For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ವಿರುದ್ಧ ಹೋರಾಟ: ದೇಣಿಗೆ ಸಂಗ್ರಹಕ್ಕಿಳಿದ ಪ್ರಿಯಾಂಕಾ-ನಿಕ್ ಜೋನಸ್

  |

  ವಾಸ್ತವ್ಯವನ್ನು ಹಾಲಿವುಡ್‌ಗೆ ಸ್ಥಳಾಂತರಿಸಿಕೊಂಡಿರುವ ನಟಿ ಪ್ರಿಯಾಂಕಾ ಚೋಪ್ರಾ ಈಗ ಅನಿವಾಸಿ ಭಾರತೀಯರು. ಹಾಲಿವುಡ್‌ನಲ್ಲಿದ್ದರೂ ಭಾರತದ ಜನರ ಸಂಕಷ್ಟಗಳಿಗೆ ನೆರವಾಗುವ ಯತ್ನ ಮಾಡುತ್ತಲೇ ಇರುತ್ತಾರೆ ಪ್ರಿಯಾಂಕಾ.

  ಕೋವಿಡ್‌ ಸಮಸ್ಯೆಯಿಂದ ಭಾರತೀಯರು ಹಲವು ರೀತಿಯ ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಈ ಸಮಯದಲ್ಲಿ ಭಾರತದ ಹಲವು ಸೆಲೆಬ್ರಿಟಿಗಳು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಸೋನು ಸೂದ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ರವೀನಾ ಟಂಡನ್, ಅನುಷ್ಕಾ ಶರ್ಮಾ ಇನ್ನೂ ಹಲವರು ನೆರವಿನ ಹಸ್ತ ಚಾಚುತ್ತಿದ್ದಾರೆ. ಪ್ರಿಯಾಂಕಾ ಚೋಪ್ರಾ ಸಹ ಕೋವಿಡ್‌ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಜೊತೆಗೆ ಪತಿ ನಿಕ್ ಜೋನಸ್ ಅನ್ನೂ ಸೇರಿಸಿಕೊಂಡಿದ್ದಾರೆ.

  ಭಾರತದಲ್ಲಿ ಕೋವಿಡ್‌ ನಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯ ಮಾಡಲೆಂದೇ ದೇಣಿಗೆ ಸಂಗ್ರಹ ಅಭಿಯಾನ ಆರಂಭಿಸಿರುವ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್, ಈವರೆಗೆ 7.5 ಕೋಟಿ ಹಣ ಸಂಗ್ರಹಿಸಿದ್ದಾರೆ.

  ಇದೀಗ ತಮ್ಮ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ, ದೇಣಿಗೆ ಸಂಗ್ರಹ ಗುರಿಯನ್ನು 22 ಕೋಟಿ ರು.ಗೆ ಏರಿಸಿರುವುದಾಗಿ ಹೇಳಿದ್ದಾರೆ. 22 ಕೋಟಿ ಹಣ ಸಂಗ್ರಹವಾದ ಬಳಿಕ ಆ ಹಣವನ್ನು 'ಗಿವ್ ಇಂಡಿಯಾ' ಸಹಾಯ ಸಂಸ್ಥೆ ಮೂಲಕ ಕೋವಿಡ್ ನಿಂದ ಸಂಕಷ್ಟಕ್ಕೆ ಒಳಗಾದವರಿಗೆ ನೆರವಾಗಲು ಬಳಸಲಾಗುತ್ತದೆ.

  'ಟುಗೆದರ್ ಇಂಡಿಯಾ' ಹೆಸರಿನಲ್ಲಿ ಈ ದೇಣಿಗೆ ಸಂಗ್ರಹ ಅಭಿಯಾನ ನಡೆಯುತ್ತಿದೆ. ಈಗಾಗಲೇ ಹಲವಾರು ಮಂದಿ ಈ ಅಭಿಯಾನದಡಿ ದೇಣಿಗೆ ನೀಡಿದ್ದಾರೆ.

  ತಂದೆ-ತಾಯಿ ವಿಚ್ಛೇದನ ಪಡೆದು ದೂರವಾಗಿದ್ದಾಗ ಖುಷಿಯಾಗಿತ್ತು ಎಂದ ಶ್ರುತಿ ಹಾಸನ್ | Filmibeat Kannada

  ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ದಂಪತಿ ಸಹ ಜಂಟಿಯಾಗಿ ಇದೇ ಮಾದರಿಯ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಈ ದಂಪತಿ ಮೇ 14 ರ ವರೆಗೆ 11 ಕೋಟಿ ಹಣ ಸಂಗ್ರಹಿಸಿದ್ದರು. ಅಂದೇ ಆ ಅಭಿಯಾನವನ್ನು ಅಂತ್ಯಗೊಳಿಸಿ ಸಂಗ್ರಹಿಸಲಾದ ಹಣವನ್ನು ಆಕ್ಟ್‌ ಗ್ರ್ಯಾಂಟ್ಸ್‌ಗೆ ಕೋವಿಡ್ ನಿಂದ ಸಂಕಷ್ಟದಲ್ಲಿರುವವರ ಸಹಾಯಕ್ಕೆಂದು ನೀಡಿದರು.

  English summary
  Actress Priyanka Chopra raising funds to help India fight against COVID 19. She raised 7.5 crore she aiming to collect 22 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X