ಅಷ್ಟರಲ್ಲೇ ಜಸ್ಟ್ ಮಿಸ್, ಚಿತ್ರದ ಚಿತ್ರೀಕರಣ ವೇಳೆ ಪ್ರಿಯಾಂಕ ಕುತ್ತಿಗೆಗೆ ಗಾಯ..!

ಹೇರ್ ಸ್ಟೈಲ್ ನಿಂದ ಹಾಕುವ ಡ್ರೆಸ್ ವರೆಗೆ ಟ್ರೋಲ್ ಆಗ್ತಾನೇ ಬಂದ ಪ್ರಿಯಾಂಕ ಚೋಪ್ರಾ, ಬಾಲಿವುಡ್‌ ಮತ್ತು ಭಾರತ ಎರಡನ್ನೂ ತೊರೆದು ವರ್ಷಗಳೇ ಆಗಿವೆ. ಇದಕ್ಕೆ ಇವರ ಗಂಡ ನಿಕ್ ಜೋನಾಸ್ ಒಂದು ಕಾರಣವಾದರೆ, ಹಾಲಿವುಡ್‌ನಲ್ಲಿ ಮಿಂಚುವ ಹುಚ್ಚು ಮತ್ತೊಂದು ಕಾರಣ. 2017ರಿಂದ ಆಂಗ್ಲರ ನಾಡಲ್ಲಿ ಅವಕಾಶಕ್ಕೆ ಸೈಕಲ್ ಹೊಡೆಯುತ್ತಾನೇ ಇರುವ ಪ್ರಿಯಾಂಕ ಚೋಪ್ರಾ ಸದ್ಯಕ್ಕೆ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪೆಟ್ಟು ಮಾಡಿಕೊಂಡಿದ್ದಾರೆ.

ಹೌದು. 'ಬೇವಾಚ್' ಚಿತ್ರದೊಂದಿಗೆ ಹಾಲಿವುಡ್ ಪ್ರವೇಶಿಸಿದ ಪ್ರಿಯಾಂಕ, ಆ ನಂತರ 'ಎ ಕಿಡ್ ಲೈಕ್ ಜೇಕ್' ಎಂಬ ಚಿತ್ರ ಮಾಡಿದ್ದರು. ಇವೆರಡು ಚಿತ್ರಗಳ ನಂತರ ಕಳೆದ 06 ವರ್ಷದಲ್ಲಿ ಮೂರು ಮತ್ತೊಂದು ಎರಡು ಸಿನಿಮಾ ಮಾಡಿದ್ದಾರೆ. ಇಂಥ ಪ್ರಿಯಾಂಕ ಚೋಪ್ರಾ ಸದ್ಯಕ್ಕೆ.. ಫ್ರಾಂಕ್ ಇ ಪ್ಲಾವರ್ಸ್ ನಿರ್ದೇಶನದ 'ದಿ ಬ್ಲಫ್' ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇದೇ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಪ್ರಿಯಾಂಕಗೆ ಗಾಯವಾಗಿದೆ.

Priyanka Chopra sustains injury during filming of The Bluff

ಇನ್ನೂ.. ಪ್ರಿಯಾಂಕ ಚೋಪ್ರಾ ಇಲ್ಲಿದ್ದಷ್ಟು ದಿನ ಚಿತ್ರದಲ್ಲಿ ಗ್ಲ್ಯಾಮರ್ ಗೊಂಬೆಯಾಗಿದ್ದರು. ಮರ ಸುತ್ತುವ ಕೆಲಸ ಮಾಡುತ್ತಿದ್ದರು. ಆದರೆ.. ಹಾಲಿವುಡ್‌ನಲ್ಲಿ ಡುಯೆಟ್‌ಗೆ ಅವಕಾಶವೇ ಇಲ್ಲ. ಹೀಗಾಗಿ ಆಕ್ಷನ್‌ ಲೇಡಿ ಎಂಬ ಪಟ್ಟಕ್ಕೆ ಸರ್ಕಸ್ ಮಾಡ್ತಿರುವ ಪ್ರಿಯಾಂಕ, ಭಾರೀ ಉತ್ಸಾಹದಲ್ಲಿ 'ದಿ ಬ್ಲಫ್' ಚಿತ್ರಕ್ಕೋಸ್ಕರ ಹೊಡೆದಾಡುವ ದೃಶ್ಯವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ಪ್ರಿಯಾಂಕ ಚೋಪ್ರಾ ಕತ್ತಿನ ಭಾಗಕ್ಕೆ ಸರಿಯಾಗಿ ಹೊಡೆತ ಬಿದ್ದಿದೆ.

ಸದ್ಯಕ್ಕೆ ಪಿಂಕಿ ತಮ್ಮ ಈ ಅನುಭವವನ್ನ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳ ಚಿಂತೆ ಹೆಚ್ಚಿಸಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಪಿಗ್ಗಿ ಫ್ಯಾನ್ಸ್ ಬೇಗ ಗುಣಮುಖರಾಗುವಂತೆ ಹಾರೈಸುತ್ತಿದ್ದಾರೆ. ಉಳಿದಂತೆ "ದಿ ಬ್ಲಫ್" ಚಿತ್ರ ಹೊರತು ಪಡಿಸಿ "ಹೆಡ್ಸ್ ಆಫ್ ಸ್ಟೇಟ್" ಎಂಬ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಆಕ್ಟ್ ಮಾಡುತ್ತಿದ್ದಾರೆ. ಈ ಚಿತ್ರದ ನಾಯಕ WWEಯ ಜಾನ್ ಸೀನಾ ಅನ್ನುವುದು ವಿಶೇಷ.

ಅಂದ್ಹಾಗೇ ಪಿಂಕಿ ಹಿಂದಿ ಚಿತ್ರರಂಗದಲ್ಲಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು 2016ರಲ್ಲಿ. ಪ್ರಕಾಶ್ ಝಾ ನಿರ್ದೇಶನದ ಜೈ ಗಂಗಾಜಲ್ ಎಂಬ ಮಹಿಳಾ ಪ್ರಧಾನ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದರು. ಚಿತ್ರದ ಮೇಲೆ ವಿಪರೀತ ನಿರೀಕ್ಷೆಯನ್ನೂ ಇಟ್ಟುಕೊಂಡಿದ್ದರು. ಆದರೆ.. ನಿರೀಕ್ಷೆ ಹುಸಿಯಾಯಿತು. ಇದಾದ ನಂತರ ಪಿಗ್ಗಿ ನೆಗೆದಿದ್ದು ಸೀದಾ ಹಾಲಿವುಡ್ಡಿಗೆ.

More from Filmibeat

English summary
Priyanka Chopra, currently immersed in filming her upcoming movie 'The Bluff,' encountered an injury on set. She posted a photo showing a noticeable scratch on her throat. 'The Bluff' is currently being filmed in Australia
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X