For Quick Alerts
  ALLOW NOTIFICATIONS  
  For Daily Alerts

  ಹಾಟ್ ಫೋಟೋ ಶೇರ್ ಮಾಡಿ ಯುವಕರ ನಿದ್ದೆಗೆಡಿಸಿದ ನಟಿ ಪ್ರಿಯಾಂಕಾ

  By ಫಿಲ್ಮಿಬೀಟ್ ಡೆಸ್ಕ್
  |

  ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಬಾಲಿವುಡ್ ಸಿನಿಮಾರಂಗದಿಂದ ಅಂತರ ಕಾಯ್ದುಕೊಂಡಿರುವ ಪ್ರಿಯಾಂಕಾ ಸದ್ಯ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಮತ್ತು ಸೀರಿಸ್ ಗಳಲ್ಲಿ ನಟಿಸುತ್ತಿರುವ ಪ್ರಿಯಾಂಕಾ ಸದ್ಯ ಲಂಡನ್‌ನಲ್ಲಿ ಬೀಡುಬಿಟ್ಟಿದ್ದಾರೆ. ಪ್ರಿಯಾಂಕಾ ಪತಿ ನಿಕ್ ಜೋನಸ್ ಅಮೆರಿಕಾದಲ್ಲಿ ನೆಲೆಸಿದ್ದಾರೆ. ಇತ್ತೀಚಿಗಷ್ಟೆ ಪ್ರಿಯಾಂಕಾ ಮನೆಗೆ ಮರಳಿದ್ದು, ಅನೇಕ ತಿಂಗಳ ಬಳಿಕ ಪತಿಯನ್ನು ಭೇಟಿಯಾಗಿದ್ದಾರೆ.

  ಪತಿ ನಿಕ್ ಜೊತೆ ಇರುವ ಫೋಟೋವನ್ನು ಸಾಮಾಜಿಕ ಜಾಲತಾಣಗಲ್ಲಿ ಶೇರ್ ಮಾಡಿರುವ ಪ್ರಿಯಾಂಕಾ ಸಂತಸ ಹಂಚಿಕೊಂಡಿದ್ದಾರೆ. ಸಖತ್ ಹಾಟ್ ಹಂಚಿಕೊಳ್ಳುವ ಮೂಲಕ ಪ್ರಿಯಾಂಕಾ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. ಬಿಕಿನಿ ತೊಟ್ಟು ಬಿಸಿಲಲ್ಲಿ ಮಲಗಿರುವ ಪ್ರಿಯಾಂಕಾ ಜೊತೆ ನಿಕ್ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ.

  ಹಾಲಿವುಡ್-ಬಾಲಿವುಡ್: ಪ್ರಿಯಾಂಕಾ ಚೋಪ್ರಾ ಆಯ್ಕೆ ಮಾಡಿದ್ದು ಯಾವುದು?ಹಾಲಿವುಡ್-ಬಾಲಿವುಡ್: ಪ್ರಿಯಾಂಕಾ ಚೋಪ್ರಾ ಆಯ್ಕೆ ಮಾಡಿದ್ದು ಯಾವುದು?

  ಕೆಂಪು ಮತ್ತು ಕಪ್ಪು ಬಣ್ಣದ ಬಿಕಿನಿ ಧರಿಸಿರುವ ಪ್ರಿಯಾಂಕಾ ಈಜುಕೊಳದ ಪಕ್ಕದಲ್ಲಿ ಮಲಗಿದ್ದಾರೆ. ಪಕ್ಕದಲ್ಲಿ ಪತಿ ನಿಕ್ ಶರ್ಟ್ ಲೆಸ್ ಆಗಿ ಕುಳಿತಿದ್ದಾರೆ. ನಿಕ್ ಕೈಯಲ್ಲಿ ಫೋರ್ಟ್ ಸ್ಪೂನ್ ಮತ್ತು ಚಾಕು ಹಿಡಿದಿದ್ದಾರೆ. ಈ ಫೋಟೋವನ್ನು ಪ್ರಿಯಾಂಕಾ ಶೇರ್ ಮಾಡಿ, ಸ್ನ್ಯಾಕ್ ಎಂದು ಬರೆದುಕೊಂಡಿದ್ದಾರೆ. ಅನೇಕ ತಿಂಗಳ

  ಬಳಿಕ ತನ್ನ ಮನೆ ಲಾಸ್ ಏಂಜಲೀಸ್‌ಗೆ ಮರಳಿರುವ ಪ್ರಿಯಾಂಕಾ ಪತಿ ನಿಕ್‌ಗೆ ಅಹಾರವಾಗಿದ್ದಾರೆ.

  ಪ್ರಿಯಾಂಕಾ ಫೋಟೋಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅನೇಕರು ಕಾಮೆಂಟ್ ಹಾಟ್ ಎಂದು ಹೇಳುತ್ತಿದ್ದಾರೆ. ಇನ್ನು ನಟಿ ಪ್ರಿಯಾಂಕಾ ಇತ್ತೀಚಿಗಷ್ಟೆ ಅಮೆರಿಕಗೆ ಮರಳಿದ್ದು, ಪತಿ ನಿಕ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಪ್ರಿಯಾಂಕಾ ತನ್ನ ಪತಿ ದುಬಾರಿ ವೈನ್ ಗಿಫ್ಟ್ ಮಾಡಿದ ಫೋಟೋ ಹಂಚಿಕೊಂಡಿದ್ದರು.

  ಕಳೆದ ಕೆಲವು ತಿಂಗಳಿಂದ ಲಂಡನ್‌ನಲ್ಲಿರುವ ಪ್ರಿಯಾಂಕಾ ಸಿಟಾಡೆಲ್ ಸರಣಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇತ್ತೀಚಿಗಷ್ಟೆ ಚಿತ್ರೀಕರಣದ ಫೋಟೋ ಹಂಚಿಕೊಂಡಿದ್ದ ಪ್ರಿಯಾಂಕಾ ಸ್ಟಂಟ್ ಸಮಯದಲ್ಲಿ ಗಾಯಗೊಂಡ ಫೋಟೋ ಶೇರ್ ಮಾಡಿದ್ದರು. ಹಣೆಯಲ್ಲಿ ರಕ್ತ ಸೋರುತ್ತಿರುವ ಫೋಟೋ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಬಳಿಕ ಇದು ಫೇಕ್ ಎನ್ನುವುದು ಗೊತ್ತಾಗಿದೆ.

  ಇತ್ತೀಚಿಗಷ್ಟೆ ಪ್ರಿಯಾಂಕಾ ವಿಡಿಯೋ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು. ತಮಗೆ ಯಾವುದು ಇಷ್ಟ ಎಂಬ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಅದರಲ್ಲಿ ಕೇಳಲಾಯಿತು. ಕ್ವಾಲಿಟಿ ಅಥವಾ ಕ್ವಾಂಟಿಟಿ, ಬಿಸಿ ಕಾಫಿ ಅಥವಾ ಐಸ್ ಕಾಫಿ, ಮೆಟಲ್ ಸ್ಟ್ರಾ ಅಥವಾ ಪೇಪರ್ ಸ್ಟ್ರಾ, ಹೇರ್ ಮಾಸ್ಕ್ ಅಥವಾ ಕಂಡಿಷನರ್, ಬ್ಲೋ ಡ್ರೈ ಅಥವಾ ಏರ್ ಡ್ರೈ ಹೀಗೆ ಇನ್ನು ಹಲವು ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಿದ ಪ್ರಿಯಾಂಕಾ, ಕೊನೆಯಲ್ಲಿ ಹಾಲಿವುಡ್ ಅಥವಾ ಬಾಲಿವುಡ್ ಎಂದು ಕೇಳಿದ್ದಕ್ಕೆ 'ನಾನು ಕ್ವಿಟ್ ಮಾಡುತ್ತೇನೆ' ಎಂದು ಹೇಳಿ ಅಚ್ಚರಿ ಮೂಡಿಸಿದರು.

  ಕಳೆದೊಂದು ವರ್ಷದಿಂದ ಲಂಡನ್ ನಲ್ಲಿರುವ ಪ್ರಿಯಾಂಕಾ ಸದ್ಯ 'ಸಿಟಾಡೆಲ್' ಸರಣಿ ಜೊತೆಗೆ 'ಟೆಕ್ಸ್ಟ್ ಫಾರ್ ಯು' ಮುಗಿಸಿದ್ದಾರೆ. 'ಮೆಟ್ರಿಕ್ಸ್' ಹಾಗೂ ಸ್ಯಾಮ್ ಹ್ಯೂಘನ್, ಸೆಲೀನ್ ಡಿಯಾನ್, ರಸೆಲ್ ಟೋವಿ ಮತ್ತು ಒಮಿಡ್ ಜಲೀಲಿ ಈ ಸರಣಿಯಲ್ಲಿ ನಟಿಸಿದ್ದಾರೆ. ಇನ್ನು ಹಿಂದಿಯಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಜೊತೆ 'ಜೀ ಲಿ ಜರಾ' ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ.

  ಇನ್ನು ಬಾಲಿವುಡ್‌ನಲ್ಲಿ ಕೊನೆಯದಾಗಿ ಪ್ರಿಯಾಂಕಾ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಬಳಿಕ ಪ್ರಿಯಾಂಕಾ ಮತ್ತೆ ಯಾವ ಬಾಲಿವುಡ್ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಸದ್ಯದಲ್ಲೇ ಬಾಲಿವುಡ್ ಸಿನಿಮಾ ಮಾಡುವುದಾಗಿ ಹಳಿರುವ ಪ್ರಿಯಾಂಕಾ ಯಾವ ಸಿನಿಮಾ ಮೂಲಕ ವಾಪಸ್ ಆಗಲಿದ್ದಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ಇತ್ತೀಚಿಗಷ್ಟೆ ಪ್ರಿಯಾಂಕಾ ವಿಡಿಯೋ ಚಾಲೆಂಜ್‌ನಲ್ಲಿ ಪಾಲ್ಗೊಂಡಿದ್ದರು. ತಮಗೆ ಯಾವುದು ಇಷ್ಟ ಎಂಬ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಅದರಲ್ಲಿ ಕೇಳಲಾಯಿತು. ಕ್ವಾಲಿಟಿ ಅಥವಾ ಕ್ವಾಂಟಿಟಿ, ಬಿಸಿ ಕಾಫಿ ಅಥವಾ ಐಸ್ ಕಾಫಿ, ಮೆಟಲ್ ಸ್ಟ್ರಾ ಅಥವಾ ಪೇಪರ್ ಸ್ಟ್ರಾ, ಹೇರ್ ಮಾಸ್ಕ್ ಅಥವಾ ಕಂಡಿಷನರ್, ಬ್ಲೋ ಡ್ರೈ ಅಥವಾ ಏರ್ ಡ್ರೈ ಹೀಗೆ ಇನ್ನು ಹಲವು ಪ್ರಶ್ನೆಗಳಿಗೆ ಸರಾಗವಾಗಿ ಉತ್ತರಿಸಿದ ಪ್ರಿಯಾಂಕಾ, ಕೊನೆಯಲ್ಲಿ ಹಾಲಿವುಡ್ ಅಥವಾ ಬಾಲಿವುಡ್ ಎಂದು ಕೇಳಿದ್ದಕ್ಕೆ 'ನಾನು ಕ್ವಿಟ್ ಮಾಡುತ್ತೇನೆ' ಎಂದು ಹೇಳಿ ಅಚ್ಚರಿ ಮೂಡಿಸಿದರು.

  English summary
  Actress Priyanka Chopra' s hares hot bikini photo with her husband Nick Jonas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X