Met Gala 2023: ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ ಚೋಪ್ರಾ ಹವಾ.. 200 ಕೋಟಿ ರೂ. ನೆಕ್ಲೆಸ್ ಧರಿಸಿದ್ರಾ ಪಿಗ್ಗಿ?
ಮೆಟ್ ಗಾಲಾ.. ವಿಶ್ವದ ಅತಿದೊಡ್ಡ ಫ್ಯಾಷನ್ ಈವೆಂಟ್‌ಗಳಲ್ಲಿ ಒಂದು. ನ್ಯೂಯಾರ್ಕ್ ಎಫ್‌ಎಸ್‌ಇ ಮೆಟ್ರೋಪಾಲಿಟನ್ ಮ್ಯೂಜಿಯಂ ಆಫ್ ಆರ್ಟ್‌ನಲ್ಲಿ ಪ್ರತಿವರ್ಷ ಈ ಸಮಾರಂಭ ನಡೆಯುತ್ತದೆ. ಪ್ರಪಂಚದ ಮೂಲೆ ಮೂಲೆಯಿಂದ ಜನಪ್ರಿಯ ಸೆಲೆಬ್ರೆಟಿಗಳು ಈ ಈವೆಂಟ್‌ನಲ್ಲಿ ಭಾಗಿ ಆಗಿ ಹಂಗಾಮಾ ಮಾಡ್ತಿರ್ತಾರೆ. ಭಾರತದಿಂದ ಈವರೆಗೆ ಪ್ರಿಯಾಂಕ ಚೋಪ್ರಾ, ದೀಪಿಕಾ ಪಡುಕೋಣೆ, ಈಶಾ ಅಂಬಾನಿ ಸೇರಿದಂತೆ ಹಲವರು ಹಾಜರಾಗಿ ಕಮಾಲ್ ಮಾಡಿದ್ಧಾರೆ.
ಈ ವರ್ಷ ಕೂಡ ಮೆಟ್‌ಗಾಲಾ ನ್ಯೂಯಾರ್ಕ್ ನಗರದಲ್ಲಿ ಬಹಳ ಅದ್ಧೂರಿಯಾಗಿ ಆರಂಭವಾಗಿದೆ. ಈ ಅಂತಾರಾಷ್ಟ್ರೀಯ ಫ್ಯಾಷನ್ ಈವೆಂಟ್‌ನಲ್ಲಿ ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆ ಕಾಣಿಸಿಕೊಂಡಿದ್ದರು. ಪ್ರಖ್ಯಾತ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ಉಡುಪಿನಲ್ಲಿ ರೆಡ್‌ಕಾರ್ಪೆಟ್ ಮೇಲೆ ಪ್ರಿಯಾಂಕ ಮೋಡಿ ಮಾಡಿದ್ದಾರೆ. ಇಬ್ಬರೂ ವೈಟ್ ಮತ್ತು ಬ್ಲಾಕ್ ಕಾಂಬಿನೇಷನ್ ಕಾಸ್ಟ್ಯೂಮ್ಸ್‌ನಲ್ಲಿ ಎಲ್ಲರ ಗಮನ ಸೆಳೆದರು. ಇದಕ್ಕೆ ಸಂಬಂಧಿಸಿದ ಫೋಟೋಗಳು, ವಿಡಿಯೋಗಳು ಸದ್ಯ ವೈರಲ್ ಆಗಿವೆ.

ಪ್ರಿಯಾಂಕಾ ಚೋಪ್ರಾಗೆ ಸಂಬಂಧಿಸಿದ ಮತ್ತೊಂದು ಇಂಟ್ರೆಸ್ಟಿಂಗ್ ನ್ಯೂಸ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ. ಪ್ರತಿಷ್ಟಾತ್ಮಕವಾದ ಅಂತರಾಷ್ಟ್ರೀಯ ಕಾರ್ಯಕ್ರಮಕ್ಕಾಗಿ ಪ್ರಿಯಾಂಕಾ ಚೋಪ್ರಾ ಧರಿಸಿದ ನೆಕ್ಲೆಸ್ ಬೆಲೆ ಈಗ ಹಾಟ್ ಟಾಪಿಕ್ ಆಗಿದೆ. ಅದರ ಬೆಲೆ ಕೇಳಿದ್ರೆ ಶಾಕ್ ಆಗುವುದು ಗ್ಯಾರೆಂಟಿ. ಬಲ್ಗೇರಿಯ 11.6 ಕ್ಯಾರೆಟ್ ಡೈಮಂಡ್ ನೆಕ್ಲೆಸ್ ಅನ್ನು ಪಿಗ್ಗಿ ಧರಿಸಿದ್ದರು. ಇದರ ಬೆಲೆ 25 ಮಿಲಿಯನ್ ಡಾಲರ್ ಅಂತೆ. ಅಂದರೆ ಭಾರತದ ರೂಪಾಯಿಯಲ್ಲಿ ಬೆಲೆ ಬರೋಬ್ಬರಿ 204 ಕೋಟಿ ರೂ. ಎನ್ನಲಾಗ್ತಿದೆ. ಈ ವಿಚಾರ ಕೇಳಿ ಕೆಲವರು ಅಚ್ಚರಿ ವ್ಯಕ್ತಪಡಿಸ್ತಿದ್ದಾರೆ.

ಮೆಟ್‌ಗಾಲಾ ಈವೆಂಟ್ ಮುಗಿದ ಮೇಲೆ ಇದನ್ನು ಹರಾಜು ಹಾಕಲಾಗುತ್ತದೆಯಂತೆ. ಅಂದಹಾಗೆ ಈ ಬಗ್ಗೆ ಬಲ್ಗರಿ ಸಂಸ್ಥೆ ಆಗ್ಲಿ ಮೆಟ್ ಗಾಲಾ ಆಗ್ಲಿ ಪ್ರತಿಕ್ರಿಯಿಸಿಲ್ಲ. 5ನೇ ಬಾರಿ ಪಿಗ್ಗಿ ಈ ಈವೆಂಟ್‌ನಲ್ಲಿ ಭಾಗವಹಿಸಿದ್ದಾರೆ. 2017, 2018, 2019 ಹಾಗೂ 2021ರಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದರು. ಅದರಲ್ಲಿ ಪತಿ ನಿಕ್ ಜೊತೆಗೆ ಎರಡು ಬಾರಿ ಪ್ರಿಯಾಂಕ ಚೋಪ್ರಾ ಕಾಣಿಸಿಕೊಂಡಿದ್ದ ಪ್ರಿಯಾಂಕಾ, ಇದೀಗ 3 ಬಾರಿ ಭಾಗವಹಿಸಿದ್ದಾರೆ. ಈ ಬಾರಿ ಪ್ರಮುಖ ಡಿಸೈನ್ ವ್ಯಾಲೆಂಟಿನೋ ಡಿಸೈನ್ ಮಾಡಿದ ಥೈ ಸ್ಲಿಟ್ ಗೌನ್‌ನಲ್ಲಿ ಮಿಂಚಿದ್ದಾರೆ. ಈ ಹಿಂದೆ ರಾಲ್ಫ್ ಲಾರೆನ್, ಡಯರ್ ಬ್ರಾಂಡ್ ಡಿಸೈನ್ ಮಾಡಿದ್ದ ಡ್ರೆಸ್ ತೊಟ್ಟು ಗಮನ ಸೆಳೆದಿದ್ದರು.

ಇತ್ತೀಚೆಗೆ ಪ್ರಿಯಾಂಕಾ ಚೋಪ್ರಾ ನಟಿಸಿದ 'ಸಿಟಾಡೆಲ್' ವೆಬ್ ಸೀರಿಸ್ ರಿಲೀಸ್ ಆಗಿ ಸದ್ದು ಮಾಡ್ತಿದೆ. ಈ ಆಕ್ಷನ್ ಸ್ಪೈ ಥ್ರಿಲ್ಲರ್ ಸೀರಿಸ್‌ನಲ್ಲಿ ರಿಚರ್ಡ್ ಮಡೆನ್ ಜೊತೆ ಪಿಗ್ಗಿ ಕಾಣಿಸಿಕೊಂಡಿದ್ದಾರೆ. ಸಿಕ್ಕಾಪಟ್ಟೆ ಹಾಟ್ ದೃಶ್ಯಗಳಲ್ಲಿ ಕೂಡ ಬಿಂದಾಸ್ ಬೆಡಗಿ ಕಾಣಿಸಿಕೊಂಡಿದ್ದು ಇದೇ ಸರಣಿ ಹಿಂದಿಯಲ್ಲಿ ರೀಮೆಕ್ ಆಗ್ತಿದೆ. ವರುಣ್ ಧವನ್ ಹಾಗೂ ಸಮಂತಾ ರುತ್‌ಪ್ರಭ್ ನಟಿಸುತ್ತಿದ್ದಾರೆ.
ಪ್ರಿಯಾಂಕಾ ಚೋಪ್ರಾ ಸದ್ಯ ಬಾಲಿವುಡ್‌ನಿಂದ ಸಂಪೂರ್ಣವಾಗಿ ದೂರಾಗಿದ್ದಾರೆ. ಯಾವುದೇ ಹಿಂದಿ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಪತಿಯ ಜೊತೆ ವಿದೇಶದಲ್ಲೇ ನೆಲೆಸಿದ್ದಾರೆ. ಇನ್ನು ನಿಕ್- ಪ್ರಿಯಾಂಕ ದಂಪತಿ ಸರೋಗಸಿ ಪದ್ದತಿಯಲ್ಲಿ ಹೆಣ್ಣು ಮಗುವಿನ ಪೋಷಕರಾಗಿದ್ದಾರೆ. ಬಹಳ ದಿನಗಳ ಕಾಲ ಮಗಳನ್ನು ಪರಿಚಯಿಸದೇ ಇದ್ದ ಪಿಗ್ಗಿ ಇತ್ತೀಚೆಗೆ ಮಗಳನ್ನು ಕಾರ್ಯಕ್ರಮವೊಂದಕ್ಕೆ ಕರೆದುಕೊಂಡು ಬಂದಿದ್ದರು. ಮಗಳಿಗೆ ಮಾಲ್ತಿ ಮೇರಿ ಚೋಪ್ರಾ ಜೋನಸ್ ಎಂದು ಹೆಸರಿಟ್ಟಿದ್ದಾರೆ.


Click it and Unblock the Notifications











