For Quick Alerts
  ALLOW NOTIFICATIONS  
  For Daily Alerts

  ಅಮೆರಿಕದ ಅಂಬಾನಿ ಮನೆಯಲ್ಲಿ ಗುಜರಾತಿ ಸಿನಿಮಾ ಶೋ ಆಯೋಜಿಸಿದ ಪ್ರಿಯಾಂಕಾ: ಕಾರಣ?

  By ಫಿಲ್ಮಿಬೀಟ್
  |

  ನಟಿ ಪ್ರಿಯಾಂಕಾ ಚೋಪ್ರಾ ಈಗ ಹಾಲಿವುಡ್ ನಟಿಯಾಗಿ ಬದಲಾಗಿದ್ದಾರೆ. ಹಾಲಿವುಡ್ ನಟಿ ಮಾತ್ರವಲ್ಲ ಹಾಲಿವುಡ್ ನಿವಾಸಿಯೂ ಆಗಿಬಿಟ್ಟಿದ್ದಾರೆ. ಭಾರತಕ್ಕೆ ಬರುವುದು ತೀರಾ ಅಪರೂಪವಾಗಿದೆ. ಆದರೆ ಭಾರತದ ಮೇಲಿನ ಪ್ರೀತಿ ಗೌರವವನ್ನು ಕಡಿಮೆ ಮಾಡಿಕೊಂಡಿಲ್ಲ.

  ಬಾಲಿವುಡ್‌ನಿಂದ ದೂರಾಗಿ ಹಾಲಿವುಡ್‌ನಲ್ಲಿ ನೆಲೆ ಕಂಡುಕೊಂಡಿರುವ ಪ್ರಿಯಾಂಕಾ ಚೋಪ್ರಾ, ಭಾರತದ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆಯೇನೂ ಇಲ್ಲ. ಹಾಗಿದ್ದರೂ ಸಹ ಪ್ರಿಯಾಂಕಾ ಚೋಪ್ರಾ, ಭಾರತದ ಒಂದು ಸಣ್ಣ ಸಿನಿಮಾದ ಪರವಾಗಿ ನಿಂತಿದ್ದಾರೆ.

  ಈ ವರ್ಷ ಆಸ್ಕರ್‌ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆ ಆಗಿರುವ ಗುಜರಾತಿ ಸಿನಿಮಾ 'ಚೆಲ್ಲೊ ಶೋ' ಸಿನಿಮಾದ ಪರವಾಗಿ ನಟಿ ಪ್ರಿಯಾಂಕಾ ಚೋಪ್ರಾ ನಿಂತಿದ್ದು, ಆಸ್ಕರ್‌ಗೆ ಆಯ್ಕೆ ಆಗಿರುವ ಆ ಸಿನಿಮಾದ ಪರವಾಗಿ ಅಭಿಯಾನಕ್ಕೆ ನೆರವಾಗಿದ್ದಾರೆ.

  ಹಾಲಿವುಡ್ ತಾರೆಯರು, ಮಲ್ಟಿ ಬಿಲಿಯನೇರ್‌ಗಳು ವಾಸವಿರುವ ಅಮೆರಿಕದ ಕ್ಯಾಲಿಫೋರ್ನಿಯಾದ ಬೆವರ್ಲಿ ಹಿಲ್ಸ್‌ನಲ್ಲಿನ ಅಂಬಾನಿ ಪುತ್ರಿ ಇಶಾ ಅಂಬಾನಿಯ ಮನೆಯಲ್ಲಿ ನಟಿ ಪ್ರಿಯಾಂಕಾ ಚೋಪ್ರಾ, 'ಚೆಲ್ಲೊ ಶೋ' ಸಿನಿಮಾದ ವಿಶೇಷ ಶೋ ಅನ್ನು ಆಯೋಜನೆ ಮಾಡಿದ್ದರು.

  ಈ ಸಿನಿಮಾ ಆಸ್ಕರ್‌ಗೆ ನಾಮಿನೇಟ್ ಆಗಿದ್ದು, ಸಿನಿಮಾದಲ್ಲಿ ನಟಿಸಿರುವ ಪುಟ್ಟ ಬಾಲಕ ಹಾಗೂ ಸಿನಿಮಾದ ನಿರ್ದೇಶಕರನ್ನು ಅತಿಥಿಯಾಗಿ ಆಹ್ವಾನಿಸಿ ಪ್ರಿಯಾಂಕಾ ಚೋಪ್ರಾ ಈ ಶೋ ಅನ್ನು ಖಾಸಗಿಯಾಗಿ ಆಯೋಜಿಸಿದ್ದರು. ಪ್ರಿಯಾಂಕಾ ಆಯೋಜಿಸಿದ್ದ ಈ ಶೋಗೆ ಆಸ್ಕರ್‌ ಪ್ರಶಸ್ತಿಗೆ ಮತ ಚಲಾಯಿಸುವವ ಜಡ್ಜ್‌ಗಳನ್ನು ಸಹ ಆಹ್ವಾನಿಸಲಾಗಿತ್ತು.

  Priyanka Chopra Hosts Special Screening Of Chellow Show Gujrati Movie In California

  ಈ ವಿಶೇಷ ಶೋನ ಆರಂಭದಲ್ಲಿ ಮಾತನಾಡಿರುವ ಪ್ರಿಯಾಂಕಾ ಚೋಪ್ರಾ, ''ಇದೊಂದು ಬಹಳ ಭಿನ್ನವಾದ ಆದರೆ ಸರಳವಾದ ಕತೆ. ಈ ಸಿನಿಮಾ ನೋಡುವ ಮುನ್ನ ಇದರ ಕತೆ ನಡೆಯುವ ಸ್ಥಳ, ಪರಿಸರದ ನಾನು ಮಾಡಿಸುತ್ತೇವೆ. ಗುಜರಾತ್‌ನ ಸಣ್ಣ ಹಳ್ಳಿಯಲ್ಲಿ ನಡೆವ ಕತೆ ಇದು. ಭಾರತದಲ್ಲಿ ಸಿನಿಮಾವನ್ನು ಆಳವಾಗಿ ಪ್ರೀತಿಸುವ ಹಲವು ಮಂದಿ ಇದ್ದಾರೆ. ಊರಿಗೆ ಒಂದೇ ಚಿತ್ರಮಂದಿರ, ಕೈಯಲ್ಲಿರುವ ಕೆಲವೇ ಕಾಸು ನೀಡಿ ಸಿನಿಮಾ ನೋಡುವುದು ಅಲ್ಲಿ ಸಾಮಾನ್ಯ. ನಮ್ಮ ತಂದೆ ಸಹ ಶಾಲೆಗೆ ಬಂಕ್ ಮಾಡಿ ಸಿನಿಮಾ ನೋಡುತ್ತಿದ್ದರು'' ಎಂದು ನೆನಪು ಮಾಡಿಕೊಂಡಿದ್ದಾರೆ.

  ಈ ವಿಶೇಷ ಶೋಗೆ ಚೆಲ್ಲೊ ಶೋ ನಲ್ಲಿ ನಟಿಸಿರುವ ಸಣ್ಣ ಬಾಲಕನನ್ನು ಸಹ ಕರೆಸಲಾಗಿತ್ತು. ಆತ ಈ ಸಿನಿಮಾಗೆ ಮುಂಚೆ 'ದಂಗಲ್' ಬಿಟ್ಟು ಇನ್ಯಾವ ಸಿನಿಮಾವನ್ನೂ ನೋಡಿರಿಲ್ಲವೆಂದು. ಸಿನಿಮಾ ನೋಡುವುದು ಭಾರತದ ಎಷ್ಟೊ ಕುಟುಂಬಗಳಿಗೆ ಈಗಲೂ ಸಾಮಾನ್ಯ ಸಂಗತಿ ಅಲ್ಲವೆಂದು ಪ್ರಿಯಾಂಕಾ ಹೇಳಿದ್ದಾರೆ.

  English summary
  Actress Priyanka Chopra hosts special screening of Chellow Show Gujrati movie in Isha Ambani's California house.
  Monday, January 9, 2023, 15:09
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X