»   » ಪಾಪ್ ಗಾಯಕಿ ಮಡೋನ್ನಾ ನಗ್ನ ಚಿತ್ರಕ್ಕೆ 15K ಪೌಂಡ್

ಪಾಪ್ ಗಾಯಕಿ ಮಡೋನ್ನಾ ನಗ್ನ ಚಿತ್ರಕ್ಕೆ 15K ಪೌಂಡ್

Posted By:
Subscribe to Filmibeat Kannada
Madonna
ಬ್ರಿಟ್ನಿ ಸ್ಪಿಯರ್ಸ್ ಜೊತೆ ಲಿಪ್‌ಲಾಕ್ ಚುಂಬನಕ್ಕೆ ತಹತಹಿಸುತ್ತಿದ್ದ ಪಾಪ್ ಗಾಯಕಿ ಮಡೋನ್ನಾಳ ಟಾಪ್‌ಲೆಸ್ ಫೋಟೋಗಳು ಆನ್‌ಲೈನಲ್ಲಿ ಲೀಕ್ ಆಗುವುದು ಮಾಮೂಲಿ. ಆದರೆ, ಕಳೆದು ತಿಂಗಳು ಹರಾಜಿಕ್ಕಿಟ್ಟಿದ್ದ ಮಡೋನ್ನಾಳ ಕಪ್ಪು ಬಿಳುಪಿನ ನಗ್ನ ಚಿತ್ರ ಬೃಹತ್ ಮೊತ್ತಕ್ಕೆ ಬಿಕರಿಯಾಗಿದೆ.

ಪಾಪ್ ರಾಣಿ ಮಡೋನ್ನಾ ಸಿಗೆರೇಟ್ ಸೇದುತ್ತಾ ಮಂಚದ ಮೇಲೆ ಬೆತ್ತಲೆಯಾಗಿ ಪೋಸು ಕೊಟ್ಟಿರುವ ಚಿತ್ರ ಸುಮಾರು 15,000 ಪೌಂಡ್‌ ಗಳಿಗೆ ಮಾರಾಟವಾಗಿದೆ. 1990ರಲ್ಲಿ blonde ಲುಕ್ ಕೂದಲಿನ ಕಪ್ಪು ಕಣ್ಣು ಮೇಕಪ್ಪಿನ ಚಿತ್ರ ಹರಾಜಿಗಿಟ್ಟಿದ್ದ ಮೊತ್ತಕ್ಕಿಂತ ಮೂರು ಪಟ್ಟು ಅಧಿಕ ಮೌಲ್ಯಕ್ಕೆ ಮಾರಾಟವಾಗಿದೆ.

ಅದೊಂದು ಕಪ್ಪುಬಿಳುಪು ಚಿತ್ರವಾಗಿದ್ದು, ಮಡೊನ್ನಾ ತನ್ನ ಎದೆಯನ್ನು ಪ್ರದರ್ಶಿಸಿದ್ದು, ಕೆಳಭಾಗವನ್ನು ತೆಳು ಕಾಗದದಿಂದ ಸುತ್ತಿಕೊಂಡು ಮಂಚದ ಮೇಲೆ ಮಲಗಿರುವ ದೃಶ್ಯವನ್ನು ಕ್ಲಿಕ್ಕಿಸಲಾಗಿತ್ತು. ಆಕೆ ತನ್ನ ತುಟಿಗಳನ್ನು ಮುಂದಕ್ಕೆ ಚಾಚಿ ಸಿಗರೇಟು ಸೇದುತ್ತಿದ್ದಳು ಮತ್ತು ಮಾದಕವಾಗಿ ಪೋಸು ನೀಡಿದ್ದಳು.

21.5 X 19 ಇಂಚು ಅಳತೆಯ ಮೂಲ ಚಿತ್ರವನ್ನು ವ್ಯಾಪಾರಿಯೊಬ್ಬ ನ್ಯೂಯಾರ್ಕ್ ಗ್ಯಾಲರಿಯಿಂದ ಖರೀದಿಸಿದ್ದ. ಸ್ಟೀವನ್ ಮೀಸೆಲ್ ಎಂಬಾತ ಈ ಫೊಟೊವನ್ನು ಹರಾಜು ಕೂಗಿ ಈಗ ಖರೀದಿಸಿದ್ದಾನೆ.

ಈ ಚಿತ್ರವನ್ನು ಖರೀದಿಸಿರುವ ಛಾಯಾಚಿತ್ರಗ್ರಾಹಕ 1992 ರಲ್ಲಿ ಮಡೊನ್ನಾ 'ಸೆಕ್ಸ್' ಎಂಬ ಪುಸ್ತಕಕ್ಕಾಗಿ ಈ ರೀತಿ ಫೋಟೋ ತೆಗೆಯಲಾಗಿತ್ತು. ನ್ಯೂಯಾರ್ಕ್ ನಲ್ಲಿ 14,761 ಪೌಂಡಿಗೆ ಆತ ಮಾರಾಟ ಮಾಡಿದ್ದಾನೆ ಎಂದು ಡೈಲಿಮೇಲ್ ಪ್ರಕಟಿಸಿದೆ. 30ರ ಹರೆಯದಲ್ಲಿದ್ದ ಮಡೋನ್ನಾಳ ಈ ಫೋಟೋ ಈಗಲೂ ಜನಪ್ರಿಯತೆ ಉಳಿಸಿಕೊಂಡಿರುವುದು ಹಲವರ ಹುಬ್ಬೇರಿಸಿದೆ.

English summary
pop queen Madonna's photograph of posing naked on a bed and smoking a cigarette has sold for nearly £15,000. Madonna's photo taken in late 90's can be seen with a bleach-blonde hair and dark eye make-up reports Dailymail.
Please Wait while comments are loading...