Love Again Trailer: ಹಳೇ ಪ್ರಿಯಕರನಿಗೆ ಮೆಸೇಜ್.. ನಿಕ್ ಜೊತೆ ಮಿಸ್ ಆಯ್ತು ಪಿಗ್ಗಿ ಲಿಪ್‌ಲಾಕ್
ದೇಸಿ ಗರ್ಲ್ ಪ್ರಿಯಾಂಕ ಚೋಪ್ರಾ ಈಗ ಗ್ಲೋಬಲ್ ಸ್ಟಾರ್ ಆಗಿಬಿಟ್ಟಿದ್ದಾರೆ. ಬಾಲಿವುಡ್ ಬಿಟ್ಟು ಹಾಲಿವುಡ್ ಸಿನಿಮಾಗಳಲ್ಲಿ ನಟಿಸ್ತಿದ್ದಾರೆ. ನಿಕ್ ಜೋನ್ಸ್ ಕೈ ಹಿಡಿದು ಲಾಸ್ ಎಂಜಲೀಸ್‌ನಲ್ಲಿ ಸೆಟ್ಲ್ ಆಗಿದ್ದಾರೆ. ಸದ್ಯ ಪಿಗ್ಗಿ ನಟನೆಯ 'ಲವ್ ಅಗೇನ್' ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ.
ಮೇ 12ಕ್ಕೆ ರೊಮ್ಯಾಂಟಿಕ್ ಕಾಮಿಡಿ ಡ್ರಾಮಾ 'ಲವ್ ಅಗೇನ್' ತೆರೆಗೆ ಬರಲಿದೆ. ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಪ್ರಿಯಾಂಕ ಚೋಪ್ರಾ ಹಾಗೂ ಸಾಮ್ ಹೀಗನ್ ನಟನೆಯ ಈ ಸಿನಿಮಾ ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಚಿತ್ರದಲ್ಲಿ ಮಿರ ರೇ ಎನ್ನುವ ಪಾತ್ರದಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಸಿ. ಸ್ಟ್ರೂಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸ್ಕ್ರೀನ್ ಜೆಮ್ಸ್, ಥಂಡರ್ ರೋಡ್ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸೋನಿ ಪಿಕ್ಷರ್ಸ್ ಸಂಸ್ಥೆ ಸಿನಿಮಾ ವಿತರಣೆ ಮಾಡ್ತಿದೆ.

ಪ್ರತಿಯೊಬ್ಬರ ಕನಸುಗಳು ಅಂತಿಮವಾಗಿ ಹೇಗೆ ಸಾಯುತ್ತವೆ ಎಂದು ಮಿರ ರೇ ಮಾತನಾಡುವ ಮೂಲಕ 'ಲವ್ ಅಗೇನ್' ಟ್ರೈಲರ್ ಶುರುವಾಗುತ್ತದೆ. ತನ್ನ ಮಾಜಿ ಪ್ರಿಯಕರನಿಗೆ ಮಿರ ರೇ ಮೆಸೇಜ್ ಮಾಡಲು ಆರಂಭಿಸುತ್ತಾಳೆ. ಆದರೆ ಆ ಫೋನ್ ನಂಬರ್ ಈಗ ರೊಬ್ ಬರ್ನ್ಸ್ ಎನ್ನುವ ಪತ್ರಕರ್ತ ಬಳಸುತ್ತಿರುತ್ತಾನೆ. ಮಿರ ಮೆಸೇಜ್‌ಗಳನ್ನು ಓದುತ್ತಾ ಆಕೆಯ ಪ್ರಾಮಾಣಿಕತೆಗೆ ನೋಡಿ ರೊಬ್ ಆಕೆಯ ಪ್ರೀತಿಯಲ್ಲಿ ಬೀಳುತ್ತಾನೆ. ಇನ್ನು ಚಿತ್ರದಲ್ಲಿ ಪ್ರಿಯಾಂಕ ಪತಿ ನಿಕ್ ಜೋನ್ಸ್ ಗೆಸ್ಟ್ ಅಪಿಯರೆನ್ಸ್ ಮಾಡಿದ್ದಾರೆ. ಆತನ ಜೊತೆ ಡೇಟ್ ಹೋದಾಗ ಏನಾಗುತ್ತದೆ ಎನ್ನುವ ಸಣ್ಣ ಝಲಕ್ ಅನ್ನು ಟ್ರೈಲರ್‌ನಲ್ಲಿ ನೋಡ್ಬೋದು.

ಕಾರಣಾಂತರಗಳಿಂದ 'ಲವ್ ಅಗೇನ್' ಸಿನಿಮಾ ರಿಲೀಸ್ ಡೇಟ್ ಪದೇ ಪದೇ ಪೋಸ್ಟ್‌ಪೋನ್ ಆಗುತ್ತಿದೆ. 'ಎಸ್‌ಎಂಎಸ್ ಪುರ್ ದಿಚ್' ಎನ್ನುವ ಜರ್ಮನ್ ಚಿತ್ರದ ರೀಮೆಕ್ ಇದು. ಪ್ರಿಯಕರನ ಹಠಾತ್ ಸಾವಿನ ನಂತರ ಜೀವನವೇ ನಡೆಸಲು ಹೆಣಗುತ್ತಿರುವ ಮಹಿಳೆಯ ಕಥೆ ಈ ಚಿತ್ರದಲ್ಲಿದೆ. ಮತ್ತೊಬ್ಬ ವ್ಯಕ್ತಿ ಬಳಸುತ್ತಿರುವ ಪ್ರಿಯಕರನ ಹಳೇಯ ನಂಬರ್‌ಗೆ ಆಕೆ ಮೆಸೇಜ್‌ಗಳನ್ನು ಕಳುಹಿಸುತ್ತಿರುತ್ತಾಳೆ. ಮುಂದೇನಾಗುತ್ತದೆ ಎನ್ನುವುದು 'ಲವ್ ಅಗೇನ್' ಚಿತ್ರದ ಒನ್‌ಲೈನ್ ಸ್ಟೋರಿ.


Click it and Unblock the Notifications











