ಮಗುವಿಗಾಗಿ 149 ಕೋಟಿಯ ದುಬಾರಿ ಮನೆ ಖರೀದಿಸಿದ ಪ್ರಿಯಾಂಕಾ- ನಿಕ್!

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಪತಿ ನಿಕ್ ಜೋನಸ್ ಇತ್ತೀಚೆಗೆ ಹೆಚ್ಚು ಸುದ್ದಿ ಆಗಿದ್ದು, ತಮ್ಮ ಮಗುವಿನ ವಿಚಾರದಲ್ಲಿ. ಈ ಜೋಡಿ ಮದುವೆ ಆದ ಬಳಿಕ ಅವರಿಗೆ ಸದಾ ಎದುರಾಗುತ್ತಿದ್ದದ್ದು ಒಂದೇ ಪ್ರಶ್ನೆ. ಮಗು ಯಾವಾಗ ಎನ್ನುವುದು. ಅದಕ್ಕೀಗ ಈ ಜೋಡಿ ಉತ್ತರ ಕೊಟ್ಟಿದೆ. ಬಾಡಿಗೆ ತಾಯ್ತನದ ಮೂಲಕ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಪಡೆದಿದ್ದಾರೆ. ಈ ಬಗ್ಗೆ ಕುತೂಹಲಕಾರಿ ಸಂಗತಿ ಒಂದು ಹೊರ ಬಂದಿದೆ.

ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪೋಷಕರಾಗಲು ನಿರ್ಧರಿಸಿ, ಮಗುವನ್ನು ಮನೆಗೆ ಕರೆ ತಂದಿದ್ದಾರೆ. ಈ ವಿಚಾರವನ್ನು ಪ್ರಿಯಾಂಕಾ ಮತ್ತು ನಿಕ್ ಸಾಮಾಜಿಕ ಜಾಲತಾಣದ ಮೂಲಕ ಪ್ರಕಟ ಮಾಡಿದ್ದರು.

ಇದು ಹಲವರಿಗೆ ಅಚ್ಚರಿ ಆಗಿತ್ತು. ಯಾವುದೇ ಸುಳಿವು ನೀಡದೆ, ಇದ್ದಕ್ಕಿದ್ದ ಹಾಗೆ ಮಗು ಪಡೆದ ವಿಚಾರ, ಅವರ ಅಭಿಮಾನಿಗಳಿಗೆ ಶಾಕಿಂಗ್ ಆಗಿತ್ತು. ಆದರೆ ಸಿನಿಮಾ ಮಂದಿ, ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕಾ ಮತ್ತು ನಿಕ್ ದಂಪತಿಗೆ ಶುಭಕೋರಿದ್ದರು.

149 ಕೋಟಿ ಮನೆಗೆ ಮಗು ಎಂಟ್ರಿ!

149 ಕೋಟಿ ಮನೆಗೆ ಮಗು ಎಂಟ್ರಿ!

ಈ ಸುದ್ದಿ ಕೇಳಿದರೆ ಅಚ್ಚರಿ ಆಗುತ್ತೆ. ಹುಟ್ಟಿದ ಹಸುಗೂಸಿಗಾಗಿ ಇಷ್ಟು ದುಬಾರಿ ಮನೆ ಯಾಕಪ್ಪ ಎನ್ನುವ ಪ್ರಶ್ನೆ ಕೂಡ ಮೂಡುತ್ತದೆ. ಆದರೆ ಪ್ರಿಯಾಂಕಾ ಮತ್ತು ನಿಕ್ ತಮ್ಮ ಮಗುವಿಗಾಗಿ 149 ಕೋಟಿ ಬೆಲೆಯ ಮನೆಯನ್ನು ಖರೀದಿಸಿದ್ದಾರಂತೆ. ಮಗು ಮನೆಗೆ ಬರುವ ಮುನ್ನವೇ ಮನೆಯನ್ನು ಸಂಪೂರ್ಣವಾಗಿ ಸಿದ್ಧ ಪಡಿಸಿದ್ದು, ಈಗ ಮಗುವಿನೊಂದಿಗೆ ಅದೇ ಮನೆಯಲ್ಲಿ ಪ್ರಿಯಾಂಕಾ ದಂಪತಿ ವಾಸ ಮಾಡುತ್ತಿದ್ದಾರೆ.

ದುಬಾರಿ ಮನೆ ಕೊಂಡುಕೊಂಡಿದ್ದು ಯಾಕೆ?

ದುಬಾರಿ ಮನೆ ಕೊಂಡುಕೊಂಡಿದ್ದು ಯಾಕೆ?

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಇಬ್ಬರೂ ಕೂಡ ದುಬಾರಿ ಮನೆಯನ್ನು ಖರೀದಿ ಮಾಡಲು ಬಲವಾದ ಕಾರಣ ಇದೆ. ಮಗುವನ್ನು ಪಡೆಯಬೇಕು ಎಂದು ನಿರ್ಧಾರಿಸಿದಾಗಲೇ, ಲಾಸ್‌ ಏಂಜಲಿಸ್‌ನಲ್ಲಿ ಹೊಸ ಮನೆಯ ಹುಡುಕಾಟ ಶುರು ಮಾಡಿದ್ದರಂತೆ. ಕಳೆದ ವರ್ಷ ಆಗಸ್ಟ್‌ನಿಂದಲೇ ಮನೆ ಹುಡುಕಾಟ ಶುರು ಮಾಡಿದ್ದರಂತೆ. ನವೆಂಬರ್‌ನಲ್ಲಿ ಈ ಹೊಸ ಮನೆಗೆ ಪ್ರಿಯಾಂಕಾ ದಂಪತಿ ಎಂಟ್ರಿ ಕೊಟ್ಟಿದ್ದಾರೆ. ಈಗ ತಮ್ಮ ಇಚ್ಚೆಯಂತೆ ಮಗುವನ್ನೂ ಕೂಡ ಹೊಸ ಮನೆಗೆ ಬರಮಾಡಿಕೊಂಡಿದ್ದಾರೆ.

ಮಗುವಿಗಾಗಿ ವಿಶಾಲವಾದ ಹೊರಾಂಗಣ, ಗಾರ್ಡನ್!

ಮಗುವಿಗಾಗಿ ವಿಶಾಲವಾದ ಹೊರಾಂಗಣ, ಗಾರ್ಡನ್!

ಮಗುವಿಗಾಗಿಯೇ ಇಷ್ಟು ದೊಡ್ಡ ಮನೆ ಖರೀದಿಸಿದ್ದಾರೆ. ಮಕ್ಕಳಿಗೆ ಆಟವಾಡಲು ವಿಶಾಲವಾದ ಜಾಗಬೇಕು. ಜೊತೆಗೆ ಹೆಚ್ಚಿನ ಹಸಿರು ಇರಬೇಕು. ಹಾಗಾಗಿ ಮಗು ಆಟ ಆಡಲು ಯಾವುದೇ ತೊಂದರೆ ಆಗಬಾರದು ಎನ್ನು ಕಾರಣಕ್ಕೆ ದೊಡ್ಡ ಹೊರಾಂಗಣ ಇರುವ ಮನೆಯನ್ನು ಹುಡುಕಿ ಖರೀಸಿದ್ದಾರೆ. ಜೊತೆಗೆ ಮನೆಯಲ್ಲಿ ಆದಷ್ಟು ಹೆಚ್ಚಾಗಿ ಗಾರ್ಡನ್‌ಗೆ ಜಾಗ ಮಾಡಿಕೊಂಡಿದ್ದಾರಂತೆ. ಮನೆಯ ಪ್ರತಿಯೊಂದನ್ನು ಮಗುವಿನ ಭವಿಷ್ಯ ಗಮನದಲ್ಲಿ ಇಟ್ಟುಕೊಂಡು ವ್ಯವಸ್ಥೆ ಮಾಡಿದ್ದಾರಂತೆ. ಹಾಗಾಗಿಯೇ ಅವರ ಹೊಸ ಮನೆಗೆ 149 ಕೋಟಿ ಖರ್ಚು ಆಗಿದೆ ಎನ್ನಲಾಗಿದೆ.

ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ಪಿಗ್ಗಿ ದಂಪತಿ!

ಮಗುವಿನೊಂದಿಗೆ ಕಾಲ ಕಳೆಯುತ್ತಿರುವ ಪಿಗ್ಗಿ ದಂಪತಿ!

ಸದ್ಯ ನಟಿ ಪ್ರಿಯಾಂಕಾ ಮತ್ತು ನಿಕ್ ಜೋನಸ್ ಇಬ್ಬರೂ ಕೂಡ ಮಗುವಿನೊಂದಿಗೆ ಕಾಲ ಕಳೆಯುತ್ತಿದ್ದಾರೆ. ಮಗುವಿನ ಆರೈಕೆಯಲ್ಲಿ ಬ್ಯುಸಿ ಇರುವ ನಟಿ ಪ್ರಿಯಾಂಕಾ ಸದ್ಯ ಸಿನಿಮಾದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗೆ ಪ್ರಿಯಾಂಕಾ ಗ್ಲ್ಯಾಮರ್ ಲುಕ್‌ನಲ್ಲಿ ಹೊಸ ಫೊಟೋ ಶೂಟ್ ಮಾಡಿಸಿದ್ದಾರೆ. ಜೊತೆಗೆ ಪ್ರಿಯಾಂಕಾ ಚೋಪ್ರಾ ಅವರು ಹೊಸದೊಂದು ಹಿಂದಿ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Priyanka Chopra And Nick Jonas Spend 149 Crore For New House To Welcome Baby.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X