For Quick Alerts
  ALLOW NOTIFICATIONS  
  For Daily Alerts

  ನಟಿ ಪ್ರಿಯಾಂಕಾ ಛೋಪ್ರಾ ಬಾಯ್ ಫ್ರೆಂಡ್ ಇವರೇನಾ.?

  By Harshitha
  |

  ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಬಾಲಿವುಡ್ ಗಿಂತ ಹಾಲಿವುಡ್ ನಲ್ಲಿಯೇ ಈಗೀಗ ಸುದ್ದಿ ಆಗುತ್ತಿರುವುದು ಹೆಚ್ಚು. 'ಬೇವಾಚ್' ಸೇರಿದಂತೆ ಕೆಲ ಅಮೇರಿಕನ್ ಸಿನಿಮಾಗಳಲ್ಲಿ ಬಿಜಿಯಾಗಿರುವ ಪ್ರಿಯಾಂಕಾ, 'ಕ್ವಾಂಟಿಕೋ' ಮೂಲಕ ಅಮೇರಿಕನ್ ಕಿರುತೆರೆಯಲ್ಲಿ ಖ್ಯಾತಿ ಪಡೆದರು.

  ಈ ನಡುವೆ ನಟಿ ಪ್ರಿಯಾಂಕಾ ಛೋಪ್ರಾ ಇದೀಗ ಗಾಸಿಪ್ ಕಾಲಂಗೆ ಆಹಾರವಾಗಿದ್ದಾರೆ. ತಮಗಿಂತ ವಯಸ್ಸಿನಲ್ಲಿ ಹತ್ತು ವರ್ಷ ಕಿರಿಯ ಆಗಿರುವ ಅಮೇರಿಕನ್ ನಟನೊಂದಿಗೆ ಪ್ರಿಯಾಂಕಾ ಛೋಪ್ರಾ ಪ್ರೀತಿಯ ಪಾಶದಲ್ಲಿ ಸಿಲುಕಿದ್ದಾರಂತೆ.

  ಹಾಗಾದ್ರೆ, ಯಾರು 'ಆ' ಅಮೇರಿಕನ್ ನಟ.? ಪ್ರಿಯಾಂಕಾ ಛೋಪ್ರಾಗಿಂತ ಆತ ಎಷ್ಟು ವರ್ಷ ಕಿರಿಯ.? ಇಲ್ಲಿದೆ ನೋಡಿ, ಸಂಪೂರ್ಣ ಮಾಹಿತಿ...

  'ಆ' ಅಮೇರಿಕನ್ ನಟ ಇವರೇ.!

  'ಆ' ಅಮೇರಿಕನ್ ನಟ ಇವರೇ.!

  ನಟಿ ಪ್ರಿಯಾಂಕಾ ಛೋಪ್ರಾ ಡೇಟ್ ಮಾಡುತ್ತಿರುವ(?) ಅಮೇರಿಕನ್ ನಟ, ಗಾಯಕ ಇವರೇ... ನಿಕ್ ಜೋನಾಸ್. ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಗುಸು ಗುಸು ಎಲ್ಲೆಡೆ ಕೇಳಿಬರುತ್ತಿದೆ.

  ಏನು.? ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?ಏನು.? ನಟಿ ಪ್ರಿಯಾಂಕಾ ಛೋಪ್ರಾ ಗುಟ್ಟಾಗಿ ಮದುವೆ ಆದ್ರಾ.?

  ಎಲ್ಲೆಡೆ ಕಾಣಿಸಿಕೊಳ್ತಿದ್ದಾರೆ ಈ ಜೋಡಿ

  ಎಲ್ಲೆಡೆ ಕಾಣಿಸಿಕೊಳ್ತಿದ್ದಾರೆ ಈ ಜೋಡಿ

  ಬೇಸ್ ಬಾಲ್ ಗೇಮ್ ನೋಡಲು Dodgers ಸ್ಟೇಡಿಯಂಗೆ ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಒಟ್ಟಿಗೆ ಹೋಗಿದ್ದರು. ಸಾಲದಕ್ಕೆ, ವೀಕೆಂಡ್ ಕೂಡ ಇವರಿಬ್ಬರು ಜಾಲಿಯಾಗಿ ಕಳೆದಿದ್ದಾರೆ. ಇದನ್ನೆಲ್ಲ ನೋಡಿ, ಇಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಅಂತ ಗಾಸಿಪ್ ಪಂಡಿತರು ಮಾತನಾಡಿಕೊಳ್ತಿದ್ದಾರೆ.

  ಡಿನ್ನರ್ ಡೇಟ್

  ಡಿನ್ನರ್ ಡೇಟ್

  ಡೇಟಿಂಗ್ ರೂಮರ್ಸ್ ಎಲ್ಲೆಡೆ ಕೇಳಿಬರುತ್ತಿರುವಾಗಲೇ, ಪ್ರಿಯಾಂಕಾ ಹಾಗೂ ನಿಕ್ ಜೋನಾಸ್ ಒಟ್ಟಿಗೆ ಲಾಸ್ ಎಂಜಲೀಸ್ ನಲ್ಲಿ ಡಿನ್ನರ್ ಡೇಟ್ ಕೂಡ ಮಾಡಿರುವುದು ಹಲವರ ಕಣ್ಣರಳಿಸಿದೆ.

  ತುಟಿ ಎರಡು ಮಾಡಿಲ್ಲ.!

  ತುಟಿ ಎರಡು ಮಾಡಿಲ್ಲ.!

  ನಟಿ ಪ್ರಿಯಾಂಕಾ ಛೋಪ್ರಾ ಡೇಟಿಂಗ್ ಮ್ಯಾಟರ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೂ, ಅದರ ಬಗ್ಗೆ ಆಕೆ ಸ್ಪಷ್ಟನೆ ಕೊಟ್ಟಿಲ್ಲ. ಸುದ್ದಿಯನ್ನ ತಳ್ಳಿಯೂ ಹಾಕಿಲ್ಲ.

  ಯಾರೀ ನಿಕ್ ಜೋನಾಸ್.?

  ಯಾರೀ ನಿಕ್ ಜೋನಾಸ್.?

  25 ವರ್ಷದ ನಿಕ್ ಜೋನಾಸ್ ಅಮೇರಿಕಾದ ಗಾಯಕ ಹಾಗೂ ನಟ. 'ಕ್ಯಾಂಪ್ ರಾಕ್', 'ಮಿಸ್ಟರ್ ಸನ್ ಶೈನ್', 'ಸ್ಮ್ಯಾಶ್' ಮುಂತಾದ ಟೆಲಿವಿಷನ್ ಫಿಲ್ಮ್ ಗಳಲ್ಲಿ ನಿಕ್ ಜೋನಾಸ್ ಕಾಣಿಸಿಕೊಂಡಿದ್ದಾರೆ. ಗಾಯಕನಾಗಿ ಹಲವಾರು ಆಲ್ಬಂಗಳನ್ನು ನಿಕ್ ಜೋನಾಸ್ ಹೊರತಂದಿದ್ದಾರೆ. ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ನಿಕ್ ಜೋನಾಸ್ ನಡುವೆ ಹತ್ತು ವರ್ಷಗಳ ಅಂತರವಿದೆ.

  English summary
  According to the latest Grapevine, Bollywood Actress Priyanka Chopra is dating American Actor, Singer Nick Jonas.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X