For Quick Alerts
  ALLOW NOTIFICATIONS  
  For Daily Alerts

  ಭಾರತಕ್ಕೆ ಸಹಾಯ ಮಾಡಿ: ಪ್ರಿಯಾಂಕಾ ಪತಿ ನಿಕ್ ಜೋನಸ್ ಮನವಿ

  |

  ಕೊರೊನಾ ಎರಡನೇ ಅಲೆ ವಿರುದ್ಧ ಭಾರತ ತೀವ್ರವಾಗಿ ಸೆಣಸಾಡುತ್ತಿದೆ. ರೋಗಿಗಳು ಆಮ್ಲಜನಕ ಸಿಗದೆ ಬೀದಿಯಲ್ಲಿ ಹೆಣವಾಗುತ್ತಿರುವ ಸುದ್ದಿಗಳು ದಿನನಿತ್ಯ ವರದಿಯಾಗುತ್ತಿವೆ. ವಿದೇಶದ ಮಾಧ್ಯಮಗಳೂ ಸಹ ಭಾರತದ ದೀನ ಸ್ಥಿತಿಯನ್ನು ವರದಿ ಮಾಡುತ್ತಿವೆ.

  ತನ್ನ ದೇಶದ ಕೊರೊನಾ ದುಸ್ಥಿತಿಯ ಬಗ್ಗೆ ಮರುಗಿದ ಪ್ರಿಯಾಂಕಾ ಚೋಪ್ರಾ | Filmibeat Kannada

  ವಿದೇಶದ ಸೆಲೆಬ್ರಿಟಿಗಳು ಭಾರತದ ಸ್ಥಿತಿ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ, ನೆರವಿನ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ. ಹಾಲಿವುಡ್‌ನಲ್ಲಿ ಸೆಟಲ್ ಆಗಿರುವ ಭಾರತೀಯ ನಟಿ ಪ್ರಿಯಾಂಕಾ ಚೋಪ್ರಾ ಜೋನಸ್ ಇತ್ತೀಚೆಗಷ್ಟೆ 'ನನ್ನ ದೇಶ ಭಾರತ ಸಂಕಷ್ಟದಲ್ಲಿದೆ ದಯವಿಟ್ಟು ಸಹಾಯ ಮಾಡಿ' ಎಂದು ಅಮೆರಿಕ ಅಧ್ಯಕ್ಷ ಬೇಡನ್‌ಗೆ ಮನವಿ ಮಾಡಿದ್ದಾರೆ.

  ಇದೀಗ ಪ್ರಿಯಾಂಕಾ ಚೋಪ್ರಾ ಪತಿ ಪಾಪ್ ಹಾಡುಗಾರ, ನಟ ನಿಕ್ ಜೋನಸ್ ಸಹ ಭಾರತಕ್ಕೆ ಸಹಾಯ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

  ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಿಕ್ ಜೋನಸ್, 'ಭಾರತಕ್ಕೆ ಸಹಾಯದ ಅಗತ್ಯವಿದೆ. ನಿಮ್ಮ ಕೈಲಿ ಏನಾಗುತ್ತದೆಯೋ ಆ ಸಹಾಯವನ್ನು ಭಾರತಕ್ಕಾಗಿ ಮಾಡಿ, ನಾನು ಭಾರತವನ್ನು ಪ್ರೀತಿಸುತ್ತೇನೆ' ಎಂದು ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ ನಿಕ್ ಜೋನಸ್.

  ಪ್ರಿಯಾಂಕಾ ಚೋಪ್ರಾ ಸಹ ಭಾರತದ ಪರವಾಗಿ ಪೋಸ್ಟ್ ಹಾಕಿದ್ದು, ''ನನ್ನ ಹೃದಯ ಛಿದ್ರವಾಗಿದೆ. ಭಾರತ ಕೋವಿಡ್-19ನಿಂದ ನರಳುತ್ತಿದೆ. ಯುಎಸ್ ಅಗತ್ಯಕ್ಕಿಂತ 550ಮಿ ಹೆಚ್ಚಿನ ಲಸಿಕೆಯನ್ನು ಬೇಡಿಕೆ ಇಟ್ಟಿದೆ. ಆದರೆ ನನ್ನ ದೇಶದ ಪರಿಸ್ಥಿತಿ ಸಂಕಷ್ಟದಲ್ಲಿದೆ. ನೀವು ತುರ್ತಾಗಿ ಭಾರತಕ್ಕೆ ಲಸಿಕೆ ಹಂಚಿಕೊಳ್ಳುತ್ತೀರಾ? ಎಂದು ಕೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಜೊ ಬೈಡನ್ ಅವರಿಗೆ ಟ್ಯಾಗ್ ಮಾಡಿದ್ದರು.

  English summary
  Actress Priyanka Chopra's husband Nick Jonas request his fans to help India which is need.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X