For Quick Alerts
  ALLOW NOTIFICATIONS  
  For Daily Alerts

  ಅರ್ಹತೆ ಪ್ರಶ್ನಿಸಿದ ಪತ್ರಕರ್ತನಿಗೆ ಪ್ರಿಯಾಂಕಾ ಚೋಪ್ರಾ ದಿಟ್ಟ ಉತ್ತರ

  |

  ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ಅವರ ಪತಿ ನಿಕ್ ಜೋನಸ್ ಇತ್ತೀಚೆಗಷ್ಟೆ 93ನೇ ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾಗಳ ಪಟ್ಟಿಯನ್ನು ಪ್ರಕಟಿಸಿದರು.

  ಹೀಗೆ ಆಸ್ಕರ್‌ ಪ್ರಶಸ್ತಿಯ ನಾಮಿನೇಷನ್‌ ಪಟ್ಟಿಯನ್ನು ಪ್ರಕಟಿಸಲು ಪ್ರಿಯಾಂಕಾ ಚೋಪ್ರಾಗೆ ಏನು ಅರ್ಹತೆ ಇದೆ ಎಂದು ವಿದೇಶಿ ಪತ್ರಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸಿದ್ದರು. ಆ ಪತ್ರಕರ್ತನಿಗೆ ಸೂಕ್ತ ಉತ್ತರವನ್ನು ಪ್ರಿಯಾಂಕಾ ನೀಡಿದ್ದಾರೆ.

  ಪ್ರಿಯಾಂಕಾ ಚೋಪ್ರಾ ನಟನೆಯ ಸಿನಿಮಾ ಆಸ್ಕರ್‌ಗೆ ಹತ್ತಿರಪ್ರಿಯಾಂಕಾ ಚೋಪ್ರಾ ನಟನೆಯ ಸಿನಿಮಾ ಆಸ್ಕರ್‌ಗೆ ಹತ್ತಿರ

  ಆಸ್ಟ್ರೇಲಿಯಾದ ಪತ್ರಕರ್ತ ಪೀಟರ್ ಫೋರ್ಡ್ ಟ್ವೀಟ್ ಮಾಡಿ, 'ಸಿನಿಮಾರಂಗಕ್ಕೆ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್ ಅವರುಗಳು ನೀಡಿರುವ ಕೊಡುಗೆ ಏನು? ಆಸ್ಕರ್ ನಾಮಿನೇಷನ್ ಘೋಷಿಸುವ ಅರ್ಹತೆ ಅವರಿಗೆ ಏನಿದೆ?' ಎಂದು ಪೀಟರ್ ಫೋರ್ಡ್ ಪ್ರಶ್ನಿಸಿದ್ದಾರೆ.

  ಇದಕ್ಕೆ ಉತ್ತರಿಸಿರುವ ನಟಿ ಪ್ರಿಯಾಂಕಾ ಚೋಪ್ರಾ, 'ಅರ್ಹತೆಯ ಮಾನದಂಡ ಏನು?' ಎಂದು ಪ್ರಶ್ನಿಸಿರುವ ನಿಮ್ಮ ಯೋಚನೆಯ ಬಗ್ಗೆ ಗೌರವವಿದೆ. ಇಲ್ಲಿ ನಾನು ನಟಿಸಿರುವ 60 ಕ್ಕೂ ಹೆಚ್ಚು ಸಿನಿಮಾಗಳ ಪಟ್ಟಿಯನ್ನು ನೀಡುತ್ತಿದ್ದೇನೆ, ನಿಮ್ಮ ಗಮನಕ್ಕಿರಲಿ' ಎಂದು ತಮ್ಮ ಸಿನಿಮಾಗಳ ಮಾಹಿತಿಯುಳ್ಳ ಕಿರು ವಿಡಿಯೋ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ ಪ್ರಿಯಾಂಕಾ ಚೋಪ್ರಾ.

  93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ93ನೇ ಆಸ್ಕರ್: ಅಂತಿಮ ಸುತ್ತಿಗೆ ಆಯ್ಕೆಯಾದ ಸಿನಿಮಾ, ನಟ-ನಟಿಯರ ಪಟ್ಟಿ

  ವಿಜಯ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ತಮಿಳು ಸಿನಿಮಾ 'ತಮಿಳನ್' ಮೂಲಕ ನಟನಾ ವೃತ್ತಿ ಆರಂಭಿಸಿದ ಪ್ರಿಯಾಂಕಾ ಚೋಪ್ರಾ ಈ ವರೆಗೆ 60 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವುಗಳಲ್ಲಿ ಕೆಲವು ಹಾಲಿವುಡ್ ಸಿನಿಮಾಗಳು ಸಹ ಸೇರಿವೆ.

  'ಫ್ಯಾಷನ್' ಸಿನಿಮಾದಲ್ಲಿನ ನಟನೆಗಾಗಿ ಪ್ರಿಯಾಂಕಾ ಚೋಪ್ರಾಗೆ ರಾಷ್ಟ್ರ ಪ್ರಶಸ್ತಿ ದೊರೆತಿದೆ. ಐದು ಫಿಲಂ ಫೇರ್‌ ಪ್ರಶಸ್ತಿಗಳು ಸಹ ಪ್ರಿಯಾಂಕಾ ಪಾಲಾಗಿವೆ. ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಜೊತೆಗೆ ಪದ್ಮಶ್ರೀ ಗೌರವವನ್ನೂ ಪಡೆದಿದ್ದಾರೆ ಪ್ರಿಯಾಂಕಾ ಚೋಪ್ರಾ.

  ರಾಬರ್ಟ್ ನಂತಹ ಒಳ್ಳೆ ಸಿನಿಮಾ ತೆಗೆದುಕೊಂಡಿದ್ದಕ್ಕೆ ಖುಷಿ ಇದೆ | Filmibeat Kannada

  ಇದೀಗ ಪ್ರಿಯಾಂಕಾ ಚೋಪ್ರಾ ಸಹ ನಿರ್ಮಾಣ ಮಾಡಿ ಮುಖ್ಯ ಪಾತ್ರದಲ್ಲಿ ನಟಿಸಿರುವ 'ದಿ ವೈಟ್ ಟೈಗರ್' ಸಿನಿಮಾವು ಆಸ್ಕರ್‌ನ ಚಿತ್ರಕತೆ ರೂಪಾಂತರ (adapted screenplay) ವಿಭಾಗದಲ್ಲಿ ಅಂತಿಮ ಸುತ್ತಿಗೆ ಆಯ್ಕೆ ಆಗಿದೆ.

  English summary
  Actress Priyanka Chopra gave reply to a journalist who questions her credibility to announce Oscar nominations.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X