For Quick Alerts
  ALLOW NOTIFICATIONS  
  For Daily Alerts

  ಅಮೆರಿಕ ನೂತನ ಅಧ್ಯಕ್ಷ ಜೋ ಬೈಡನ್‌ಗೆ ಶುಭಕೋರಿದ ಪ್ರಿಯಾಂಕಾ ಚೋಪ್ರಾ

  |

  ವಿಶ್ವದ ದೊಡ್ಡಣ್ಣ ಅಮೆರಿಕಾ ಚುನಾವಣೆ ಫಲಿತಾ ಪ್ರಕಟವಾಗಿದ್ದು, ಡೆಮಾಕ್ರಾಟಿಕ್ ಪಕ್ಷದ ಜೋಸೆಫ್ ಬೈಡನ್ ಯುಎಸ್‌ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. 46ನೇ ಅಮೆರಿಕ ಅಧ್ಯಕ್ಷರಿಗೆ ಸಿನಿಮಾ ರಂಗದಿಂದ ಹಲವು ಸೆಲೆಬ್ರಿಟಿಗಳ ಶುಭ ಕೋರಿದ್ದಾರೆ.

  ಜೋ ಬೈಡನ್ ವಿಜಯಕ್ಕೆ ಬಾಲಿವುಡ್ ನಟಿ ಹಾಗೂ ಅಮೆರಿಕಾ ಸೊಸೆ ಪ್ರಿಯಾಂಕಾ ಚೋಪ್ರಾ ಶುಭಾಶಯ ಕೋರಿದ್ದಾರೆ. ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂದು ತೋರಿಸಿದ ಈ ಚುನಾವಣೆಗೆ ಸಾಕ್ಷಿಯಾಗಿದ್ದು ಅದ್ಭುತ ಎಂದು ಹೇಳಿದ್ದಾರೆ.

  ಅಮೆರಿಕದ 46ನೇ ಅಧ್ಯಕ್ಷರಾಗಿ ಬೈಡೆನ್ ಆಯ್ಕೆ

  ''ಅಮೆರಿಕಾ ಐತಿಹಾಸಿಕ ಫಲಿತಾಂಶದ ಮೂಲಕ ಮಾತನಾಡಿದೆ. ಪ್ರತಿಯೊಂದು ಮತವೂ ಎಷ್ಟು ಪ್ರಮುಖ. ಪ್ರಜಾಪ್ರಭುತ್ವ ಹೇಗೆ ಕಾರ್ಯನಿರ್ವಹಿಸಬೇಕು ಎಂಬುದನ್ನು ಪ್ರದರ್ಶಿಸಲು ಮತ ಚಲಾಯಿಸಿದ ಪ್ರತಿಯೊಬ್ಬರನ್ನು ನಾನು ಶ್ಲಾಘಿಸುತ್ತೇನೆ. ಯುಎಎಸ್‌ನ ಈ ಚುನಾವಣೆಗೆ ಸಾಕ್ಷಿಯಾಗಿರುವುದು ಅದ್ಭುತ. ಅಧ್ಯಕ್ಷ ಬೈಡನ್ ಹಾಗೂ ಮೊದಲ ಮಹಿಳಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರಿಗೆ ಶುಭಾಶಯ'' ಎಂದು ಟ್ವೀಟ್ ಮಾಡಿದ್ದಾರೆ

  ''ಮಹಿಳೆಯರು ದೊಡ್ಡದಾಗಿ ಕನಸು ಕಾಣಬೇಕು, ಏನಾದರೂ ಬೇಕಾದರು ಆಗಬಹುದು'' ಎಂದು ಹೇಳಿರುವ ಪ್ರಿಯಾಂಕಾ ಚೋಪ್ರಾ ''ಪ್ರಜಾಪ್ರಭುತ್ವ ಗೆದ್ದಿದೆ, ಶುಭಾಶಯ ಅಮೆರಿಕಾ'' ಎಂದು ಟ್ವೀಟ್ ಮಾಡಿದ್ದಾರೆ.

  ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ ಜೋ ಬಿಡನ್ ಅಮೆರಿಕದ 46 ನೇ ಅಧ್ಯಕ್ಷರಾಗಿದ್ದಾರೆ. ತಾಯಿಯ ಕಡೆಯಿಂದ ತಮಿಳು ಮೂಲವನ್ನು ಹೊಂದಿರುವ ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

  ಅಂದ್ಹಾಗೆ, ಅಮೆರಿಕ ಗಾಯಕ ನಿಕ್ ಜೋನಸ್ ಅವರನ್ನು ಪ್ರಿಯಾಂಕಾ ಚೋಫ್ರಾ ವಿವಾಹವಾಗಿದ್ದಾರೆ.

  English summary
  America president election result: Democratic party's Joe Biden elected 46th US president. actress Priyanka Chopra congratulates to Joe Biden.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X