»   » ಪಾಪ್ ತಾರೆ ಮಡೋನಾ ಮೇಲೆ ಅತ್ಯಾಚಾರ

ಪಾಪ್ ತಾರೆ ಮಡೋನಾ ಮೇಲೆ ಅತ್ಯಾಚಾರ

Posted By:
Subscribe to Filmibeat Kannada

ಮೆಲ್ಬೋರ್ನ್, ಅ. 5: ಒಂದು ಕಾಲದ ಪಾಪ್ ಲೋಕದ ತಾರೆ ಮಡೋನಾ ನ್ಯೂಯಾರ್ಕ್ ನಗರಕ್ಕೆ ಬಂದಿದ್ದಾಗ ಚಾಕು ತೋರಿಸಿ ಅತ್ಯಾಚಾರ ಮಾಡಲಾಗಿತ್ತಂತೆ.

ಹೌದು ಆಗಿನ್ನೂ ಆಕೆ ಪಾಪ್ ದುನಿಯಾದಲ್ಲಿ ಅಷ್ಟೊಂದು ಚಾಲ್ತಿಗೆ ಬಂದಿರಲಿಲ್ಲ. ಉತ್ತಮ ಜೀವನವನ್ನರಸಿ ನ್ಯೂಯಾರ್ಕ್ ನಗರಕ್ಕೆ ಮೊದಲ ಬಾರಿಗೆ ಬಂದಿದ್ದಾಗ ಆ ಮಹಾನಗರವೇನೂ ಆಕೆಗೆ ರತ್ನಗಂಬಳಿ ಹಾಸಿ, ತುಂಬುತೋಳಿನ ಸ್ವಾಗತ ನೀಡಿರಲಿಲ್ವಂತೆ. ಬದಲಿಗೆ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತಂತೆ. ಅದೂ ಚಾಕೂ ತೋರಿಸಿ ಅತ್ಯಾಚಾರ ಮಾಡಲಾಗಿತ್ತಂತೆ.

Pop star Madonna revealed she suffered rape at knifepoint in New York

ಇದನ್ನೆಲ್ಲಾ ಸ್ವತಃ ಮಡೋನಾ ಅವರೇ ಹೇಳಿಕೊಂಡಿದ್ದಾರೆ. Harpers Bazaar magazineಗೆ ನೀಡಿರುವ ಸಂದರ್ಶನದಲ್ಲಿ 55 ವರ್ಷದ ಮಡೋನಾ ತನ್ನ ವೃತ್ತಿಜೀವನದ ಆರಂಭಿಕ ದಿನಗಳನ್ನು ಮೆಲುಕು ಹಾಕಿದ್ದಾರೆ.

ನ್ಯೂಯಾರ್ಕ್ ನಗರಕ್ಕೆ ಬಂದು ನೆಲೆಸಿದ್ದ ಮೊದಲ ವರ್ಷದಲ್ಲಿ ನನ್ನ ಬೆನ್ನಿಗೆ ಚಾಕು ಇಟ್ಟಿದ್ದ ಪಾತಕಿಗಳು ನನ್ನನ್ನು ಮಹಡಿಯ ಮೇಲೆ ಎಳೆದುಕೊಂಡು ಹೋಗಿ ಗನ್ ತೋರಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದರು ಎಂದು ಮಡೋನಾ ಹೇಳಿಕೊಂಡಿದ್ದಾರೆ. ನಾನು ನನ್ನ ಹದಿಹರಯದ ವಯಸ್ಸಿನಲ್ಲಿ ಅನೇಕ 'ಅಪರಿಚಿತರ ಮಧ್ಯೆ' ಕಾಲ ಕಳೆಯುವಂತಾಯಿತು ಎಂದೂ ಮಡೋನಾ ವಿಷಾದಿಸಿದ್ದಾರೆ. (ಚಿತ್ರ: 80s-fashion-fancy-dress.com)

English summary
Pop star Madonna revealed she suffered rape at knifepoint in New York. The 55-year-old singer made the revelation in November issue of Harpers Bazaar magazine, News.com.au reported.
Please Wait while comments are loading...