ಅನುಮಾನಾಸ್ಪದವಾಗಿ ಸಾವಿಗೀಡಾದ ಖ್ಯಾತ ಪಾಪ್ ಗಾಯಕಿ

ದಕ್ಷಿಣ ಕೊರಿಯಾದ ಖ್ಯಾತ ಯುವ ಪಾಪ್ ಗಾಯಕಿ ಸಲ್ಲಿ ಅವರು ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಸೋಮವಾರ ಬೆಳಿಗ್ಗೆ ಸಿಯಾಂಗ್ ನಮ್ ನಲ್ಲಿರುವ ನಿವಾಸದಲ್ಲಿ 25 ವರ್ಷದ ಸಲ್ಲಿ ಅವರ ಪಾರ್ಥಿವ ಶರೀರ ಪತ್ತೆಯಾಗಿದೆ.

ಸಾವಿಗೆ ನಿಖರವಾದ ಕಾರಣ ಲಭ್ಯವಾಗಿಲ್ಲವಾದರೂ, ಗಾಯಕಿ ಸಲ್ಲಿ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಭಾನುವಾರ ರಾತ್ರಿ ಸಲ್ಲಿ ಅವರು ಮ್ಯಾನೇಜರ್ ಫೋನ್ ಕರೆಗೆ ಸಿಕ್ಕಿಲ್ಲ. ಇದರಿಂದ ಅನುಮಾನ ಬಂದ ಮ್ಯಾನೇಜರ್ ಮನೆ ಬಳಿ ಬಂದಿದ್ದರು. ಈ ವೇಳೆ ಸಲ್ಲಿ ನಿಧನವಾಗಿರುವ ವಿಷಯ ಗೊತ್ತಾಗಿದೆ.

ಕೆ ಪಾಪ್ ಆಕ್ಟ್ ಎಫ್ (ಎಕ್ಸ್) ಎಂಬ ಆಲ್ಬಂ ಮೂಲಕ ಸಲ್ಲಿ ಗುರುತಿಸಿಕೊಂಡಿದ್ದರು. ಆ ಬಳಿಕ ಸೌತ್ ಕೊರಿಯಾದಲ್ಲಿ ಸಲ್ಲಿ ಪ್ರಖ್ಯಾತಿ ಗಳಿಸಿಕೊಂಡರು. ಆರಂಭದಲ್ಲಿ ಹುಡುಗಿಯರ ತಂಡದಲ್ಲಿದ್ದ ಸಲ್ಲಿ 2015 ರಲ್ಲಿ ಗ್ರೂಪ್ ಬಿಟ್ಟು ಒಬ್ಬರೇ ಹಾಡಲು ಶುರು ಮಾಡಿದರು.

Recommended Video

ನಟಿ ಶ್ರೀದೇವಿ ಸಾವಿನ ವಿಷಯದಲ್ಲಿ ರಾಜಕುಮಾರ ಸಿನಿಮಾ ನಟಿ ಪ್ರಿಯ ಆನಂದ್ ಮೇಲೆ ಗಂಭೀರ ಆರೋಪ | FILMIBEAT KANNADA

Pop Singer Sulli Was Found Dead

ಪಾಪ್ ಗಾಯಕಿ ಮಾತ್ರವಲ್ಲ, ಈಕೆ ಕೆಲವು ಡ್ರಾಮಾ, ಆಲ್ಬಂಗಳಲ್ಲಿಯೂ ನಟಿಸಿದ್ದಾರೆ. ಸಲ್ಲಿ ಅವರ ಅಕಾಲಿಕ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ಇಷ್ಟು ಬೇಗ ಹೀಗೆ ಆಗಬಾರದಿತ್ತು ಎಂದು ಮರುಗಿದ್ದಾರೆ.

More from Filmibeat

English summary
South Korean popstar sulli found dead aged 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X