ಎಂಬತ್ತಾರರ 'ಪ್ಲೇಬಾಯ್'ಗೆ ಮೂರನೆ ಮದುವೆ

ಎಂಬತ್ತಾರರ ಹರೆಯದ ಹೇಫನರ್ ಈಗಾಗಲೆ ಎರಡು ಮದುವೆಯಾಗಿ ಇಬ್ಬರಿಗೂ ಸೋಡಾಚೀಟಿ ಕೊಟ್ಟಿದ್ದಾರೆ. ಈಗ ಈ ಮುದುಕ ಮೂರನೇ ಮದುವೆಗೆ ರೆಡಿಯಾಗುತ್ತಿದ್ದಾನೆ. ಈತ ಮದುವೆಯಾಗುತ್ತಿರುವ ಹುಡುಗಿಯ ವಯಸ್ಸು ಇನ್ನೂ ಕೇವಲ 26ರ ಪ್ರಾಯ.
ಕ್ರಿಸ್ಟಲ್ ಹ್ಯಾರೀಸ್ ಎಂಬ ಈಕೆ 2009ರಿಂದ ಹೇಪನರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರಂತೆ. ಈಗಾಗಲೆ ಇವರಿಬ್ಬರಿಗೂ ನಿಶ್ಚಿತಾರ್ಥವೂ ಆಗಿ ಎಲ್ಲವೂ ಮುಗಿದಿದೆ. ಇನ್ನೇನಿದ್ದರೂ ಮದುವೆಯೊಂದು ಬಾಕಿ ಇದೆ ಅಷ್ಟೇ.
'ಪ್ಲೇಬಾಯ್' ಪತ್ರಿಕೆಯ ಹೆಸರಿಗೆ ತಕ್ಕಂತೆ ಹೇಫನರ್ ಕೂಡ ಭೋಗಜೀವಿ. ಈಗಾಗಲೆ ಎಷ್ಟೋ ಮಂದಿ ಲಲನೆಯರ ಜೊತೆ ಡೇಟಿಂಗ್ ಮಾಡಿದ್ದಾರೆ. ಪ್ಲೇಬಾಯ್ ಪತ್ರಿಕೆಗಾಗಿ ಬಟ್ಟೆ ಬಿಚ್ಚಲು ಬರುವ ತಾರೆಯ ಜೊತೆ ಸರಸವಾಡಿದ್ದಾರೆ ಎಂಬ ಘನಘೋರ ಆರೋಪಗಳು ಇವೆ.
'ಪ್ಲೇಬಾಯ್' ಪತ್ರಿಕೆಗಾಗಿ ಒಪ್ಪಂದ ಮಾಡಿಕೊಳ್ಳುವ ತಾರೆಗಳ ಜೊತೆ ಮೊದಲೇ ಈತ ಡೀಲ್ ಮಾಡಿಕೊಳ್ಳುತ್ತಿದ್ದ ಎಂಬ ಇನ್ನೊಂದು ಸುದ್ದಿಯೂ ಇದೆ. ಭಾರತದ ರೂಪದರ್ಶಿ ಕಮ್ ತಾರೆ ಶೆರ್ಲಿನ್ ಚೋಪ್ರಾ ಪ್ಲೇಬಾಯ್ ಪತ್ರಿಕೆಗಾಗಿ ನಗ್ನವಾಗುವುದಕ್ಕೂ ಮುನ್ನ ತಮ್ಮ ಸರ್ವಸ್ವವನ್ನೂ ಈತನಿಗೆ ಅರ್ಪಿಸಿದ್ದರು ಎಂಬುದು ಬೇರೆ ಮಾತು.
ಈಗ ಹೇಫನರ್ ಅವರನ್ನು ವರಿಸುತ್ತಿರುವ ಕ್ರಿಸ್ಟರ್ ಎಂಬ ಹುಡುಗಿಯೂ ಒಂದು ಕಾಲದಲ್ಲಿ ಪ್ಲೇಬಾಯ್ ಗಾಗಿ ಸರ್ವಸ್ವವನ್ನೂ ಧಾರೆ ಎರೆದವರು. ಎಷ್ಟೋ ಯುವತಿಯರು ಈತನ ಹಿಂದೆ ಬೀಳಲು ಈತನ ಕೈಯಲ್ಲಿರು 'ಪ್ಲೇಬಾಯ್' ಎಂಬ ಪ್ರಬಲ ಅಸ್ತ್ರವೇ ಕಾರಣ ಎನ್ನಲಾಗಿದೆ. (ಏಜೆನ್ಸೀಸ್)


Click it and Unblock the Notifications











