Don't Miss!
- News
ಬೆಂಗಳೂರಿನಲ್ಲಿ ಇಂದು ಬುಧವಾರ ಭಾರೀ ಮಳೆ: ಆರೆಂಜ್ ಅಲರ್ಟ್ ಘೋಷಣೆ
- Lifestyle
ಪ್ಲಾಸ್ಟಿಕ್ ಸರ್ಜರಿ ಕುರಿತ 10 ಆಸಕ್ತಿಕರ ಸಂಗತಿಗಳು
- Sports
ಟಿ20 ಕ್ರಿಕೆಟ್ನಲ್ಲಿ 250 ವಿಕೆಟ್ ಪಡೆದ ಬುಮ್ರಾ: ಈ ಸಾಧನೆ ಮಾಡಿದ ಭಾರತದ ಮೊದಲ ವೇಗದ ಬೌಲರ್
- Finance
ಮೇ 17ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Automobiles
ಹೊಸ ಕಿಯಾ ಇವಿ6 ಎಲೆಕ್ಟ್ರಿಕ್ ಕಾರು ಮಾಹಿತಿ ಬಹಿರಂಗ: 528 ಕಿ.ಮೀ ರೇಂಜ್, ಅಲ್ಟ್ರಾ-ಫಾಸ್ಟ್ ಚಾರ್ಜಿಂಗ್
- Technology
ಅಪೆಕ್ಸ್ ಲೆಜೆಂಡ್ಸ್ ಮೊಬೈಲ್ ಗೇಮ್ ಬಿಡುಗಡೆ! ಡೌನ್ಲೋಡ್ ಮಾಡುವುದು ಹೇಗೆ?
- Education
Oil India Recruitment 2022 : 16 ನರ್ಸಿಂಗ್ ಟ್ಯೂಟರ್ ಮತ್ತು ಇತರೆ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಿಜಯ್ ಕಲಿಸಿದ ಪಾಠ ಇಂದಿಗೂ ಮರೆತಿಲ್ಲ ಪ್ರಿಯಾಂಕಾ ಚೋಪ್ರಾ
ಬಾಲಿವುಡ್ ಅನ್ನು ಆಳಿದ ಹಲವು ನಟಿಯರು ತಮ್ಮ ನಟನಾ ಪಯಣ ಶುರು ಮಾಡಿದ್ದು ದಕ್ಷಿಣ ಭಾರತ ಸಿನಿಮಾಗಳಲ್ಲಿ.
ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ, ಬಾಲಿವುಡ್‌ನ ನಂಬರ್ 1 ನಟಿ ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಸ್ಟಾರ್ ನಟರ ಮೆಚ್ಚಿನ ನಟಿ ಕತ್ರಿನಾ ಕೈಫ್, ಒಂದು ಕಾಲದ ಸ್ಟಾರ್ ನಟಿ ಪ್ರೀತಿ ಜಿಂಟಾ ಇನ್ನೂ ಹಲವರು ನಟನೆಯ ಮೊದಲ ಪಾಠಗಳನ್ನು, ಪಟ್ಟುಗಳನ್ನು ಕಲಿತಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿಯೇ.
ಬಾಲಿವುಡ್ ನಂತರ ಹಾಲಿವುಡ್‌ನಲ್ಲಿ ಮಿಂಚುತ್ತಿರುವ ಪ್ರಿಯಾಂಕಾ ಚೋಪ್ರಾ ತಮ್ಮ ಮೊದಲ ಸಿನಿಮಾವನ್ನು ನಟ ವಿಜಯ್ ಜೊತೆ ನಟಿಸಿದ್ದರು. ವಿಜಯ್ ಅಂದು ಕಲಿಸಿಕೊಟ್ಟ ಜೀವನ ಪಾಠವನ್ನು ಇಂದಿಗೂ ನೆನಪಿಟ್ಟುಕೊಂಡಿದ್ದಾರೆ ಪ್ರಿಯಾಂಕಾ. ದಳಪತಿ ವಿಜಯ್ ಕಲಿಸಿದ ಜೀವನ ಪಾಠವನ್ನು ಆಗಾಗ್ಗೆ ನೆನಪಿಸಿಕೊಳ್ಳುತ್ತಿರುತ್ತಾರೆ ಮತ್ತು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.
ಹಾಲಿವುಡ್ ಸ್ಟಾರ್ ನಟಿಯಾಗಿರುವ ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ವ್ಯಾನಿಟಿ ಫೇರ್ ಅಂತರಾಷ್ಟ್ರೀಯ ಮ್ಯಾಗಜೈನ್‌ಗೆ ಸಂದರ್ಶನ ನೀಡಿದ್ದು, ವೃತ್ತಿ ಜೀವನದ ಆರಂಭದಲ್ಲಿ ನಟ ವಿಜಯ್ ಹೇಗೆ ತಮಗೆ ಜೀವನ ಪಾಠ ಕಲಿಸಿದರು, ಅವರಿಂದ ಹೇಗೆ ತಾನು ಸ್ಪೂರ್ತಿ ಪಡೆದೆ ಎಂಬುದನ್ನು ಹೇಳಿಕೊಂಡಿದ್ದಾರೆ.

ಮೊದಲು ನಟಿಸಿದ ಸಿನಿಮಾ 'ತಮಿಳನ್'
ವಿಶ್ವಸುಂದರಿ ವಿಜೇತಳಾದ ಬಳಿಕ ನಾನು ನಟನೆ ಆರಂಭಸಿದೆ. ಆರಂಭದಲ್ಲಿ ತಮಿಳಿನ ಸಿನಿಮಾ 'ತಮಿಳನ್', 'ದಿ ಹೀರೋ' , 'ಅಂದಾಜ್' ಸಿನಿಮಾಗಳಲ್ಲಿ ನಾನು ನಟಿಸಿದೆ. ನಾನು ಆಗೆಲ್ಲ ಸೆಟ್‌ಗೆ ಹೋಗುವಾಗ ನನಗೆ ಏನೋಂದೂ ಗೊತ್ತಿರಲಿಲ್ಲ. ನಟನೆ ಎಂದರೆ ಒಳ್ಳೆಯ ಚಂದದ ಬಟ್ಟೆ ತೊಟ್ಟುಕೊಳ್ಳುವುದು, ಮೇಕಪ್ ಹಾಕಿಕೊಳ್ಳುವುದು ಎಂದುಕೊಂಡಿದ್ದೆ. ಆದರೆ ನಂತರ ಗೊತ್ತಾಯಿತು ಅದು ಎಷ್ಟು ಕಷ್ಟವೆಂಬುದು, ಪೇಪರ್‌ನಲ್ಲಿ ಬರೆದ ಸಂಭಾಷಣೆಯನ್ನು ಎದುರು ಯಾವುದೇ ವ್ಯಕ್ತಿ ಇಲ್ಲದೇ ಇದ್ದರು ಇದ್ದಾನೆಂದು ಕಲ್ಪಿಸಿಕೊಂಡು ಹೇಳುವುದು, ಪ್ರತಿಕ್ರಿಯಿಸುವುದು ಸುಲಭದ ಕಾರ್ಯವಲ್ಲ'' ಎಂದಿದ್ದಾರೆ ಪ್ರಿಯಾಂಕಾ.

ವಿಜಯ್ ಅನ್ನು ನೋಡಲು ಖುಷಿ ಆಗುತ್ತಿತ್ತು: ಪ್ರಿಯಾಂಕಾ
''ಆದರೆ ನನ್ನ ಮೊದಲ ಸಿನಿಮಾದ ಹೀರೋ ವಿಜಯ್ ಇಂದ ನಾನು ಸಾಕಷ್ಟು ಕಲಿತೆ. ನನ್ನ ಮೊದಲ ಸಿನಿಮಾ 'ತಮಿಳನ್' ನನಗೆ ಬಹಳ ಕಷ್ಟದ ಅನುಭವ ನೀಡಿತು. ನನಗೆ ತಮಿಳು ಭಾಷೆ ಬರುತ್ತಿರಲಿಲ್ಲ. ನಾನು ಕಷ್ಟಪಟ್ಟು ಸಂಭಾಷಣೆಗಳನ್ನು ಉರು ಹೊಡೆದು ಒಪ್ಪಿಸುತ್ತಿದ್ದೆ. ಆದರೆ ನನ್ನ ಸಹ ನಟ ವಿಜಯ್ ಅವರನ್ನು ನೋಡುವುದು ನನಗೆ ಬಹಳ ಖುಷಿ ಕೊಡುತ್ತಿದ್ದು, ಅವರು ನಟಿಸುತ್ತಿರುವಾಗ ಅವರನ್ನು ನೋಡುತ್ತಾ ಇರುತ್ತಿದ್ದೆ'' ಎಂದಿದ್ದಾರೆ ಪ್ರಿಯಾಂಕಾ ಚೋಪ್ರಾ.

''ನನ್ನನ್ನು ಪ್ರೇರೇಪಿಸಿದ ವ್ಯಕ್ತಿಗಳಲ್ಲಿ ಮೊದಲಿಗರು ವಿಜಯ್''
''ನನ್ನ ಜೀವನದಲ್ಲಿ ನನ್ನನ್ನು ಪ್ರೇರೇಪಿಸಿದ ವ್ಯಕ್ತಿಗಳಲ್ಲಿ ಮೊದಲಿಗರು ವಿಜಯ್. ಸೆಟ್‌ನಲ್ಲಿ ಅವರು ಬಹಳ ವಿನಯದಿಂದ, ನಮ್ರತೆಯಿಂದ ವರ್ತಿಸುತ್ತಿದ್ದರು. ಅವರು ಒಮ್ಮೆ ಸೆಟ್‌ಗೆ ಬಂದರೆಂದರೆ ಮತ್ತೆ ಹೊರಗೆ ಹೋಗುತ್ತಲೇ ಇರಲಿಲ್ಲ. ತಮ್ಮ ವ್ಯಾನಿಟಿಗೂ ಹೋಗುತ್ತಿರಲಿಲ್ಲ. ನಾನು ಈಗಲೂ ಹಾಗೆಯೇ ಮಾಡುತ್ತೇನೆ. ನನ್ನ ಶಾಟ್ ಮುಗಿದ ಕೂಡಲೆ ನಾನು ವ್ಯಾನಿಟಿಗೆ ಹೋಗುವುದಿಲ್ಲ. ಅಲ್ಲೇ ಇರುತ್ತೇನೆ, ತಂತ್ರಜ್ಞರೊಡನೆ, ಸೆಟ್ ಸಿಬ್ಬಂದಿಯೊಂದಿಗೆ ಮಾತನಾಡುತ್ತೇನೆ. ಬೇರೆ ದೃಶ್ಯಗಳ ಚಿತ್ರೀಕರಣ ನೋಡುತ್ತಿರುತ್ತೇನೆ'' ಎಂದಿದ್ದಾರೆ ಪ್ರಿಯಾಂಕಾ.

'ತಮಿಳನ್' ಸಿನಿಮಾದಲ್ಲಿ ಹಾಡು ಹಾಡಿದ್ದ ಪ್ರಿಯಾಂಕಾ
2002 ರಲ್ಲಿ ಪ್ರಿಯಾಂಕಾ ಚೋಪ್ರಾ ತಮ್ಮ ಮೊದಲ ಸಿನಿಮಾ 'ತಮಿಳನ್'ನಲ್ಲಿ ನಟಿಸಿದರು ಈ ಸಿನಿಮಾದಲ್ಲಿ ವಿಜಯ್ ನಾಯಕ. ಈ ಸಿನಿಮಾದಲ್ಲಿ ತಮ್ಮ ಮೊದಲ ಸಿನಿಮಾ ಹಾಡನ್ನು ಸಹ ಪ್ರಿಯಾಂಕಾ ಚೋಪ್ರಾ ಹಾಡಿದರು. ಇದೀಗ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ತಾರೆಯಾಗಿದ್ದಾರೆ. ಅವರ ನಟನೆಯ 'ಮೇಟ್ರಿಕ್ಸ್; ರಿಸರ್ಯಾಕ್ಷನ್' ಸಿನಿಮಾ ಕೆಲವು ದಿನಗಳ ಹಿಂದೆ ಬಿಡುಗಡೆ ಆಗಿದೆ. ಇದೀಗ 'ಸಿಟಾಡೆಲ್ಲ' ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಜೊತೆಗೆ 'ಟೆಕ್ಸ್ಟ್ ಫಾರ್ ಯೂ' ಹಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಾಲಿವುಡ್‌ನ 'ಜೀ ಲೇ ಝರಾ' ಸಿನಿಮಾದಲ್ಲಿ ಪ್ರಿಯಾಂಕಾ ನಟಿಸಲಿದ್ದಾರೆ.