Oscars 2025: ಪ್ರಿಯಾಂಕ ಚೋಪ್ರಾಳ 'ಅನುಜಾ' ಕಿರುಚಿತ್ರ ಪ್ರಶಸ್ತಿ ಗೆಲ್ಲುತ್ತಾ?

ಚಿತ್ರಪ್ರಪಂಚದಲ್ಲಿಯೇ ಆಸ್ಕರ್ ಪ್ರಶಸ್ತಿ ಸರ್ವಶ್ರೇಷ್ಠ ಪ್ರಶಸ್ತಿ ಎನಿಸಿಕೊಂಡಿದೆ. ಈ ಪ್ರಶಸ್ತಿ ಪಡೆಯುವುದು ಯಾವುದೇ ನಟ, ನಟಿ ಹಾಗೂ ತಂತ್ರಜ್ಞರ ಕನಸು. 2025ರ ಆಸ್ಕರ್ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಿಯಾಂಕಾ ಚೋಪ್ರಾ ಮತ್ತು ಗುನೀತ್ ಮೋಂಗಾ ನಿರ್ಮಾಣ ಅನುಜಾ ಕಿರುಚಿತ್ರ ಕೂಡ ಈ ಬಾರಿ ಪ್ರಶಸ್ತಿ ರೇಸ್‌ನಲ್ಲಿದೆ.

ಬೆಸ್ಟ್ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ ಈ ಕಿರುಚಿತ್ರ 2025ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದ್ದು ಭಾರತವನ್ನು ಪ್ರತಿನಿಧಿಸುತ್ತಿದೆ. ತಿಂಗಳ ಹಿಂದೆ ಆಸ್ಕರ್ 2025 ನಾಮಿನೇಷನ್ ಲಿಸ್ಟ್ ಬಿಡುಗಡೆ ಆಗಿತ್ತು. ಪ್ರಪಂಚದ 180 ಕಿರುಚಿತ್ರಗಳು ಈ ವಿಭಾಗದಲ್ಲಿ ಪ್ರಶಸ್ತಿ ಪಡೆಯಲು ನಾಮಿನೇಷನ್‌ ಲಿಸ್ಟ್‌ನಲ್ಲಿ ಇದ್ದವು. ಆದರೆ ಭಾರತದ 'ಅನುಜಾ' ಸೇರಿ 5 ಕಿರುಚಿತ್ರಗಳು ಮಾತ್ರ ನಾಮಿನೇಷನ್ ಆಗಿರುವುದು ವಿಶೇಷ.

Priyanka Chopra s short film Anuja raises hopes of winning at the 2025 Oscars

2023ರಲ್ಲಿ ಗುನೀತ್ ಮೋಂಗಾ ನಿರ್ಮಾಣದ 'ದಿ ಎಲಿಫೆಂಟ್ ವಿಸ್ಪರೆರ್ಸ್' ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಮೋಂಗಾ ಸಹ ನಿರ್ಮಾಪಕಿಯಾಗಿದ್ದ 'ಪಿರಿಯಡ್-ಎಂಡ್ ಆಫ್ ಸೆಂಟೆನ್ಸ್' ಡಾಕ್ಯುಮೆಂಟರಿ ಕೂಡ ಆಸ್ಕರ್ ವೇದಿಕೆಯಲ್ಲಿ ಸದ್ದು ಮಾಡಿತ್ತು. ಈ ಬಾಗಿ 'ಅನುಜಾ' ಕಿರುಚಿತ್ರಕ್ಕೂ ಪ್ರಶಸ್ತಿ ಸಿಗುವ ನಿರೀಕ್ಷೆ ದಟ್ಟವಾಗಿದೆ.

ಅಂದಹಾಗೆ 'ಅನುಜಾ' ಅಮೆರಿಕನ್‌- ಹಿಂದಿ ಭಾಷೆಯ ಕಿರುಚಿತ್ರ. ದೆಹಲಿಯ ಬಟ್ಟೆ ಮಿಲ್‌ನಲ್ಲಿ ತನ್ನ ಸಹೋದರಿಯೊಂದಿಗೆ ಕೆಲಸ ಮಾಡುವ 9 ವರ್ಷದ ಹುಡುಗಿ 'ಅನುಜಾ'ಳ ಕಥೆಯನ್ನು ಹೇಳಲಾಗಿದೆ. ಬೋರ್ಡಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡಿ ಚೆನ್ನಾಗಿ ಓದಬೇಕೆಂಬ ಹಂಬಲ ಹೊಂದಿರುವ ಅನುಜಾ, ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ಹೊರೆಯನ್ನು ಹೊರಬೇಕಾಗುತ್ತದೆ. ವಿಮಾನದಲ್ಲಿ ಓಡಾಡಲು ಕಷ್ಟಪಡುವ ಪರಿಸ್ಥಿತಿಯಲ್ಲಿದ್ದ ಅನುಜಾ, ಬೋರ್ಡಿಂಗ್ ಶಾಲೆಗೆ ಸೇರುತ್ತಾಳಾ? ತನ್ನ ಕನಸನ್ನು ನನಸಾಗಿಸಿಕೊಳ್ಳಲು ಅವರ ಹೋರಾಟ ಹೇಗಿತ್ತು? ಈ ಹಾದಿಯಲ್ಲಿ ಎದುರಿಸಿದ ಸಮಸ್ಯೆಗಳೇನು? ಎನ್ನುವುದು ಇಡೀ ಕಥೆ.

ಈ ಕಿರುಚಿತ್ರಕ್ಕೆ ಚಿತ್ರಕ್ಕೆ ಆಡಮ್ ಜೆ. ಗ್ರೇವ್ಸ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಬಾರಿ ಆಸ್ಕರ್‌ಗೆ ಬೆಸ್ಟ್ ಲೈವ್ ಆಕ್ಷನ್ ಕಿರುಚಿತ್ರ ವಿಭಾಗದಲ್ಲಿ 'ಅನುಜಾ' ಜೊತೆಗೆ 'ಏಲಿಯನ್', 'ಐಯಾಮ್ ನಾಟ್ ರೋಬೋಟ್', 'ದಿ ಲಾಸ್ಟ್ ರೇಂಜರ್' ಹಾಗೂ 'ಅ ಮ್ಯಾನ್ ವೂ ವುಡ್ ನಾಟ್ ರಿಮೇನ್ ಸೈಲೆಂಟ್' ಕೂಡ ನಾಮಿನೇಟ್ ಆಗಿವೆ. ಈಗಾಗಲೇ 'ಅನುಜಾ' ಕಿರುಚಿತ್ರ ಹಾಲಿವುಡ್ ಶಾರ್ಟ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಅತ್ಯುತ್ತಮ ಲೈವ್ ಇನ್ ಆಕ್ಷನ್ ಫಿಲ್ಮ್, ನ್ಯೂಯಾರ್ಕ್ ಶಾರ್ಟ್ಸ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ 2024 ಮತ್ತು ಮಾಂಟ್‌ ಕ್ಲೇರ್ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

'ಅನುಜಾ' ಕಿರುಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಣೆಗೆ ಲಭ್ಯವಿದೆ. ತಮ್ಮ ಕಿರುಚಿತ್ರ ಆಸ್ಕರ್‌ ಪ್ರಶಸ್ತಿಗೆ ನಾಮಿನೇಟ್‌ ಆಗಿದ್ದಕ್ಕೆ ಪ್ರಿಯಾಂ ಚೋಪ್ರಾ ಸಂತಸ ವ್ಯಕ್ತಪಡಿಸಿದ್ದರು. ಇಂತಾದೊಂದು ಅದ್ಭುತ ತಂಡದ ಕೆಲಸ ಮಾಡಿದ್ದು ಬಹಳ ಖುಷಿ ತಂದಿದೆ ಎಂದಿದ್ದಾರೆ. ನಿಕ್ ಜೋನ್ಸ್ ಜೊತೆ ಮದುವೆಯಾದ ಬಳಿಕ ಪ್ರಿಯಾಂಕ ಮುಂಬೈ ಬಿಟ್ಟು ಅಮೆರಿಕಾದಲ್ಲಿ ವಾಸ್ತವ್ಯ ಹೂಡಿದ್ದಾರೆ. ಬಾಲಿವುಡ್ ಚಿತ್ರಗಳಲ್ಲಿ ನಟಿಸುವುದು ಕಮ್ಮಿ ಆಗಿದೆ. ಹಾಲಿವುಡ್ ಸಿನಿಮಾ, ವೆಬ್‌ ಸೀರಿಸ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

More from Filmibeat

English summary
Priyanka Chopra's short film Anuja emerges as a strong contender for the 2025 Oscars in Best Live Action Short Film at the 97th Academy Awards
Read more about: priyanka chopra oscars 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X