ಪ್ರಿಯಾಂಕಾ ಚೋಪ್ರಾ ಹೊಸ ಬ್ಯುಸಿನೆಸ್: ಬೆಲೆ ಕೇಳಿ ಕಂಗಾಲಾದ ಅಭಿಮಾನಿಗಳು!

ಪ್ರಿಯಾಂಕಾ ಚೋಪ್ರಾ ಭಾರತದ ಯಶಸ್ವೀ ನಟಿಯಾಗಿರುವ ಜೊತೆಗೆ ಯಶಸ್ವಿ ಉದ್ಯಮಿ ಸಹ ಹೌದು. ಪ್ರಸ್ತುತ ಹಾಲಿವುಡ್ ಸಿನಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಪ್ರಿಯಾಂಕಾ ಇತ್ತೀಚೆಗೆ ಹೊಸ ಉದ್ಯಮವೊಂದನ್ನು ಪ್ರಾರಂಭಿಸಿದ್ದಾರೆ.

ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ನಟಿ ಪ್ರಿಯಾಂಕಾ ಪ್ರಸ್ತುತ ಗೃಹೋಪಯೋಗಿ ವಸ್ತುಗಳ ಬ್ರ್ಯಾಂಡ್ ಒಂದನ್ನು ಸ್ಥಾಪಿಸಿದ್ದಾರೆ. ಜೂನ್ 23ರಂದು ಲಾಂಚ್ ಆದ ಹೊಸ ಸಂಸ್ಥೆಯ ಮೂಲಕ ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಗೃಹೋಪಯೋಗಿ ವಸ್ತುಗಳ ಜೊತೆಗೆ ಮನೆಯ ಡಿಸೈನ್, ಪ್ಲ್ಯಾನಿಂಗ್, ತಂತ್ರಜ್ಞಾನ ಆಧರಿತ ಸ್ಮಾರ್ಟ್ ಹೋಮ್ ನಿರ್ಮಾಣವನ್ನು ಪ್ರಿಯಾಂಕಾ ಚೋಪ್ರಾರ ಹೊಸ ಸಂಸ್ಥೆ 'ಸೋನಾ ಹೋಮ್' ಮಾಡಿಕೊಡಲಿದೆ. ಆದರೆ ಪ್ರಿಯಾಂಕಾ ಚೋಪ್ರಾ ಲಾಂಚ್ ಮಾಡಿರುವ ಸೋನಾ ಹೋಮ್‌ನ ಗೃಹೋಪಯೋಗಿ ವಸ್ತುಗಳ ಬೆಲೆ ಕೇಳಿ ಗ್ರಾಹಕರು ಕಂಗಾಲಾಗಿದ್ದಾರೆ!

ಬೆಲೆ ಕೇಳಿ ಹೌಹಾರದಿರಿ

ಬೆಲೆ ಕೇಳಿ ಹೌಹಾರದಿರಿ

ಸೋನಾ ಹೋಮ್‌ ಮೂಲಕ ಟೇಬಲ್ ಕ್ಲಾತ್, ಕಪ್ಪು-ಸಾಸರ್, ಬೆಡ್ ಲೈಟ್, ಟವೆಲ್‌ಗಳು, ಬಾಟಲ್ ಕೂಲರ್, ಸ್ಪೂನು ಇನ್ನಿತರೆ ಕೆಲವು ಗೃಹೋಪಯೋಗಿ ವಸ್ತುಗಳನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಲಾಗುತ್ತಿದ್ದು. ಅತ್ಯಂತ ದುಬಾರಿ ಬೆಲೆಯನ್ನು ಈ ವಸ್ತುಗಳಿಗೆ ಇಡಲಾಗಿದೆ. ಅದೆಷ್ಟು ದುಬಾರಿ ಬೆಲೆ ಇವಕ್ಕಿದೆಯೆಂದರೆ ಸೋನಾ ಹೋಮ್‌ನಲ್ಲಿ ಒಂದು ಟೇಬಲ್ ಕ್ಲಾತ್ ಕೊಳ್ಳುವ ಬೆಲೆಯಲ್ಲಿ ಒಳ್ಳೆಯ ಸೆಕೆಂಡ್ ಹ್ಯಾಂಡ್ ಪಲ್ಸರ್ ಬೈಕ್ ಕೊಂಡುಕೊಳ್ಳಬಹುದು! ಅಥವಾ 273 ಲೀಟರ್ ಪೆಟ್ರೋಲ್ ಹಾಕಿಸಿಕೊಳ್ಳಬಹುದು!

ಎರಡು ಟೇಬಲ್ ಕ್ಲಾತ್ ಬೆಲೆಗೆ ಹೊಸ ಐಫೋನ್ 13 ಖರೀದಿಸಬಹುದು!

ಎರಡು ಟೇಬಲ್ ಕ್ಲಾತ್ ಬೆಲೆಗೆ ಹೊಸ ಐಫೋನ್ 13 ಖರೀದಿಸಬಹುದು!

ಹೌದು, ಪ್ರಿಯಾಂಕಾ ಚೋಪ್ರಾರ ಸೋನಾ ಹೋಮ್‌ನಲ್ಲಿ ಒಂದು ಟೇಬಲ್ ಕ್ಲಾತ್ (ಟೇಬಲ್‌ ಮೇಲೆ ಹೊದಿಸುವ ಬಟ್ಟೆ) ಬರೋಬ್ಬರಿ 398 ಡಾಲರ್. ಭಾರತೀಯ ರುಪಾಯಿಯಲ್ಲಿ 31 ಸಾವಿರಕ್ಕಿಂತೂ ಹೆಚ್ಚು. ಒಂದು ಸಣ್ಣ ಸೈಜಿನ ತಟ್ಟೆಯ ಬೆಲೆ 198 ಡಾಲರ್. ಭಾರತೀಯ ರುಪಾಯಿಯಲ್ಲಿ 15,700 ರುಪಾಯಿ! ಈ ವಸ್ತುಗಳು ಭಾರತೀಯ ರುಪಾಯಿಯಲ್ಲಿ ಮಾತ್ರವೇ ದುಬಾರಿಯಲ್ಲ ಡಾಲರ್ ತುಲನೆಯಲ್ಲಿಯೂ ದುಬಾರಿಯೇ. ಒಂದು ಟೇಬಲ್‌ ಕ್ಲಾತ್‌ಗೆ 388 ಡಾಲರ್ ಕೊಟ್ಟು ಸಾಮಾನ್ಯ ಅಮೆರಿಕನ್ನರು ಸಹ ಖರೀದಿಸಲಾರರು. ಅಂದಹಾಗೆ ಅಮೆರಿಕದಲ್ಲಿ ಒಂದು ಐಫೋನ್ 13 ಬೆಲೆ 799 ಡಾಲರ್. ಪ್ರಿಯಾಂಕಾರ ಎರಡು ಸೊನಾ ಹೋಮ್ ಟೇಬಲ್ ಕ್ಲಾತ್ ಬೆಲೆಗೆ ಒಂದು ಹೊಸ ಐಫೋನ್ 13 ಬಂದುಬಿಡುತ್ತದೆ!

ಬೆಲೆ ಕಂಗಾಲಾಗಿದ್ದಾರೆ ನೆಟ್ಟಿಗರು

ಬೆಲೆ ಕಂಗಾಲಾಗಿದ್ದಾರೆ ನೆಟ್ಟಿಗರು

ಪ್ರಿಯಾಂಕಾ ಚೋಪ್ರಾರ ಗೃಹೋಪಯೋಗಿ ವಸ್ತುಗಳ ಬೆಲೆ ಕೇಳಿ ನೆಟ್ಟಿಗರು ಕಂಗಾಲಾಗಿದ್ದಾರೆ. ಶ್ರೀಮಂತರು ಸಹ ಪ್ರಿಯಾಂಕಾರ ಈ ವಸ್ತುಗಳನ್ನು ಕೊಂಡುಕೊಳ್ಳಲು ಹಿಂಜರಿಯುತ್ತಾರೆ ಎಂದಿದ್ದಾರೆ. ''ನನ್ನ ಒಂದು ತಿಂಗಳ ಸಂಬಳಕ್ಕೆ ಕೇವಲ ನಾನೊಂದು ಟೇಬಲ್ ಕ್ಲಾತ್ ಮಾತ್ರವೇ ಕೊಳ್ಳಬಲ್ಲೆ'' ಎಂದಿದ್ದಾರೆ ಒಬ್ಬ ಬಳಕೆದಾರ. ''ಪ್ರಿಯಾಂಕಾ ಚೋಪ್ರಾರ ಸೋನಾ ಹೋಮ್‌ನ ಟೇಬಲ್ ಕ್ಲಾತ್ ಅನ್ನು ಕೊಳ್ಳುವಷ್ಟು ಶ್ರೀಮಂತನಾಗುವುದೇ ನನ್ನ ಬದುಕಿನ ಗುರಿ'' ಎಂದು ಇನ್ನೊಬ್ಬ ಬಳಕೆದಾರರು ಹೇಳಿದ್ದಾರೆ. ಸೋನಾ ಹೋಮ್‌ನ ವಸ್ತುಗಳ ಬೆಲೆಯ ಬಗ್ಗೆ ಸಖತ್ ಮೀಮ್‌ಗಳು ಹರಿದಾಡುತ್ತಿವೆ.

ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೊಂದಿರುವ ಪ್ರಿಯಾಂಕಾ

ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಹೊಂದಿರುವ ಪ್ರಿಯಾಂಕಾ

ಪ್ರಿಯಾಂಕಾ ಚೋಪ್ರಾ ಉತ್ತಮ ನಟಿಯಾಗಿರುವ ಜೊತೆಗೆ ಒಳ್ಳೆಯ ಉದ್ಯಮಿ ಸಹ. ನ್ಯೂಯಾರ್ಕ್, ಮುಂಬೈ ಸೇರಿದಂತೆ ವಿಶ್ವದ ಹಲವು ನಗರಗಳಲ್ಲಿ ತಮ್ಮದೇ ಆದ ರೆಸ್ಟೊರೆಂಟ್ ಗಳನ್ನು ತೆರೆದಿದ್ದಾರೆ ಪ್ರಿಯಾಂಕಾ. ಅಲ್ಲದೆ, ಮುಂಬೈನಲ್ಲಿ ರಿಯಲ್ ಎಸ್ಟೇಟ್ ಉದ್ಯಮವನ್ನೂ ಪ್ರಿಯಾಂಕಾ ಚೋಪ್ರಾ ನಡೆಸುತ್ತಿದ್ದಾರೆ. ಕೆಲವು ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಅವನ್ನು ಬಾಡಿಗೆಗೆ ಬಿಟ್ಟಿದ್ದಾರೆ ಪ್ರಿಯಾಂಕಾ. ಐಶಾರಾಮಿ ಅಪಾರ್ಟ್‌ಮೆಂಟ್‌ಗಳನ್ನು ಸಹ ಹೊಂದಿದ್ದಾರೆ. ನಟಿ ಜಾಕ್ವೆಲಿನ್ ಫರ್ನಾಂಡೀಸ್ ಪ್ರಸ್ತುತ ನೆಲೆಸಿರುವುದು ಪ್ರಿಯಾಂಕಾ ಚೋಪ್ರಾ ಒಡೆತನದ ಫ್ಲ್ಯಾಟ್‌ನಲ್ಲಿಯೇ.

More from Filmibeat

English summary
Actress Priyanka Chopra launches home wear brand Sona Home but the price is very high.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X