For Quick Alerts
  ALLOW NOTIFICATIONS  
  For Daily Alerts

  ವಿವಾದ ಬಿಟ್ಟು ಹಾಲಿವುಡ್ ಚಿತ್ರದ ಅಪ್ಡೇಟ್ ಕೊಟ್ಟ ಪ್ರಿಯಾಂಕಾ ಚೋಪ್ರಾ!

  |

  ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹೆಚ್ಚಾಗಿ ಸುದ್ದಿ ಆಗುತ್ತಿರುವುದು ತನ್ನ ಪತಿ ನಿಕ್‌ ಸಲುವಾಗಿ. ಹೌದು ಪ್ರಿಯಾಂಕಾ ಚೋಪ್ರಾ ತನ್ನ ಸಾಮಾಜಿಕ ಜಾಲತಾಣದ ಖಾತೆಗಳಿಂದ ತನ್ನ ಪತಿಯ ಹೆಸರನ್ನು ಕೈ ಬಿಟ್ಟಿದ್ದಾರೆ. ಹಾಗಾಗಿ ಪ್ರಿಯಾಂಕಾ ಸಿಕ್ಕಾ ಪಟ್ಟೆ ಸುದ್ದಿಯಲ್ಲಿದ್ದಾರೆ.

  ಈ ಹಿಂದೆ ಸಮಂತಾ ಕೂಡ ಹೀಗೆ ಮೊದಲು ಪತಿಯ ಹೆಸರನ್ನು ಕೈ ಬಿಟ್ಟು, ನಂತರ ವಿಚ್ಚೇದನ ಪಡೆದುಕೊಂಡಿದ್ದಾರೆ. ಹಾಗಾಗಿ ಪ್ರಿಯಾಂಕಾ ಕೂಡ ಇದೇ ದಾರಿ ಹಿಡಿದಿರಬಹುದು ಎಂದು ಚರ್ಚೆ ಅಗುತ್ತಿದೆ.

  ಆದರೆ ಈ ವಿವಾದದ ನಡುವೆ ಪ್ರಿಯಾಂಕಾ ತಮ್ಮ ಮುಂದಿನ ಸಿನಿಮಾ ಸುದ್ದಿಯನ್ನು ಹೊರ ಹಾಕಿದ್ದಾರೆ. ಹಾಲಿವುಡ್‌ ಚಿತ್ರದ ಲುಕ್‌ ಬಿಡುಗಡೆ ಮಾಡಿದ್ದಾರೆ.

   ವಿವಾದಕ್ಕೆ ತಲೆಕೆಸಿಕೊಂಡಿಲ್ಲ ಪ್ರಿಯಾಂಕಾ ಚೋಪ್ರಾ!

  ವಿವಾದಕ್ಕೆ ತಲೆಕೆಸಿಕೊಂಡಿಲ್ಲ ಪ್ರಿಯಾಂಕಾ ಚೋಪ್ರಾ!

  ನಟಿ ಪ್ರಿಯಾಂಕಾ ಚೋಪ್ರಾ ಮುಂದಿನ ಹಾಲಿವುಡ್ ಸಿನಿಮಾ 'ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್‌'. ಸದ್ಯ ಈ ಚಿತ್ರದಲ್ಲಿನ ಪ್ರಿಯಾಂಕಾ ಚೋಪ್ರಾ ಲುಕ್ ರಿವೀಲ್‌ ಆಗಿದೆ. ಮೊದಲ ಪೋಸ್ಟರ್‌ನಲ್ಲಿಯೇ ಪ್ರಿಯಾಂಕಾ ಹೆಚ್ಚು ಗಮನ ಸೆಳೆದಿದ್ದಾರೆ.

  ಪೋಸ್ಟರ್‌ ನೋಡಿಯೇ ಚಿತ್ರದಲ್ಲಿ ಪಾತ್ರವನ್ನು ಊಹಿಸಬಹುದು. ಪ್ರಿಯಾಂಕಾ ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ. ಪೋಸ್ಟರ್‌ನಲ್ಲಿ ಪ್ರಿಯಾಂಕಾ ಲುಕ್‌ ಭರವಸೆ ಮೂಡಿಸುತ್ತದೆ. ಮತ್ತು ಈ ಚಿತ್ರದ ಮೂಲಕ ಪ್ರಿಯಾಂಕಾ ಮತ್ತಷ್ಟು ಸದ್ದು ಮಾಡಲಿದ್ದಾರೆ ಎನ್ನುವ ನಿರೀಕ್ಷೆಯನ್ನು ಈ ಪೋಸ್ಟರ್ ಹುಟ್ಟು ಹಾಕಿದೆ.

   ಹಾಲಿವುಡ್‌ ಚಿತ್ರದ ಫಸ್ಟ್‌ ರಿವೀಲ್‌ ಮಾಡಿದ ಪ್ರಿಯಾಂಕಾ ಚೋಪ್ರಾ!

  ಹಾಲಿವುಡ್‌ ಚಿತ್ರದ ಫಸ್ಟ್‌ ರಿವೀಲ್‌ ಮಾಡಿದ ಪ್ರಿಯಾಂಕಾ ಚೋಪ್ರಾ!

  ಸದ್ಯ ರಿಲೀಸ್‌ ಆಗಿರುವ ಈ ಪೋಸ್ಟರ್ ಪ್ರಿಯಾಂಕಾ ಚೋಪ್ರಾ ಅವರ ಪಾತ್ರದ ಪರಿಚಯ ಮಾಡಿದೆ. ಚಿತ್ರದಲ್ಲಿ ಪ್ರಿಯಾಂಕಾ ಇದೇ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಈ ಚಿತ್ರದಲ್ಲಿ ಕೀನು ರೀವ್ಸ್, ಕ್ಯಾರಿ-ಆನ್ ಮಾಸ್ ಸೇರಿದಂತೆ ಹಲವರು ನಟಿಸಿದ್ದಾರೆ.

  ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ 'ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್‌' ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಜೊತೆಗೆ "ಶಿ ಈಸ್ ಹಿಯರ್" ರೀ-ಎಂಟರ್ ಎಂದು ಬರೆದುಕೊಂಡಿದ್ದಾರೆ. ಈ ಮೊದಲು ಪ್ರಿಯಾಂಕಾ ಇದೇ ಚಿತ್ರದ ಪೋಸ್ಟರ್‌ ಹಂಚಿಕೊಂಡಿದ್ದರು. ಆದರೆ ಆ ಪೋಸ್ಟರ್‌ನಲ್ಲಿ ಪ್ರಿಯಾಂಕಾ ಇರಲಿಲ್ಲ. ಬದಲಿಗೆ ಹಲವು ಪಾತ್ರಗಳನ್ನು ಆ ಪೋಸ್ಟರ್‌ನಲ್ಲಿ ಪರಿಚಯಿಸಲಾಗಿತ್ತು. ಈಗ ನಟಿ ಪ್ರಿಯಾಂಕಾ ಅವರ ಪ್ರತ್ಯೇಕ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅದನ್ನು ಸ್ವತಃ ಪ್ರಿಯಾಂಕಾ ಚೋಪ್ರಾ ಅವರೇ ಹಂಚಿಕೊಂಡಿದ್ದಾರೆ.

   ಚಿತ್ರದ ಪೋಸ್ಟರ್‌ ಮೂಲಕ ವಿವಾದಕ್ಕೆ ತೆರೆ!

  ಚಿತ್ರದ ಪೋಸ್ಟರ್‌ ಮೂಲಕ ವಿವಾದಕ್ಕೆ ತೆರೆ!

  ಪ್ರಿಯಾಂಕಾ ಚೋಪ್ರಾ ಮತ್ತು ನಿಲ್‌ ಜೋನಸ್‌ ನಡುವೆ ವೈ ಮನಸ್ಸು ಉಂಟಾಗಿದೆ. ಪ್ರಿಯಾಂಕಾ ಪತಿಯಿಂದ ದೂರ ಆಗುತ್ತಾರ ಎನ್ನು ಪ್ರಶ್ನೆಗಳು ಹೊಟ್ಟಿಕೊಂಡಿವೆ. ಇದಕ್ಕೆ ಕಾರಣ ಆಗಿರುವುದು ಪ್ರಿಯಾಂಕಾ ಸಾಮಾಜಿಕ ಜಾಲತಾಣದಲ್ಲಿ ಹೆಸರು ಬದಲಿಸಿಕೊಂಡಿರುವುದು.

  ಈ ವಿವಾದದ ಕುರಿತು ಪ್ರಿಯಾಂಕಾ ಚೋಪ್ರಾ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಆದರೂ ಈ ಸುದ್ದಿ ತಣ್ಣಗಾಗಿಲ್ಲ. ವಿವಾದದ ಬಗ್ಗೆ ಯಾವುದೇ ಪ್ರಕ್ರಿಯೆ ನೀಡದ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಮುಂದಿ ಹಾಲಿವುಡ್‌ ಚಿತ್ರದ ಲುಕ್‌ ರಿವೀಲ್‌ ಮಾಡಿದ್ದಾರೆ.

  ಸದ್ಯ ಈ ಲುಕ್‌ ಬಗ್ಗೆ ಅಭಿಮಾನಿಗಳು ಚರ್ಚೆಗೆ ಇಳಿದಿದ್ದಾರೆ. ಪ್ರಿಯಾಂಕಾ ಲುಕ್‌ಗೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ. ಜೊತೆಗೆ ಈ ಚಿತ್ರದಲ್ಲಿ ಪ್ರಿಯಾಂಕಾ ಪಾತ್ರ ಏನು ಎನ್ನುವ ಬಗ್ಗೆ ಊಹೆ ಮಾಡಲಾಗುತ್ತಿದೆ.

   ಹಾಲಿವುಡ್‌ನಲ್ಲೇ ಬ್ಯುಸಿ ಆದ ಪ್ರಿಯಾಂಕಾ ಚೋಪ್ರಾ !

  ಹಾಲಿವುಡ್‌ನಲ್ಲೇ ಬ್ಯುಸಿ ಆದ ಪ್ರಿಯಾಂಕಾ ಚೋಪ್ರಾ !

  ಬಾಲಿವುಡ್‌ನಿಂದ ಹಾಲಿವುಡ್‌ಗೆ ಹಾರಿದ ನಟಿ ಹಾರಿದ ನಟಿ ಪ್ರಿಯಾಂಕಾ ಅಲ್ಲೇ ಹೆಚ್ಚೆಚ್ಚು ಸಿನಿಮಾಗಳನ್ನು ಮಾಡುತ್ತಿದ್ದಾರೆ. ಈಗಾಗಲೇ 'ಬೇ ವಾಚ್', 'ದಿ ಸ್ಕೈ ಈಸ್ ಪಿಂಕ್', 'ವೈಟ್ ಟೈಗರ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಮೆಚ್ಚುಗೆ ಗಳಿಸಿದ್ದಾರೆ.

  ಈಗ 'ದಿ ಮ್ಯಾಟ್ರಿಕ್ಸ್ ರಿಸರೆಕ್ಷನ್ಸ್‌' ಚಿತ್ರದ ಮೂಲಕ ಮೋಡಿ ಮಾಡಲು ಬರುತ್ತಿದ್ದಾರೆ. ಸದ್ಯ ಪ್ರಿಯಾಂಕಾ ಚೋಪ್ರಾ ಅವರ ಲುಕ್ ಆಕೆಯ ಪಾತ್ರದ ಮೇಲೆ ನಿರೀಕ್ಷೆ ಹುಟ್ಟು ಹಾಕಿದೆ.

  English summary
  Priyanka Chopra Reveale 'The Matrix Resurrections' First Look- But Everyone Want To Know About Missing Surname,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X