ಹಾಲಿವುಡ್‌ಗೆ ಪ್ರಭಾಸ್- ರಾಣಾ ಎಂಟ್ರಿ: ಕ್ರೇಜಿ ಪ್ರಾಜೆಕ್ಟ್‌ಗೆ ಬಾಹು- ಭಲ್ಲ ಸ್ಕೆಚ್!
ಪ್ರಭಾಸ್ ನಟನೆಯ 'ಪ್ರಾಜೆಕ್ಟ್-K' ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ. 'ಮಹಾನಟಿ' ಸಿನಿಮಾ ಕಟ್ಟಿಕೊಟ್ಟಿದ್ದ ನಾಗ್ ಅಶ್ವಿನ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳ್ತಿದ್ದಾರೆ. 600 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಈ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣವಾಗುತ್ತಿದೆ. ಅಂತಾರಾಷ್ಟ್ರೀಯ ಸಿನಿಮಾ ವೇದಿಕೆ ಸ್ಯಾನ್ ಡಿಯಾಗೋ ಕಾಮಿಕ್-ಕಾಮ್ 2023ರಲ್ಲಿ ಭಾಗವಹಿಸಲು 'ಪ್ರಾಜೆಕ್ಟ್-K' ಚಿತ್ರಕ್ಕೆ ಅವಕಾಶ ಸಿಕ್ಕಿದೆ.
'ಪ್ರಾಜೆಕ್ಟ್-K' ಅನ್ನೋದು ಬರೀ ವರ್ಕಿಂಗ್ ಟೈಟಲ್ ಆಗಿದ್ದು ಚಿತ್ರದ ಅಸಲಿ ಟೈಟಲ್ ಏನು ಎನ್ನುವ ಕುತೂಹಲ ಸಿನಿರಸಿಕರಲ್ಲಿದೆ. ಸದ್ಯ ಟೀಸರ್ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದ್ದು ಶೀಘ್ರದಲ್ಲೇ ಸಿನಿಮಾ ಟೈಟಲ್ ಏನು ಅನ್ನೋದು ಕೂಡ ರಿವೀಲ್ ಆಗಲಿದೆ. ಸ್ಯಾನ್ ಡಿಯಾಗೋ ಕಾಮಿಕ್-ಕಾಮ್ ಈವೆಂಟ್ ಜುಲೈ 20 ರಿಂದ 23 ರವರೆಗೆ ನಡೆಯಲಿದೆ. 'ಪ್ರಾಜೆಕ್ಟ್- K' ಈ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದಿರುವುದು ವಿಶೇಷ.

ಅಂದಹಾಗೆ 'ಪ್ರಾಜೆಕ್ಟ್- K' ಈ ಕಾಮಿಕ್-ಕಾನ್‌ನಲ್ಲಿ ಭಾಗವಹಿಸಿದ ಮೊದಲ ಭಾರತೀಯ ಸಿನಿಮಾ ಎನಿಸಿಕೊಂಡಿದೆ. ಸ್ಯಾನ್ ಡಿಯಾಗೋ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಪ್ರಭಾಸ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ನಾಗ್ ಅಶ್ವಿನ್ ಸೇರಿದಂತೆ ಚಿತ್ರ ನಿರ್ಮಾಪಕರು ಭಾಗವಹಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಇಡೀ ಚಿತ್ರತಂಡ ಅಮೆರಿಕದಲ್ಲಿ ಬೀಡುಬಿಟ್ಟಿದೆ. ಪ್ರಭಾಸ್ ಜೊತೆಗೆ ರಾಣಾ ದಗ್ಗುಬಾಟಿ ಕೂಡ ಹಾಲಿವುಡ್ ಅಂಗಳದಲ್ಲಿ ಕಾಣಿಸಿಕೊಂಡಿದ್ದಾರೆ.
'ಪ್ರಾಜೆಕ್ಟ್-K' ಚಿತ್ರದಲ್ಲಿ ರಾಣಾ ನಟಿಸಿಲ್ಲ. ಆದರೂ ಸ್ಯಾನ್ ಡಿಯಾಗೋ ಕಾಮಿಕ್-ಕಾನ್‌ನಲ್ಲಿ ಭಾಗವಹಿಸುತ್ತಿರುವುದು ವಿಶೇಷ. ಇಬ್ಬರು ಸಿನಿಮಾ ಪೋಸ್ಟರ್ ಇರುವು ಟೀಶರ್ಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಆ ಫೋಟೊಗಳು ಈಗ ವೈರಲ್ ಆಗುತ್ತಿದೆ. ಇದನ್ನು ನೋಡಿ ಪ್ರಭಾಸ್ ಶೀಘ್ರದಲ್ಲೇ ಹಾಲಿವುಡ್ ಸಿನಿಮಾದಲ್ಲಿ ನಟಿಸಿದರು ಅಚ್ಚರಿ ಪಡ್ಬೇಕಿಲ್ಲ ಎನ್ನುತ್ತಿದ್ದಾರೆ. ಚಿತ್ರದ ಫಸ್ಟ್ ಗ್ಲಿಂಪ್ಸ್ ಜುಲೈ 20ರಂದು USನಲ್ಲಿ ಬಿಡುಗಡೆಯಾಗುತ್ತಿದೆ. ಭಾರತೀಯ ಕಾಲಮಾನದ ಪ್ರಕಾರ ಜುಲೈ 21 ರಂದು ಆ ಟೀಸರ್ ಇಲ್ಲಿ ರಿವೀಲ್ ಆಗಲಿದೆ. ಇನ್ನು ಪ್ರಭಾಸ್ ಹಾಗೂ ರಾಣ 'ಬಾಹುಬಲಿ' ಸರಣಿ ಸಿನಿಮಾಗಳಲ್ಲಿ ಅಬ್ಬರಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.

'ಬಾಹುಬಲಿ' ಸರಣಿ ನಂತರ ಪ್ರಭಾಸ್ ನಟಿಸಿದ 3 ಸಿನಿಮಾಗಳು ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ ವಿಫಲವಾಗಿವೆ. ಹಾಗಾಗಿ ಯಂಗ್ ರೆಬಲ್ ಸ್ಟಾರ್ ಮುಂದಿನ ಸಿನಿಮಾಗಳ ಬಗ್ಗೆ ಭಾರೀ ನಂಬಿಕೆಯಿದೆ. ಈಗಾಗಲೇ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಸಲಾರ್' ಸಿನಿಮಾ ರಿಲೀಸ್‌ಗೆ ರೆಡಿಯಾಗ್ತಿದೆ. ನಂತರ 'ಪ್ರಾಜೆಕ್ಟ್- K' ಪ್ರೇಕ್ಷಕರ ಮುಂದೆ ಬರಲಿದೆ. ಭಾರತೀಯ ಚಿತ್ರರಂಗದಲ್ಲೇ ಇದು ಅತಿ ದೊಡ್ಡ ಮಲ್ಟಿಸ್ಟಾರರ್ ಸಿನಿಮಾ ಎನ್ನಬಹುದು. ಏಕಂದರೆ ಅಮಿತಾಬ್ ಬಚ್ಚನ್, ಕಮಲ್ ಹಾಸನ್, ದೀಪಿಕಾ ಪಡುಕೋಣೆ ಚಿತ್ರದ ತಾರಾಗಣದಲ್ಲಿದ್ದಾರೆ.
'ಪ್ರಾಜೆಕ್ಟ್- K' ಸೈನ್ಸ್ ಫಿಕ್ಷನ್ ಆಕ್ಷನ್ ಎಂಟರ್‌ಟೈನರ್ ಸಿನಿಮಾ. ನೂರಾರು ವರ್ಷಗಳ ಮುಂದೆ ಪ್ರಪಂಚ ಹೇಗಿರುತ್ತದೆ? ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಚಿತ್ರದಲ್ಲಿ ಪ್ರಭಾಸ್ ಲುಕ್ ಹೇಗಿರುತ್ತದೆ? ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಇತ್ತೀಚೆಗೆ ಚಿತ್ರದಲ್ಲಿ ನಾಯಕಿ ದೀಪಿಕಾ ಪಡುಕೋಣೆ ಫಸ್ಟ್ ಲುಕ್ ರಿವೀಲ್ ಆಗಿತ್ತು. ಇನ್ನು ಚಿತ್ರದಲ್ಲಿ ದಿಶಾ ಪಟಾಣಿ ಕೂಡ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಗ್ರಾಫಿಕ್ಸ್‌ನಲ್ಲಿ ಚಿತ್ರವನ್ನು ಹೆಚ್ಚು ಚೆಂದಗಾಣಿಸುವ ಪ್ರಯತ್ನ ನಡೀತಿದೆ.
ಈ ಬಹುಕೋಟಿ ವೆಚ್ಚದ ಸಿನಿಮಾದಲ್ಲಿ ಹಾಲಿವುಡ್ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸೆಟ್‌ಗಳನ್ನು ಹಾಕಿ ಚಿತ್ರದ ಬಹುತೇಕ ಚಿತ್ರೀಕರಣ ಮಾಡಲಾಗಿದೆ. ಬಹಳ ಹಿಂದೆ ಶುರುವಾದ ಸಿನಿಮಾ ಕಾರಣಾಂತರಗಳಿಂದ ತಡವಾಗುತ್ತಿದೆ. ಇನ್ನು ಚಿತ್ರವನ್ನು ಹೊದ ದೇಶಗಳಲ್ಲಿ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದಕ್ಕೆ ಸ್ಯಾನ್ ಡಿಯಾಗೋ ಕಾಮಿಕ್-ಕಾನ್ ಈವೆಂಟ್ ಸಹಕಾರಿಯಾಗಲಿದೆ.


Click it and Unblock the Notifications











