For Quick Alerts
  ALLOW NOTIFICATIONS  
  For Daily Alerts

  ಚಿತ್ರೀಕರಣದ ವೇಳೆ ಪ್ರಿಯಾಂಕಾ ಚೋಪ್ರಾಗೆ ಗಾಯ

  |

  ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ ಸಿನಿಮಾ, ವೆಬ್ ಸರಣಿಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಲಿವುಡ್ ಸಿನಿಮಾಗಳು ಭಾರತೀಯ ಸಿನಿಮಾಕ್ಕೆ ಹೋಲಿಸಿದರೆ ಹೆಚ್ಚು ಅಡ್ವಾನ್ಸ್ಡ್ ಆಗಿರುತ್ತವೆ. ಸುರಕ್ಷತೆ ಬಹಳ ಒತ್ತು ನೀಡಲಾಗಿರುತ್ತದೆ. ಇದಾಗಿದ್ಯೂ ನಟಿ ಪ್ರಿಯಾಂಕಾ ಚೋಪ್ರಾಗೆ ಗಾಯವಾಗಿದೆ.

  ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನ 'ಸಿಟಾಡೆಲ್' ಹೆಸರಿನ ಭಾರಿ ಬಜೆಟ್‌ನ ವೆಬ್ ಸರಣಿಯೊಂದರಲ್ಲಿ ನಟಿಸುತ್ತಿದ್ದಾರೆ. ವೆಬ್ ಸರಣಿಯಲ್ಲಿ ಪ್ರಿಯಾಂಕಾರದ್ದು ಮುಖ್ಯ ಪಾತ್ರ. ವೆಬ್ ಸರಣಿಯ ಚಿತ್ರೀಕರಣವ ವೇಳೆ ಪ್ರಿಯಾಂಕಾಗೆ ಗಾಯವಾಗಿದೆ.

  ಪ್ರಿಯಾಂಕಾ ಚೋಪ್ರಾರ ಎಡಹುಬ್ಬು ಕಟ್ ಆಗಿ ತೀವ್ರ ರಕ್ತಸ್ರಾವವಾಗಿದೆ. ತಮಗೆ ಗಾಯವಾಗಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಟಿ ಪ್ರಿಯಾಂಕಾ ಚೋಪ್ರಾ. ಪ್ರಿಯಾಂಕಾ ಮುಖದ ಮೇಲೆ ಇನ್ನೂ ಕೆಲವು ಗಾಯಗಳು ಇವೆ.

  ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಚಿತ್ರ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಮುಖದ ಮೇಲೆ ಆಗಿರುವ ಗಾಯಗಳಲ್ಲಿ ಯಾವುದು ನಿಜ ಯಾವುದು ಸುಳ್ಳು ಹುಡುಕಿ ಎಂದಿದ್ದಾರೆ. ನಂತರ ಮುಂದಿನ ಚಿತ್ರದಲ್ಲಿ ಅವರೇ ಉತ್ತರ ಹೇಳಿದ್ದು, ಹುಬ್ಬಿನ ಮೇಲೆ ಆಗಿರುವುದು ನಿಜವಾದ ಗಾಯ, ಕೆನ್ನೆಯ ಮೇಲೆ ಆಗಿರುವುದು ಫೇಕ್ ಗಾಯ ಎಂದಿದ್ದಾರೆ.

  ಚಿತ್ರೀಕರಣ ಬಹಳ ಶ್ರಮದಾಯಕವಾಗಿತ್ತು: ಪ್ರಿಯಾಂಕಾ

  ಚಿತ್ರೀಕರಣ ಬಹಳ ಶ್ರಮದಾಯಕವಾಗಿತ್ತು: ಪ್ರಿಯಾಂಕಾ

  ಮತ್ತೊಂದು ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, 'ಇಂದು ಶೂಟಿಂಗ್‌ ಬಹಳ ಶ್ರಮದಾಯಕವಾಗಿತ್ತು'' ಎಂದಿದ್ದಾರೆ. ಮುಖದ ಮೇಲೆಲ್ಲ ಮಣ್ಣು ಮಣ್ಣು ಮೆತ್ತಿಕೊಂಡಿರುವ ಚಿತ್ರವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ಪ್ರಿಯಾಂಕಾ ತೊಟ್ಟಿರುವ ಉಡುಪು ಸಹ ಭನ್ನವಾಗಿದೆ. ಆಕ್ಷನ್ ದೃಶ್ಯದ ಚಿತ್ರೀಕರಣದಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು ಎಂಬುದು ಪ್ರಿಯಾಂಕಾ ಹಂಚಿಕೊಂಡಿರುವ ಚಿತ್ರದಿಂದ ಗೊತ್ತಾಗುತ್ತಿದೆ. ಪ್ರಿಯಾಂಕಾ ಹಂಚಿಕೊಂಡಿರುವ ಚಿತ್ರಕ್ಕೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

  ಖ್ಯಾತ ನಿರ್ದೇಶಕರು ನಿರ್ದೇಶಿಸುತ್ತಿರುವ 'ಸಿಟಾಡೆಲ್'

  ಖ್ಯಾತ ನಿರ್ದೇಶಕರು ನಿರ್ದೇಶಿಸುತ್ತಿರುವ 'ಸಿಟಾಡೆಲ್'

  ನಟಿ ಪ್ರಿಯಾಂಕಾ ಚೋಪ್ರಾ 'ಸಿಟಾಡೆಲ್' ಹೆಸರಿನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಪ್ರಿಯಾಂಕಾರದ್ದು ಮುಖ್ಯ ಪಾತ್ರ. ಇದೇ ವೆಬ್ ಸರಣಿಯಲ್ಲಿ ರಿಚರ್ಡ್ ಮ್ಯಾಡೆನ್, ರೊಲ್ಯಾಂಡ್ ಮೊಲರ್ ಇನ್ನೂ ಹಲವರು ನಟಿಸುತ್ತಿದ್ದಾರೆ. ವೆಬ್ ಸರಣಿಯನ್ನು ಬ್ರಿಯಾನ್ ಕ್ರಿಕ್, ರೊಸ್ಸೊ ಸಹೋದರರು ನಿರ್ದೇಶನ ಮಾಡುತ್ತಿದ್ದಾರೆ. ಬ್ರಿಯಾನ್ ಕ್ರಿಕ್ ಈ ಹಿಂದೆ 'ಗೇಮ್ ಆಫ್ ಥ್ರೋನ್ಸ್‌'ನ ಕೆಲವು ಎಪಿಸೋಡ್‌ಗಳನ್ನು ನಿರ್ದೇಶಿಸಿದ್ದರು. ಇನ್ನು ರೊಸೊ ಸಹೋದರರು 'ಅವೇಂಜರ್ಸ್' ಸರಣಿ ಸಿನಿಮಾಗಳ ನಿರ್ದೇಶನಕ್ಕೆ ಖ್ಯಾತರು. 'ಸಿಟಾಡೆಲ್' ವೆಬ್ ಸರಣಿ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಮೂರು ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ

  ಬಹುತೇಕ ಹಾಲಿವುಡ್‌ನಲ್ಲಿಯೇ ನೆಲೆ ಊರಿರುವ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಅನ್ನು ಪೂರ್ಣವಾಗಿ ತೊರೆದಿಲ್ಲ. ಹಿಂದಿಯ, 'ಶೀಲಾ', 'ಜೀ ಲೆ ಜರಾ' ಮತ್ತು ಕಲ್ಪಾ ಚಾವ್ಲಾ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿರುವ 'ದಿ ಮ್ಯಾಟ್ರಿಕ್ಸ್; ರಿಸೆರಕ್ಷನ್' ಸಿನಿಮಾವು ಡಿಸೆಂಬರ್ 15ಕ್ಕೆ ಬಿಡುಗಡೆ ಆಗಲಿದೆ. ಪ್ರಿಯಾಂಕಾ ನಟಿಸಿದ್ದ ಹಾಲಿವುಡ್ ಸಿನಿಮಾ 'ವಿ ಕ್ಯಾನ್ ಬಿ ಹೀರೋಸ್' ಇತ್ತೀಚೆಗೆ ಬಿಡುಗಡೆ ಆಗಿತ್ತು.

  ಹಾಡು ಬಿಡುಗಡೆ ಮಾಡಲಿದ್ದಾರೆ ಪ್ರಿಯಾಂಕಾ

  ಹಾಡು ಬಿಡುಗಡೆ ಮಾಡಲಿದ್ದಾರೆ ಪ್ರಿಯಾಂಕಾ

  ಪ್ರಿಯಾಂಕಾ ಚೋಪ್ರಾ, ಖ್ಯಾತ ಹಾಲಿವುಡ್ ಗಾಯಕ ನಿಕ್ ಜೋನಸ್ ಅನ್ನು ವಿವಾಹವಾದ ಬಳಿಕ ಅಮೆರಿಕದಲ್ಲಿಯೇ ನೆಲೆಸಿದ್ದಾರೆ. ಆಗಾಗ್ಗೆ ಭಾರತಕ್ಕೆ ಭೇಟಿ ನೀಡುತ್ತಾರೆ ಅಷ್ಟೆ. ಹಿಂದಿ ಸಿನಿಮಾಗಳಲ್ಲಿ ನಟಿಸುವುದು, ನಿರ್ಮಾಣ ಮಾಡುವುದನ್ನು ನಿಲ್ಲಿಸದ ಪ್ರಿಯಾಂಕಾ, ಹೆಚ್ಚಿಗೆ ಹಾಲಿವುಡ್ ಸಿನಿಮಾಗಳ ಕಡೆಗೆ ಗಮನ ಹರಿಸಿದ್ದಾರೆ. ಇತ್ತೀಚೆಗೆ 'ಅನ್‌ಫಿನಿಷ್ಡ್' ಹೆಸರಿನ ಪುಸ್ತಕವನ್ನು ಸಹ ಪ್ರಿಯಾಂಕಾ ಚೋಪ್ರಾ ಹೊರತಂದಿದ್ದಾರೆ. ಈ ಪುಸ್ತಕ ಬೆಸ್ಟ್ ಸೆಲ್ಲರ್ ಎನಿಸಿಕೊಂಡಿದೆ. ಜೊತೆಗೆ ಹೊಸ ಆಲ್ಬಂ ಹಾಡೊಂದನ್ನು ಸಹ ಬಿಡುಗಡೆ ಮಾಡುವ ಯೋಜನೆಲ್ಲಿದ್ದಾರೆ ಈ ನಟಿ. ಈ ಹಿಂದೆ ಪಿಟ್‌ಬುಲ್ ಜೊತೆ ಸೇರಿ ಹಾಡೊಂದನ್ನು ಹೊರ ತಂದಿದ್ದರು.

  English summary
  Actress Priyanka Chopra injured while shooting Hollywood web series Citadel. She had a cut on her eyebrow badly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X