ನಿಕ್ ಜೊನಾಸ್ ಜೊತೆಗೆ ನಟಿ ಪ್ರಿಯಾಂಕಾ ಲಿವ್-ಇನ್ ರಿಲೇಶನ್ ಶಿಪ್.?
Recommended Video

ಇತ್ತೀಚೆಗಂತೂ ವೃತ್ತಿ ಜೀವನಕ್ಕಿಂತ ಹೆಚ್ಚಾಗಿ ವೈಯುಕ್ತಿಕ ವಿಚಾರಗಳಿಗೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಸದ್ದು ಮಾಡುತ್ತಿದ್ದಾರೆ.
ಬೇಸ್ ಬಾಲ್ ಗೇಮ್ ನೋಡಲು Dodgers ಸ್ಟೇಡಿಯಂಗೆ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ಒಟ್ಟಿಗೆ ಹೋದ್ಮೇಲಂತೂ ಎಲ್ಲರ ಕಣ್ಣು ಇವರಿಬ್ಬರ ಮೇಲೆ ಬಿದ್ದಿದೆ. ಪ್ರಿಯಾಂಕಾ-ನಿಕ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಗಾಳಿಸುದ್ದಿ ಎಲ್ಲಾ ಕಡೆ ಗಿರಕಿ ಹೊಡೆಯುತ್ತಿದೆ. ಆದ್ರೆ, ತಮ್ಮಿಬ್ಬರ ನಡುವೆ ಇರುವ ನಂಟಿನ ಬಗ್ಗೆ ಪ್ರಿಯಾಂಕಾ ಆಗಲಿ, ನಿಕ್ ಆಗಲಿ ಸ್ಪಷ್ಟನೆ ಕೊಟ್ಟಿಲ್ಲ.
ಹೀಗಿದ್ದರೂ, ಹೊಸ ಗಾಸಿಪ್ ಮಾಧ್ಯಮಗಳ ಕಿವಿಗೆ ಬಿದ್ದಿದೆ. ಅದೇನಪ್ಪಾ ಅಂದ್ರೆ, ತಮ್ಮೊಂದಿಗೆ ಲಿವ್-ಇನ್ ರಿಲೇಶನ್ ಶಿಪ್ ನಲ್ಲಿ ಇರುವಂತೆ ಪ್ರಿಯಾಂಕಾ ಛೋಪ್ರಾಗೆ ನಿಕ್ ಜೋನಾಸ್ ಕೇಳಿಕೊಂಡಿದ್ದಾರಂತೆ.

ಪ್ರೀತಿಯ ಅಮಲಿನಲ್ಲಿ ತೇಲುತ್ತಿರುವ ನಿಕ್ ಜೋನಾಸ್ ಗೆ ಪ್ರಿಯಾಂಕಾ ರನ್ನ ಬಿಟ್ಟಿರಲು ಆಗುತ್ತಿಲ್ಲ. ಪ್ರತಿ ಕ್ಷಣ ಪ್ರಿಯಾಂಕಾ ಸಾಂಗತ್ಯ ಬಯಸುತ್ತಿದ್ದಾರೆ ನಿಕ್ ಜೋನಾಸ್. ಹೀಗಾಗಿ ಪ್ರಿಯಾಂಕಾ ಜೊತೆಯಲ್ಲೇ ಇರಲು ಲಿವ್-ಇನ್ ರಿಲೇಶನ್ ಶಿಪ್ ಗೆ ನಿಕ್ ಕೋರಿಕೆ ಇಟ್ಟಿದ್ದಾರಂತೆ. ಇದಕ್ಕೆ ಪ್ರಿಯಾಂಕಾ ಒಪ್ಪಿಕೊಳ್ಳುತ್ತಾರಾ.?
ಎಲ್ಲೇ ಹೋದರೂ, ನಿಕ್ ಜೊನಾಸ್ ಜೊತೆಯಲ್ಲೇ ಹೋಗುತ್ತಿರುವ ಪ್ರಿಯಾಂಕಾ ಅದೇ ನಿಕ್ ಜೊತೆ ಒಂದೇ ಮನೆಯಲ್ಲಿ ಇರಲು ಸಮ್ಮತಿ ಸೂಚಿಸುತ್ತಾರಾ, ಇಲ್ವಾ.? ಅನ್ನೋದೇ ಸದ್ಯದ ಪ್ರಶ್ನೆ.
ಅಸಲಿಗೆ, ಪ್ರಿಯಾಂಕಾ ಛೋಪ್ರಾಗಿಂತ ನಿಕ್ ಜೊನಾಸ್ ಹತ್ತು ವರ್ಷ ಕಿರಿಯ. 25 ವರ್ಷದ ನಿಕ್ ಜೋನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ.


Click it and Unblock the Notifications











