twitter
    For Quick Alerts
    ALLOW NOTIFICATIONS  
    For Daily Alerts

    RRR ಆಸ್ಕರ್‌ ರೇಸ್ ಶುರು: ಹದಿನೈದು ವಿಭಾಗದಲ್ಲಿ ಪರಿಗಣಿಸಲು ಅಭಿಯಾನ

    |

    ಒಟಿಟಿ ಮೂಲಕ ವಿಶ್ವ ಸಿನಿಮಾ ಪ್ರೇಕ್ಷಕರ ಮನಗೆದ್ದಿದ್ದ 'RRR' ಸಿನಿಮಾ ಆಸ್ಕರ್‌ಗೆ ಅಧಿಕೃತವಾಗಿ ಭಾರತದಿಂದ ಆಯ್ಕೆ ಆಗುವಲ್ಲಿ ವಿಫಲವಾಗಿದೆ. ಆದರೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳು 'RRR' ಬೆಂಬಲಕ್ಕೆ ನಿಂತಿದ್ದು, ಸಿನಿಮಾಕ್ಕೆ ಆಸ್ಕರ್‌ ನಾಮಿನೇಷನ್ ದೊರಕಿಸುವ ಯತ್ನದಲ್ಲಿ ಭಾಗಿಯಾಗುತ್ತಿದ್ದಾರೆ.

    RRR ಸಿನಿಮಾ ಭಾರತದಿಂದ ಅಧಿಕೃತವಾಗಿ ಆಸ್ಕರ್‌ಗೆ ಆಯ್ಕೆ ಆಗಿಲ್ಲವಾದರು ಆಸ್ಕರ್‌ ಪ್ರವೇಶಕ್ಕೆ ಅವಕಾಶ ಇನ್ನೂ ಇದೆ. RRR ಅನ್ನು ಆಸ್ಕರ್‌ಗೆ ಪರಿಗಣಿಸಬೇಕು ಎಂದು ಅಭಿಯಾನ ದೊಡ್ಡ ಮಟ್ಟದಲ್ಲಿ ಆರಂಭವಾಗಿದ್ದು ಬರೋಬ್ಬರಿ 15 ವಿಭಾಗಗಳಲ್ಲಿ 'RRR' ಅನ್ನು ಆಸ್ಕರ್‌ಗೆ ಪರಿಗಣಿಸಲು ಕೋರಲಾಗಿದೆ.

    RRR ಸಿನಿಮಾದ ಆಸ್ಕರ್ ಅಭಿಯಾನ ಆರಂಭವಾಗಿದ್ದು, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ನಿರ್ದೇಶನ, ಅತ್ಯುತ್ತಮ ಮೂಲ ಚಿತ್ರಕತೆ, ಅತ್ಯುತ್ತಮ ಪೋಷಕ ನಟ, ಪೋಷಕ ನಟಿ, ಅತ್ಯುತ್ತಮ ಹಾಡು, ಅತ್ಯುತ್ತಮ ಸಿನಿಮಾಟೊಗ್ರಫಿ, ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್, ವಸ್ತವಿನ್ಯಾಸ, ಅತ್ಯುತ್ತಮ ಹಿನ್ನೆಲೆ ಸಂಗೀತ, ಅತ್ಯುತ್ತಮ ಸಂಕಲನ, ಪ್ರಸಾದನ ಮತ್ತು ಕೇಶವಿನ್ಯಾಸ, ಅತ್ಯುತ್ತಮ ಧ್ವನಿ ಗ್ರಹಣ, ಅತ್ಯುತ್ತಮ ವಿಶ್ಯುಲ್ ಎಫೆಕ್ಟ್ ವಿಭಾಗದಲ್ಲಿ ಆಸ್ಕರ್‌ಗೆ ಪರಿಗಣಿಸುವಂತೆ ಅಭಿಯಾನ ಆರಂಭಿಸಲಾಗಿದೆ.

    Rajamoulis RRR Movie Oscar Nomination Campaign Started

    ಆಸ್ಕರ್‌ಗೆ ಮತಚಲಾಯಿಸುವ ಅಧಿಕಾರವುಳ್ಳ ವ್ಯಕ್ತಿಗಳಿಗೆ ಸಿನಿಮಾವನ್ನು ತೋರಿಸಿ ಸಿನಿಮಾವನ್ನು ಆಸ್ಕರ್‌ಗೆ ಪರಿಗಣಿಸುವಂತೆ ಮತ್ತು ಸ್ಪರ್ಧೆಯಲ್ಲಿ ಸಿನಿಮಾದ ಪರವಾಗಿ ಮತಚಲಾಯಿಸುವಂತೆ ಮನವಿ ಮಾಡಲಾಗುತ್ತಿದೆ.

    ಆಸ್ಕರ್ 2023 ಕ್ಕೆ ಭಾರತದಿಂದ ಗುಜರಾತಿ ಸಿನಿಮಾ 'ಚೆಲ್ಲೊ ಶೋ' ಅನ್ನು ಎಫ್‌ಎಫ್‌ಐನ ಜ್ಯೂರಿಗಳು ಆಯ್ಕೆ ಮಾಡಿದ್ದಾರೆ. 'RRR' ಸಿನಿಮಾವನ್ನು ಅಧಿಕೃತವಾಗಿ ಆಯ್ಕೆ ಮಾಡದೇ ಇರುವ ಬಗ್ಗೆ ತೀವ್ರ ಅಸಮಾಧಾನವನ್ನು ನೆಟ್ಟಿಗರು ವ್ಯಕ್ತಪಡಿಸಿದ್ದರು.

    ಭಾರತದಿಂದ ಅಧಿಕೃತವಾಗಿ 'RRR' ಸಿನಿಮಾ ಆಯ್ಕೆ ಆಗದೇ ಇರುವ ಕಾರಣಕ್ಕೆ, RRR ಸಿನಿಮಾವು ಅತ್ಯುತ್ತಮ ವಿದೇಶಿ ಸಿನಿಮಾ ವಿಭಾಗದಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಳೆದುಕೊಂಡಿದೆ. ಆದರೆ ಇತರೆ ವಿಭಾಗಗಳಲ್ಲಿ ಆಸ್ಕರ್‌ಗೆ ಸ್ಪರ್ಧಿಸಬಹುದಾಗಿದೆ.

    English summary
    Rajamouli's RRR movie Oscar nomination campaign has been started. Movie is contesting in more than 15 categories.
    Thursday, October 6, 2022, 15:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X