ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂತು.!
ಕಳೆದ ಕೆಲವು ದಿನಗಳಿಂದ ನಟಿ ಪ್ರಿಯಾಂಕಾ ಛೋಪ್ರಾ ವೈಯುಕ್ತಿಕ ಜೀವನದ ಬಗ್ಗೆಯೇ ಹೆಚ್ಚು ಸದ್ದು-ಸುದ್ದಿ ಆಗುತ್ತಿದೆ. ಬೇಸ್ ಬಾಲ್ ಗೇಮ್ ನೋಡಲು ಅಮೇರಿಕನ್ ಸಿಂಗರ್ ನಿಕ್ ಜೊನಾಸ್ ಜೊತೆ ನಟಿ ಪ್ರಿಯಾಂಕಾ ಛೋಪ್ರಾ ಹೋಗಿದ್ದೇ ತಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಇವರಿಬ್ಬರ ರಿಲೇಶನ್ ಶಿಪ್ ಬಗ್ಗೆ ಗುಸುಗುಸು ಆರಂಭ ಆಯ್ತು.
ತಮಗಿಂತ ಹತ್ತು ವರ್ಷ ಕಿರಿಯನಾಗಿರುವ ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಛೋಪ್ರಾ ಡೇಟಿಂಗ್ ಮಾಡ್ತಿದ್ದಾರಂತೆ ಎಂಬ ಅಂತೆ-ಕಂತೆ ಬಾಲಿವುಡ್ ಗಲ್ಲಿ ಗಲ್ಲಿಗಳಲ್ಲೂ ಗಿರಕಿ ಹೊಡೆಯಲು ಶುರು ಆಯ್ತು.
ಯಾವುದೇ ಗಾಸಿಪ್ ಗಳಿಗೂ ಕೇರ್ ಮಾಡದೆ, ಪ್ರಿಯಾಂಕಾ ಛೋಪ್ರಾ ಕೈಹಿಡಿದುಕೊಂಡು ನಿಕ್ ಜೊನಾಸ್ ಭಾರತಕ್ಕೂ ಬಂದಿಳಿದರು. ಇವರಿಬ್ಬರ ಮಧ್ಯೆ ಪ್ರೀತಿ ಇರೋದು ನಿಜವೋ, ಸುಳ್ಳೋ.? ಎಂಬ ಡೌಟ್ ಎಲ್ಲರಿಗೂ ಕಾಡುತ್ತಿದೆ. ಹೀಗಿರುವಾಗಲೇ, ಪ್ರಿಯಾಂಕಾ ಛೋಪ್ರಾ ಸಿಹಿ ಸುದ್ದಿ ನೀಡುವ ಸೂಚನೆ ಕೊಟ್ಟಿದ್ದಾರೆ. ಅದೇನು ಅಂದ್ರಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಸದ್ಯದಲ್ಲಿಯೇ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ.?
ಇನ್ನು ಕೆಲವೇ ತಿಂಗಳಲ್ಲಿ ಅಂದ್ರೆ ಅಕ್ಟೋಬರ್ ಹೊತ್ತಿಗೆ ನಟಿ ಪ್ರಿಯಾಂಕಾ ಛೋಪ್ರಾ-ನಿಕ್ ಜೊನಾಸ್ ಮದುವೆ ನಡೆಯಲಿದೆ ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇದಕ್ಕೆ ಕಾರಣ ಅಲಿ ಅಬ್ಬಾಸ್ ಝಫರ್ ಮಾಡಿರುವ ಒಂದು ಟ್ವೀಟ್.!

ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ಏನು.?
''ಭಾರತ್' ಸಿನಿಮಾದಲ್ಲಿ ಪ್ರಿಯಾಂಕಾ ಛೋಪ್ರಾ ನಟಿಸುತ್ತಿಲ್ಲ. ಅದಕ್ಕಿರುವ ಕಾರಣ ತುಂಬಾನೇ ಸ್ಪೆಷಲ್. ನಿಕ್ ಜೊತೆಗಿನ ತಮ್ಮ ನಿರ್ಧಾರವನ್ನ ಆಕೆ ನಮಗೆ ತಿಳಿಸಿದ್ದಾರೆ. ಇದು ನಮಗೂ ಖುಷಿ ಕೊಟ್ಟಿದೆ. ಪ್ರಿಯಾಂಕಾ ಛೋಪ್ರಾಗೆ 'ಭಾರತ್' ಚಿತ್ರತಂಡದಿಂದ ಶುಭಾಶಯಗಳು'' ಎಂದು ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಟ್ವೀಟಿಸಿದ್ದಾರೆ.

ಇದರ ಅರ್ಥ ಏನು.?
ಅಲಿ ಅಬ್ಬಾಸ್ ಝಫರ್ ಮಾಡಿರುವ ಟ್ವೀಟ್ ನೋಡಿ, ಪ್ರಿಯಾಂಕಾ-ನಿಕ್ ಮದುವೆ ಫಿಕ್ಸ್ ಆಗಿದೆ ಅಂತಲೇ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಈ ನಡುವೆ ಅದಾಗಲೇ ಪ್ರಿಯಾಂಕಾ-ನಿಕ್ ನಿಶ್ಚಿತಾರ್ಥ ಮುಗಿದು ಹೋಗಿದೆ ಎಂದೂ ವರದಿ ಆಗಿದೆ.

ಮದುವೆ ತಯಾರಿಯಲ್ಲಿ ಪ್ರಿಯಾಂಕಾ ಛೋಪ್ರಾ.?
ಮದುವೆ ತಯಾರಿಯಲ್ಲಿ ನಟಿ ಪ್ರಿಯಾಂಕಾ ಛೋಪ್ರಾ ತೊಡಗಿರುವ ಕಾರಣಕ್ಕೆ 'ಭಾರತ್' ಚಿತ್ರದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಇನ್ನೂ ತಮ್ಮ ಮದುವೆಗಾಗಿ ನಟಿ ಪ್ರಿಯಾಂಕಾ ಈಗಾಗಲೇ ಗೌನ್ ಕೂಡ ಫೈನಲೈಸ್ ಮಾಡಿದ್ದಾರಂತೆ. ಅಂತೂ ನಟಿ ಪ್ರಿಯಾಂಕಾ ಸಿಹಿ ಸುದ್ದಿ ಕೊಡುವ ಸಮಯ ಹತ್ತಿರ ಬಂದಿದೆ.

ಯಾರೀ ನಿಕ್ ಜೊನಾಸ್ .?
25 ವರ್ಷದ ನಿಕ್ ಜೊನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೊನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.


Click it and Unblock the Notifications











