For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಚೋಪ್ರಾ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ಬಿಡುಗಡೆ

  |

  ಪ್ರಿಯಾಂಕಾ ಚೋಪ್ರಾ ನಟಿಸಿರುವ ಹಾಲಿವುಡ್ ಬಿಗ್‌ ಬಜೆಟ್ ಸಿನಿಮಾ 'ಮೇಟ್ರಿಕ್ಸ್ 4'ನ ಟ್ರೇಲರ್ ಬಿಡುಗಡೆ ಆಗಿದೆ ಆದರೆ ಆನ್‌ಲೈನ್‌ನಲಲ್ಲ!

  'ಮೇಟ್ರಿಕ್ಸ್' ಸಿನಿಮಾ ಸರಣಿ ವಿಶ್ವವಿಖ್ಯಾತ ಸಿನಿಮಾ ಸರಣಿಗಳಲ್ಲಿ ಒಂದು. ವಿಜ್ಞಾನ, ತಂತ್ರಜ್ಞಾನ, ಕಲ್ಪನೆ, ಭವಿಷ್ಯ, ಅತಿಶಯ ಎಲ್ಲದರ ಮಿಳಿತವಾಗಿರುವ ಕತೆಗಳನ್ನು 'ಮೇಟ್ರಿಕ್ಸ್' ಸಿನಿಮಾಗಳು ಹೊಂದಿದ್ದು, ಹಾಲಿವುಡ್‌ನ ಅತ್ಯುತ್ತಮ ಆಕ್ಷನ್ ಥ್ರಿಲ್ಲರ್ ಸಿನಿಮಾಗಳ ಪಟ್ಟಿಯಲ್ಲಿ 'ಮೇಟ್ರಿಕ್ಸ್‌' ಸಿನಿಮಾಗಳಿಗೆ ಸ್ಥಾನವಿದೆ.

  'ಮೇಟ್ರಿಕ್ಸ್' ಸರಣಿಯ ನಾಲ್ಕನೇ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದು ಈ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಆದರೆ ಯೂಟ್ಯೂಬ್‌ನಲ್ಲಿಯೋ ಅಥವಾ ಇನ್ನಾವುದೇ ಸಾಮಾಜಿಕ ಜಾಲತಾಣದಲ್ಲ. ಬದಲಿಗೆ ಒಂದು ಖಾಸಗಿ ಕಾರ್ಯಕ್ರಮದಲ್ಲಿ. ಜೊತೆಗೆ 'ಮೇಟ್ರಿಕ್ಸ್ 4'ನ ಅಧಿಕೃತ ಹೆಸರನ್ನು ಸಹ ಘೋಷಿಸಲಾಗಿದೆ.

  ಸಿನಿಮಾದ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಸಿನಿಮಾವನ್ನು 'ಮೇಟ್ರಿಕ್ಸ್ 4' ಎಂದು ಕರೆಯಲಾಗುತ್ತಿತ್ತು. ಆದರೆ ಸಿನಿಮಾದ ಅಧಿಕೃತ ಹೆಸರನ್ನು ಇಂದು ಘೋಷಿಸಲಾಗಿದ್ದು, ಸಿನಿಮಾದ ಹೆಸರು 'ಮೇಟ್ರಿಕ್ಸ್; ರಿಸರೆಕ್ಷನ್' ಎಂದಾಗಿದೆ. ಲಾಸ್‌ ವೆಗಾಸ್‌ನಲ್ಲಿ ನಡೆಯುತ್ತಿರುವ ಸಿನಿಮಾ ಕಾನ್‌ ಇವೆಂಟ್‌ನಲ್ಲಿ ಸಿನಿಮಾದ ಟ್ರೇಲರ್ ಪ್ರದರ್ಶಿಸಲಾಗಿದ್ದು, ಸಿನಿಮಾಕಾನ್‌ನಲ್ಲಿ ಹಾಜರಿದ್ದವರು ಮಾತ್ರವೇ ಟ್ರೇಲರ್ ನೋಡಿದ್ದಾರೆ.

  ಟ್ರೇಲರ್ ನೋಡಿರುವವರು ಸಖತ್ ಥ್ರಿಲ್ ಆಗಿದ್ದು ಟ್ರೇಲರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 'ಮೇಟ್ರಿಕ್ಸ್'ನ ಮುಖ್ಯ ಪಾತ್ರಗಳಾದ ನಿಯೊ, ಟ್ರಿನಿಟಿ ಗೆ ಈ ಸಿನಿಮಾದಲ್ಲಿ ಪರಸ್ಪರ ಪರಿಚಯವೇ ಇರುವುದಿಲ್ಲ! 'ಮೇಟ್ರಿಕ್ಸ್'ನ ಮೊದಲ ಸಿನಿಮಾದಿಂದಲೂ ಈ ಜೋಡಿ ಪ್ರೇಮಿಗಳು, ಸಹೋದ್ಯೋಗಿಗಳಾಗಿರುತ್ತಾರೆ. ಇದು ಸಿನಿಮಾ ಅಭಿಮಾನಿಗಳಲ್ಲಿ ಸಿನಿಮಾದ ಬಗ್ಗೆ ಕುತೂಹಲ ಇನ್ನಷ್ಟು ಹೆಚ್ಚಿಸಿದೆ.

  ಈ ಸಿನಿಮಾದಲ್ಲಿಯೂ ನೀಲಿ ಮಾತ್ರೆ, ಕೆಂಪು ಮಾತ್ರೆಯ ಕತೆ ಇರುವುದು ಟ್ರೆಲರ್‌ನಿಂದ ಗೊತ್ತಾಗಿದೆ. ನೀಲಿ ಮಾತ್ರೆ, ಕೆಂಪು ಮಾತ್ರೆಯಿಂದಲೇ 'ಮೇಟ್ರಿಕ್ಸ್' ಜಗತ್ತು ಅನಾವರಣವಾಗಿತ್ತು ಮೊದಲ ಸಿನಿಮಾದಲ್ಲಿ. 'ಮೇಟ್ರಿಕ್ಸ್‌: ರಿಸರೆಕ್ಷನ್' ನಲ್ಲಿ ನಿಯೋಗೆ ಎಲ್ಲವೂ ಮರೆತುಹೋಗಿದ್ದು, ಆತನಿಗೆ ಮೇಟ್ರಿಕ್ಸ್‌ ಜಗತ್ತಿನ ನೆನಪು ಸಹ ಇರುವುದಿಲ್ಲ. ಪ್ರತಿದಿನ ಆತನಿಗೆ ಕನಸಷ್ಟೆ ಬೀಳುತ್ತಿರುತ್ತದೆ. ಕೊನೆಗೆ ಆತನಿಗೆ ವ್ಯಕ್ತಿಯೊಬ್ಬ ಕೆಂಪು ಮಾತ್ರೆ ನೀಡಿದಾಗ ಮತ್ತೆ ಆತ 'ಮೇಟ್ರಿಕ್ಸ್' ಜಗತ್ತಿಗೆ ಎಂಟ್ರಿ ಆಗುತ್ತಾನೆ.

  ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಸಹ ನಟಿಸಿದ್ದು, ಟ್ರೇಲರ್‌ನಲ್ಲಿ ಪ್ರಿಯಾಂಕಾರ ಪಾತ್ರ ಕಂಡಿರುವ ಬಗ್ಗೆ ಮಾಹಿತಿ ಇಲ್ಲ. ಪ್ರಿಯಾಂಕಾ ತಮ್ಮ ಸಾಮಾಜಿಕ ಜಾಲತಾಣದಲ್ಲಿಯೂ ಸಿನಿಮಾದ ಕುರಿತಾಗಿ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. 'ಮೇಟ್ರಿಕ್ಸ್; ರಿಸರೆಕ್ಷನ್' ಸಿನಿಮಾವನ್ನು ವಾರ್ನರ್ ಬ್ರದರ್ಸ್ ಪ್ರದರ್ಶಿಸುತ್ತಿದ್ದು, ಸಿನಿಮಾವನ್ನು ನಿರ್ದೇಶಕಿ ಲಾನಾ ವಾಕೊವಿಸ್ಕೀಸ್ ನಿರ್ದೇಶಿಸಿದ್ದಾರೆ. ಈ ಹಿಂದಿನ ಮೂರು ಸಿನಿಮಾಗಳನ್ನು ಲಾನಾ ಹಾಗೂ ಆಕೆಯ ಸಹೋದರ ಆಂಡಿ ವಾಕೊವಿಸ್ಕೀಸ್ ನಿರ್ದೇಶಿಸಿದ್ದರು. ಹೊಸ 'ಮೇಟ್ರಿಕ್ಸ್' ಸಿನಿಮಾವು ಡಿಸೆಂಬರ್ 22 ಕ್ಕೆ ಬಿಡುಗಡೆ ಆಗಲಿದೆ.

  ಇನ್ನು ನಟಿ ಪ್ರಿಯಾಂಕಾ ಚೋಪ್ರಾ, ನಿಕ್ ಜೋನಸ್‌ ಜೊತೆ ವಿವಾಹವಾದ ಬಳಿಕ ಬಾಲಿವುಡ್‌ನಿಂದ ತುಸು ಅಂತರ ಕಾಯ್ದುಕೊಂಡಿದ್ದಾರೆ. ಆಗೊಮ್ಮೆ ಈಗೊಮ್ಮೆ ಅಷ್ಟೆ ಹಿಂದಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಪ್ರಿಯಾಂಕಾ. ಪ್ರಸ್ತುತ ಫರ್ಹಾನ್ ಅಖ್ತರ್ ನಿರ್ದೇಶನದ 'ಆ ಜೀಲೆ ಝರಾ', ಶಿಮಿತ್ ಅಮೀನ್ ನಿರ್ದೇಶನದಲ್ಲಿ ಅಂತರಿಕ್ಷಯಾನಿ ಕಲ್ಪನಾ ಚಾವ್ಲಾ ಜೀವನ ಆಧರಿಸಿದ ಸಿನಿಮಾ, ಬ್ಯಾರಿ ಲೆವಿಸನ್ ನಿರ್ದೇಶನದ 'ಶೀಲಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇವುಗಳ ಹೊರತಾಗಿ ಹಾಲಿವುಡ್‌ನ 'ಟೆಕ್ಸ್ಟ್ ಫಾರ್ ಯೂ' ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ತಯಾರಾಗಿದೆ. 'ಅವೇಂಜರ್ಸ್', 'ಕ್ಯಾಪ್ಟನ್ ಅಮೆರಿಕ' ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕ ಓಡಿ ರೂಸೊ ಬ್ರದರ್ಸ್ ಹಾಗೂ ಬ್ರಿಯಾನ್ ಕ್ರಿಕ್ ಜಂಟಿಯಾಗಿ ನಿರ್ದೇಶಿಸುತ್ತಿರುವ ವೆಬ್ ಸರಣಿ 'ಸಿಟಾಡೆಲ್‌'ನಲ್ಲಿ ನಟಿಸುತ್ತಿದ್ದಾರೆ. ಈ ವೆಬ್ ಸರಣಿಯಲ್ಲಿ ಪ್ರಿಯಾಂಕಾರದ್ದು ಮುಖ್ಯ ಪಾತ್ರ.

  English summary
  Priyanka Chopra starrer The Matrix Resurrection movie trailer released in Cinema Con event Los Vegas. Movie will release on December 22.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X