ಪ್ರಿಯಾಂಕಾ ಉಡುಗೆ ಬಗ್ಗೆ ವ್ಯಂಗ್ಯವಾಡಿದ್ದ ಡಿಸೈನರ್ ಗೆ ಛೀಮಾರಿ ಹಾಕಿದ ತಾಯಿ ಮಧು ಛೋಪ್ರಾ.!

ಇತ್ತೀಚೆಗಷ್ಟೇ ನಡೆದ 62ನೇ ಗ್ರ್ಯಾಮಿ ಅವಾರ್ಡ್ಸ್ ಸಮಾರಂಭದಲ್ಲಿ ತಮ್ಮ ಉಡುಗೆ ಮೂಲಕ ಎಲ್ಲರ ಗಮನ ಸೆಳೆದವರು ನಟಿ ಪ್ರಿಯಾಂಕಾ ಛೋಪ್ರಾ. ಬಿಳಿ ಬಣ್ಣದ ಗೌನ್ ಧರಿಸಿದ್ದ ನಟಿ ಪ್ರಿಯಾಂಕಾ ಛೋಪ್ರಾ, ಅದರ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ಗಳಲ್ಲಿ ಹಂಚಿಕೊಂಡಿದ್ದರು.

ಉಡುಪಿನ ನೆಕ್ ಲೈನ್ ಅತಿಯಾಗಿ ಡೀಪ್ ಆಗಿದ್ದರಿಂದ ಪ್ರಿಯಾಂಕಾ ಛೋಪ್ರಾ ನೆಟ್ಟಿಗರಿಂದ ಟ್ರೋಲ್ ಆಗಿದ್ದರು. ಕೆಲವರಂತೂ ಕೀಳಾಗಿ ಕಾಮೆಂಟ್ ಹಾಕಿದ್ದರು. ಅದರಲ್ಲೂ ಡಿಸೈನರ್ ವೆಂಡಲ್ ರಾಡ್ರಿಕ್ಸ್ ಪ್ರಿಯಾಂಕಾ ಛೋಪ್ರಾ ಉಡುಗೆ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು.

ಇದನ್ನ ಕಂಡು ಪ್ರಿಯಾಂಕಾ ಛೋಪ್ರಾ ಮೌನವಾಗಿ ಇರಬಹುದು. ಆದ್ರೆ, ಪ್ರಿಯಾಂಕಾ ಛೋಪ್ರಾ ತಾಯಿ ಮಧು ಛೋಪ್ರಾ ಮಾತ್ರ ಸುಮ್ಮನೆ ಕೂರಲಿಲ್ಲ. ಡಿಸೈನರ್ ವೆಂಡಲ್ ರಾಡ್ರಿಕ್ಸ್ ಗೆ ಮಧು ಛೋಪ್ರಾ ಟ್ವಿಟ್ಟರ್ ನಲ್ಲಿ ಛೀಮಾರಿ ಹಾಕಿದ್ದಾರೆ. ಮುಂದೆ ಓದಿರಿ...

ವೆಂಡಲ್ ರಾಡ್ರಿಕ್ಸ್ ಮಾಡಿದ ಕಾಮೆಂಟ್ ಏನು.?

ವೆಂಡಲ್ ರಾಡ್ರಿಕ್ಸ್ ಮಾಡಿದ ಕಾಮೆಂಟ್ ಏನು.?

ಗ್ರ್ಯಾಮಿ ಅವಾರ್ಡ್ ಗೆ ಪ್ರಿಯಾಂಕಾ ಛೋಪ್ರಾ ಧರಿಸಿದ್ದ ಉಡುಗೆ ಕಂಡು, ''ಉಡುಪಿನ ನೆಕ್ ಲೈನ್ ಲಾಸ್ ಏಂಜಲೀಸ್ ನಿಂದ ಕ್ಯೂಬಾವರೆಗೂ ಹೋಗುತ್ತದೆ'' ಎಂದು ವ್ಯಂಗ್ಯವಾಗಿ ವೆಂಡೆಲ್ ರಾಡ್ರಿಕ್ಸ್ ಕಾಮೆಂಟ್ ಮಾಡಿದ್ದರು.

ಗರಂ ಆದ ಮಧು ಛೋಪ್ರಾ

ಗರಂ ಆದ ಮಧು ಛೋಪ್ರಾ

ವೆಂಡಲ್ ರಾಡ್ರಿಕ್ಸ್ ಕಾಮೆಂಟ್ ನೋಡಿ ಗರಂ ಆದ ಮಧು ಛೋಪ್ರಾ, ''ಪ್ರಿಯಾಂಕಾಗೆ ಬಾಡಿ ಶೇಮ್ ಮಾಡಿರುವುದನ್ನು ಒಪ್ಪಿಕೊಳ್ಳಲು ವೆಂಡಲ್ ರಾಡ್ರಿಕ್ಸ್ ಗೆ ಭಯವಾಗುತ್ತಿದೆ. ಆತ ಫೇಕ್. ಆತನ ಕಾಲಲ್ಲಿ ವೆರಿಕೋಸ್ ವೇನ್ಸ್ ಇರೋದ್ರಿಂದ ಕಾಲನ್ನು ಸದಾ ಕಾಲ ಮುಚ್ಚಿಕೊಂಡಿರುತ್ತಾನೆ. ಹಾಗೆಯೇ, ಮುಖದ ಮೇಲೆ ನೆರಿಗೆ ಮೂಡಿದರೆ, ಹಿಜಾಬ್ ನಿಂದ ಮುಖ ಮುಚ್ಚಿಕೊಳ್ಳುತ್ತಾನಾ.?'' ಎಂದು ಟ್ವಿಟ್ಟರ್ ನಲ್ಲಿ ಚಡಿಯೇಟು ಕೊಟ್ಟಿದ್ದಾರೆ.

ಪ್ರಿಯಾಂಕಾ ಬೆನ್ನಿಗೆ ನಿಂತಿರುವ ತಾಯಿ.!

ಪ್ರಿಯಾಂಕಾ ಬೆನ್ನಿಗೆ ನಿಂತಿರುವ ತಾಯಿ.!

ಪ್ರಿಯಾಂಕಾ ತೊಟ್ಟ ಡ್ರೆಸ್ ಬಗ್ಗೆ ಹೆಚ್ಚು ಟೀಕೆ ವ್ಯಕ್ತವಾದ ಮೇಲೆ ಮಾತನಾಡಿರುವ ಮಧು ಛೋಪ್ರಾ, ''ಈ ಘಟನೆ ಆಗಿದ್ದು ಒಳ್ಳೆಯದ್ದಾಯಿತು. ಯಾಕಂದ್ರೆ, ಇಂತಹ ಘಟನೆಗಳಿಂದ ಪ್ರಿಯಾಂಕಾ ಇನ್ನೂ ಸ್ಟ್ರಾಂಗ್ ಆಗುತ್ತಾಳೆ. ಅದು ಅವಳ ದೇಹ. ಆಕೆ ಸುಂದರಿ. ತನಗೆ ಸರಿ ಅನಿಸಿದ್ದನ್ನು ಪ್ರಿಯಾಂಕಾ ಮಾಡುತ್ತಾಳೆ'' ಎಂದಿದ್ದಾರೆ.

ಟ್ರೋಲಿಗರ ಬಗ್ಗೆ ಮಧು ಛೋಪ್ರಾ ಮಾತು

ಟ್ರೋಲಿಗರ ಬಗ್ಗೆ ಮಧು ಛೋಪ್ರಾ ಮಾತು

ಜೀವನದಲ್ಲಿ ಖುಷಿ ಕಾಣದೆ ಇರುವವರು ಕಂಪ್ಯೂಟರ್ ಹಿಂದೆ ಕುಳಿತು ಟ್ರೋಲ್ ಮಾಡುತ್ತಾರೆ. ಬಾಯಿಗೆ ಬಂದ ಹಾಗೆ ಮಾತನಾಡುವುದರಿಂದ ಟ್ರೋಲಿಗರು ಗಮನ ಸೆಳೆಯಬಹುದು. ಹೀಗಾಗಿ ಟ್ರೋಲಿಗರ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ'' ಅಂತ ಹೇಳಿದ್ದಾರೆ ಪ್ರಿಯಾಂಕಾ ಛೋಪ್ರಾ ತಾಯಿ ಮಧು ಛೋಪ್ರಾ.

More from Filmibeat

English summary
Priyanka Chopra's mother Madhu Chopra slams designer Wendell Rodricks.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X