ಮಗಳನ್ನು ಪರಿಚಯಿಸಿದ ಪ್ರಿಯಾಂಕಾ ಚೋಪ್ರಾ: ಸೋ ಕ್ಯೂಟ್ ಎಂದ ನೆಟ್ಟಿಗರು!
ಬಾಲಿವುಡ್‌ನಲ್ಲಿ ದೇಸಿ ಗರ್ಲ್ ಆಗಿ ಮೆರೆದು ಮುಂದೆ ಹಾಲಿವುಡ್‌ನಲ್ಲೂ ಮಿಂಚು ಹರಿಸಿದ ಚೆಲುವೆ ಪ್ರಿಯಾಂಕ ಚೋಪ್ರಾ. ಹಾಲಿವುಡ್ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡಲು ಆರಂಭಿಸಿದ ಪಿಗ್ಗಿ ಹಾಲಿವುಡ್ ಗಾಯಕ, ನಟ ನಿಕ್ ಜೋನಸ್ ಕೈ ಹಿಡಿದು ವಿದೇಶದಲ್ಲೇ ಸೆಟ್ಲ್ ಆಗಿಬಿಟ್ಟರು. ಪ್ರಿಯಾಂಕಗಿಂತ ನಿಕ್ 10 ವರ್ಷ ಚಿಕ್ಕವನು ಎನ್ನುವ ಕಾರಣಕ್ಕೆ ಆಗ ಇವರಿಬ್ಬರ ಮದುವೆ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿತ್ತು.
ಕಳೆದ ವರ್ಷ ದಂಪತಿ ಸಾರೋಗಸಿ ವಿಧಾನದಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದರು. ಆದರೆ ಇಲ್ಲಿವರೆಗೂ ಮಗುವಿನ ಮುಖವನ್ನು ತೋರಿಸಿರಲಿಲ್ಲ. ಇದೇ ಮೊದಲ ಬಾರಿಗೆ ಮಗಳನ್ನು ಪ್ರಿಯಾಂಕ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಇಷ್ಟು ದಿನ ಮಗಳ ಮುಖವನ್ನು ಯಾಕೆ ರಿವೀಲ್ ಮಾಡಲಿಲ್ಲ ಎನ್ನುವುದಕ್ಕೂ ಇತ್ತೀಚೆಗೆ ಕಾರಣ ನೀಡಿದ್ದರು. ಅಂದಹಾಗೆ ನಿಕ್- ಪ್ರಿಯಾಂಕ ದಂಪತಿಯ ಮುದ್ದಾದ ಮಗಳನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನು ಮಗಳಿಗೆ ಇಬ್ಬರ ಸಂಪ್ರದಾಯದಂತೆ ಮಾಲ್ತಿ ಮೇರಿ ಚೋಪ್ರಾ ಎಂದು ಹೆಸರಿಟ್ಟಿರೋದು ಗೊತ್ತೇಯಿದೆ.
ಬಹಳ ಸಲ ದಂಪತಿ ಮಗಳ ಜೊತೆಗೆ ಇರುವ ಫೋಟೊಗಳನ್ನು ಶೇರ್ ಮಾಡಿದ್ದರು. ಆದರೆ ಅದರಲ್ಲಿ ಮಗಳ ಮುಖ ಕಾಣದಂತೆ ಎಚ್ಚರ ವಹಿಸಿದ್ದರು. ಅಮೆರಿಕಾದ ಲಾಸ್ ಎಂಜಲೀಸ್‌ನಲ್ಲಿ ನಡೆದ 'ಹಾಲಿವುಡ್ ವಾಕ್ ಆಫ್ ಫೇಮ್'ಗೆ ಪ್ರಿಯಾಂಕ- ನಿಕ್ ಮಗಳನ್ನು ಕರೆದುಕೊಂಡ ಬಂದಿದ್ದರು. ಈ ವೇಳೆ ಕ್ಲಿಕ್ಕಿಸಿದ ಫೋಟೊವನ್ನು ಫ್ಯಾನ್ಸ್ ಪೇಜ್‌ನಲ್ಲಿ ಶೇರ್ ಆಗಿದೆ. ಈ ಫೋಟೊ ಈಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗ್ತಿದೆ. ಪ್ರಿಯಾಂಕ ಮಗಳನ್ನು ನೋಡಿ ಬಹಳ ಕ್ಯೂಟ್ ಆಗಿದ್ದಾಳೆ ಎಂದು ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

2018 ಡಿಸೆಂಬರ್‌ನಲ್ಲಿ ಪ್ರಿಯಾಂಕಾ- ನಿಕ್ ಜೋನಸ್ ಮದುವೆ ನೆರವೇರಿತ್ತು. ನಾಲ್ಕು ವರ್ಷಗಳ ನಂತರ ಬಾಡಿಗೆ ತಾಯ್ತನದಿಂದ ಮಗು ಪಡೆದಿದ್ದರು. ಆರೋಗ್ಯ ಸಮಸ್ಯೆಯಿಂದ ತಾವು ಸಾರೋಗಸಿಗೆ ಮುಂದಾಗಿದ್ದಾಗಿ ಇತ್ತೀಚಿಗೆ ಪ್ರಿಯಾಂಕ ಹೇಳಿಕೊಂಡಿದ್ದರು. ಅದು ಬಿಟ್ಟು ಸೌಂದರ್ಯ ಕಮ್ಮಿ ಆಗುತ್ತೆ ಎನ್ನುವ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಿಲ್ಲ ಎಂದಿದ್ದರು.

"ಸೋಶಿಯಲ್ ಮೀಡಿಯಾ ಟ್ರೋಲ್ ಪ್ರಭಾವ ನನ್ನ ಮಗುವಿನ ಮೇಲೆ ಆಗಬಾರದು ಎಂದುಕೊಂಡಿದ್ದೇನೆ. ಅದೇ ಕಾರಣಕ್ಕೆ ಆಕೆಯ ಫೋಟೊ ಕೂಡ ರಿವೀಲ್ ಮಾಡಿಲ್ಲ, ಎಂದು ಇತ್ತೀಚೆಗೆ ಸಂದರ್ಶನದಲ್ಲಿ ಪ್ರಿಯಾಂಕ ಹೇಳಿಕೊಂಡಿದ್ದರಿ. "ಇನ್ನು ಸಾರೋಗಸಿ ಅಷ್ಟು ಸುಲಭ ಅಲ್ಲ. ಅದಕ್ಕಾಗಿ ನಾವು 6 ತಿಂಗಳ ಕಾಲ, ಹುಡುಕಾಡಿದೆವು. ಕೊನೆಗೆ ಒಬ್ಬ ದಯೆ ಇರುವ ಮಹಿಳೆ ಇದಕ್ಕೆ ಒಪ್ಪಿಕೊಂಡಳು. ಅದೇ ಕಾರಣಕ್ಕೆ ನನ್ನ ಮಗುವಿಗೆ ಆಕೆಯ ಹೆಸರು ಸೇರಿಸಿ ಮಾಲ್ತಿ ಮೇರಿ ಚೋಪ್ರಾ ಎಂದು ನಾಮಕರಣ ಮಾಡಿದ್ದೇವೆ" ಎಂದು ಪ್ರಿಯಾಂಕಾ ಚೋಪ್ರಾ ಹೇಳಿಕೊಂಡಿದ್ದರು.


Click it and Unblock the Notifications