲೆ ನೋಡಿ
* ನಿರ್ದೇಶನ: ಪೀಟರ್ ಜಾಕ್ಸನ್
* ತಾರಾಗಣ: ಮಾರ್ಟಿನ್ ಫ್ರೀಮನ್, ಇಯಾನ್ ಮೆಕ್ ಕೆಲನ್, ರಿಚರ್ಡ್ ಆರ್ಮಿಟ್ಯಾಗ್, ಎಲಿಜಿಹಾ ವುಡ್
* ಚಿತ್ರದ ಅವಧಿ: 123 ನಿಮಿಷ
* ಬಿಡುಗಡೆ ದಿನಾಂಕ : ಡಿಸೆಂಬರ್ 13, 2013

ರಶ್

1976 ಫಾರ್ಮೂಲಾ ಒನ್ ಸೀಸನ್ ಜೇಮ್ಸ್ ಹಂಟ್ ಹಾಗೂ ನಿಕಿ ಲೌಡಾ ನಡುವಿನ ವೈರುದ್ಧದ ನೈಜ ಕಥೆ ಆಧಾರಿತ ಚಿತ್ರ
* ನಿರ್ದೇಶನ: ರಾನ್ ಹಾವರ್ಡ್
* ತಾರಾಗಣ: ಡೇನಿಯಲ್ ಬ್ರುಹಲ್, ಕ್ರಿಸ್ ಹೆಮ್ಸ್ ವರ್ಥ್, ಒಲಿವಿಯಾ ವೈಲ್ಡ್
* ಚಿತ್ರದ ಅವಧಿ: 123 ನಿಮಿಷ
* ಬಿಡುಗಡೆ ದಿನಾಂಕ : ಸೆಪ್ಟೆಂಬರ್ 2೦, 2013

ಜಾಕ್ ರಿಯಾನ್

CIA ಅನಾಲಿಸ್ಟ್ ಜಾಕ್ ರಿಯಾನ್ ಕಥೆ ಆಧಾರಿಸಿದ ಅಮೆರಿಕದ ಸಾಹಸಭರಿತ ಚಿತ್ರ. ಭಯೋತ್ಪಾದನೆ ಮೂಲಕದ ಅಮೆರಿಕದ ಆರ್ಥಿಕತೆಗೆ ಧಕ್ಕೆ ತರಲು ಯತ್ನಿಸುವ ರಷ್ಯಾದ ಪ್ರಯತ್ನ ವಿಫಲಗೊಳಿಸುವುದು ಜಾಕ್ ರಿಯಾನ್ ಗೆ ಸವಾಲೆನಿಸುತ್ತದೆ.
* ನಿರ್ದೇಶನ: ಕೆನ್ನೆತ್ ಬ್ರಾನಗ್
* ತಾರಾಗಣ: ಕ್ರಿಸ್ ಪೈನ್, ಕೆವಿನ್ ಕಾಸ್ನತ್, ಕೈರಾ ನೈಟ್ಲಿ, ಕೆನ್ನಿತ್ ಬ್ರಾನಾಗ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಡಿಸೆಂಬರ್ 25, 2013

300: ರೈಸ್ ಆಫ್ ಎನ್ ಎಂಪೈರ್

2007 ರಲ್ಲಿ ತೆರೆಕಂಡ 300 ಚಿತ್ರದ ಮುಂದುವರೆದ ಭಾಗ ರೈಸ್ ಆಫ್ ಆನ್ ಎಂಪೈರ್. ಸ್ವಯಂಘೋಷಿತ ದೇವ ಕ್ಸೆರ್ಕಸ್(Xerxes) ಪರ್ಷಿಯನ್ ಪಡೆ ಗ್ರೀಕ್ ಮೇಲೆ ಅಕ್ರಮಣ ಮಾಡಿದಾಗ ಗ್ರೀಕ್ ಜನರಲ್ ಥೆಮಿಸ್ಟೊಕ್ಲೆಸ್ ನಡೆಸುವ ಕಾದಾಟದ ಕಥೆ ಇದಾಗಿದೆ.
* ನಿರ್ದೇಶನ: ನೊಮ್ ಮರೊ
* ತಾರಾಗಣ: ಸುಲಿವನ್ ಸ್ಟಾಪ್ಲ್ಟ, ರೊಡ್ರಿಗೊ ಸ್ಯಾಟೊರೊ, ಇವಾ ಗ್ರೀನ್, ಜಾಕ್ ಓ ಕಾನೆಲ್
* ಚಿತ್ರದ ಅವಧಿ: -
* ಬಿಡುಗಡೆ ದಿನಾಂಕ : ಡಿಸೆಂಬರ್ 27, 2013

English summary
The first half of the year 2013 is almost over and in this period, Hollywood has released many amazing thrillers, movies like Iron Man 3, Star Trek: Into Darkness, Fast & Furious 6, Man of steel, The Great Gatsby, Oblivion, The Hangover Part III and World War Z. There are more than 30 big-budget movies, which are in the post-production stage and set to hit the screens worldwide in the coming months
Please Wait while comments are loading...