ಜಾರ್ಜ್‌ ಫ್ಲಾಯ್ಡ್‌ ಗೆ ಪ್ರಿಯಾಂಕಾ ಚೋಪ್ರಾ ಬೆಂಬಲ: ಯಾರೀತ ಜಾರ್ಜ್‌ ಫ್ಲಾಯ್ಡ್‌?

ಜನಾಂಗೀಯ ಹಿಂಸೆಗೆ ಒಳಪಟ್ಟು ಮೃತನಾದ ಜಾರ್ಜ್‌ ಫ್ಲಾಯ್ಡ್‌ ಗೆ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಒಬ್ಬಾತ ಕಪ್ಪು ವರ್ಣದ ವ್ಯಕ್ತಿಯೊಬ್ಬನ ಕತ್ತಿನ ಮೇಲೆ ಕಾಲಿಟ್ಟು ಹಿಂಸಿಸುತ್ತಿದ್ದ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಆ ವ್ಯಕ್ತಿಯೇ ಜಾರ್ಜ್‌ ಫ್ಲಾಯ್ಡ್‌ ಆತ ಆ ನಂತರ ಮೃತಪಟ್ಟಿದ್ದ. ಆತನ ಪರವಾಗಿ ಈಗ ಅಮೆರಿಕದೆಲ್ಲೆಡೆ ಪ್ರತಿಭಟನೆಗಳು ಪ್ರಾರಂಭವಾಗಿವೆ.

Recommended Video

ನಟ ಜಗ್ಗೇಶ್ 75 ಲಕ್ಷ ರೂಪಾಯಿ ಕಳೆದುಕೊಂಡಿದ್ದು ಯಾಕೆ? ಹೇಗೆ? | Jaggesh | FILMIBEAT KANNADA

ಜಾರ್ಜ್‌ ಫ್ಲಾಯ್ಡ್‌ ಜನಾಂಗೀಯ ಹಿಂಸೆಗೆ ಬಲಿಯಾಗಿದ್ದಾನೆಂದು, ಆತನಿಗೆ ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟನೆಗಳು ಪ್ರಾರಂಭವಾಗಿದೆ. ಪ್ರತಿಭಟನೆಗಳು ಹಿಂಸಾ ರೂಪಕ್ಕೂ ತಿರುಗಿದೆ.

ಜನಾಂಗೀಯ ಹಿಂಸಾಚಾರಕ್ಕೆ ಬಲಿಯಾದ ಜಾರ್ಜ್‌ ಫ್ಲಾಯ್ಡ್‌ ಗೆ ನಟಿ ಪ್ರಿಯಾಂಕಾ ಚೋಪ್ರಾ ಬೆಂಬಲ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಸಹ ಹಾಕಿದ್ದಾರೆ.

ವರ್ಣ ದ್ವೇಷ ಅಳಿಯಬೇಕಿದೆ: ಪ್ರಿಯಾಂಕಾ

ವರ್ಣ ದ್ವೇಷ ಅಳಿಯಬೇಕಿದೆ: ಪ್ರಿಯಾಂಕಾ

'ಅಮೆರಿಕದಲ್ಲಿ ಹರಿದಾಡುತ್ತಿರುವ ಈ 'ವರ್ಣ ದ್ವೇಷ' ಅಳಿಯಬೇಕಿದೆ. ಯಾರೂ ಸಹ ತಮ್ಮ ಚರ್ಮದ ಬಣ್ಣದ ಕಾರಣಕ್ಕೆ ಮತ್ತೊಬ್ಬ ವ್ಯಕ್ತಿಯಿಂದ ಹತನಾಗಬಾರದು' ಎಂದು ನೋವಿನಿಂದ ಬರೆದಿದ್ದಾರೆ ಪ್ರಿಯಾಂಕಾ ಚೋಪ್ರಾ.

ಜಾರ್ಜ್‌ ಫ್ಲುಯ್ಡ್ ಕುಟುಂಬಕ್ಕಾಗಿ ಪ್ರಾರ್ಥನೆ

ಜಾರ್ಜ್‌ ಫ್ಲುಯ್ಡ್ ಕುಟುಂಬಕ್ಕಾಗಿ ಪ್ರಾರ್ಥನೆ

'ನಾನು ಜಾರ್ಜ್‌ ಫ್ಲುಯ್ಡ್‌ ಕುಟುಂಬದ ಸೌಖ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಿದ್ದೇನೆ. ಫ್ಲಾಯ್ಡ್‌ ಗೆ ಬೆಂಬಲ ನೀಡಲು 'ಫ್ಲಾಯ್ಡ್‌ ಎಂದು ಇಂಗ್ಲೀಷ್ ಸಂದೇಶ ಕಳುಹಿಸಿ' ಎಂದು ಸಂಖ್ಯೆಯೊಂದನ್ನು ನೀಡಿದ್ದಾರೆ ಪ್ರಿಯಾಂಕಾ ಚೋಪ್ರಾ.

ಕತ್ತಿನ ಮೇಲೆ ಕಾಲಿಟ್ಟಿದ್ದ ಪೊಲೀಸ್ ಅಧಿಕಾರಿ

ಕತ್ತಿನ ಮೇಲೆ ಕಾಲಿಟ್ಟಿದ್ದ ಪೊಲೀಸ್ ಅಧಿಕಾರಿ

ಮಿನಿಪೊಲೀಸ್‌ನಲ್ಲಿ ನಲ್ಲಿ ಒಬ್ಬ ಪೊಲೀಸ್ ಅಧಿಕಾರಿ ಜಾರ್ಜ್‌ ಫ್ಲಾಯ್ಡ್ ನ ಕತ್ತಿನ ಮೇಲೆ ಮೊಣಕಾಲು ಊರಿ ಕೂತಿದ್ದ. ಆ ವ್ಯಕ್ತಿ ನನಗೆ ಉಸಿರಾಡಲು ಆಗುತ್ತಿಲ್ಲ, ನನ್ನನ್ನು ಬಿಟ್ಟುಬಿಡಿ, ನನ್ನನ್ನು ಕೊಲ್ಲಬೇಡಿ ಎಂದು ಅಂಗಲಾಚಿದ ಆದರೆ ಆ ಪೊಲೀಸ್ ಬಿಡಲಿಲ್ಲ. ಆತ ಅಂಗಲಾಚುತ್ತಿದ್ದುದು ವಿಡಿಯೋದಲ್ಲಿ ಸೆರೆಯಾಗಿದೆ.

ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

ನಂತರ ಜಾರ್ಜ್‌ ಫ್ಲುಯ್ಡ್ ಹತನಾದ. ಘಟನಾ ಸ್ಥಳದಲ್ಲಿದ್ದ ನಾಲ್ವರು ಪೊಲೀಸರನ್ನು ಉದ್ಯೋಗದಿಂದ ವಜಾಗೊಳಿಸಲಾಗಿದೆ. ಜಾರ್ಜ್‌ ಫ್ಲುಯ್ಡ್‌ ಕತ್ತಿನ ಮೇಲೆ ಕಾಲಿಟ್ಟಿದ್ದ ಪೊಲೀಸ್ ಮೇಲೆ ಕೊಲೆ ಆರೋಪ ಹೊರಿಸಿ ಬಂಧಿಸಲಾಗಿದೆ.

More from Filmibeat

English summary
Actress Priyanka Chopra extended support to George Floyd who died because of racism.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X