4 ಆಸ್ಕರ್ ಗೆದ್ದ ಹಾಲಿವುಡ್ ಚಿತ್ರದ ಜೊತೆ 'ಟಾಕ್ಸಿಕ್' ಚಿತ್ರವನ್ನು ಹೋಲಿಸಿದ್ದೇಕೆ ಯಶ್?

ಹಾಲಿವುಡ್ ವೇದಿಕೆಯಲ್ಲಿ 'ಟಾಕ್ಸಿಕ್' ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಸದ್ಯ 'ರಾಮಾಯಣ' ಚಿತ್ರದ ಪ್ರಚಾರಕ್ಕಾಗಿ ಲಾಸ್‌ ವೇಗಾಸ್‌ನಲ್ಲಿ ಅವರು ಬೀಡು ಬಿಟ್ಟಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ಸೇರಿ ಹಾಲಿವುಡ್ ಮಾಧ್ಯಮಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಈ ವೇಳೆ ಗೀತು ಮೋಹನ್ ದಾಸ್ ನಿರ್ದೇಶನದ 'ಟಾಕ್ಸಿಕ್' ಸಿನಿಮಾ ಬಗ್ಗೆ ಕೂಡ ಮಾತನಾಡುತ್ತಿದ್ದಾರೆ.

ಇದೇ ಮೊದಲ ಬಾರಿಗೆ ಯಶ್ 'ಟಾಕ್ಸಿಕ್' ಬಗ್ಗೆ ಪ್ರತಿಕ್ರಿಯಿಸುತ್ತಿದ್ದಾರೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಹಾಗಾಗಿ ಹಾಲಿವುಡ್‌ ಅಂಗಳದಲ್ಲಿ ಕೂಡ ಚಿತ್ರಕ್ಕೆ ಒಳ್ಳೆ ಪ್ರತಿಕ್ರಿಯೆ ಸಿಗುವ ನಿರೀಕ್ಷೆಯಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ. ಇದೇ ವೇಳೆ ಆಸ್ಕರ್ ಈ ವರ್ಷ 4 ಆಸ್ಕರ್ ಪ್ರಶಸ್ತಿ ಪಡೆದ 'ಸಿನ್ನರ್ಸ್' ಸಿನಿಮಾ ರೀತಿ 'ಟಾಕ್ಸಿಕ್' ಎಲ್ಲರ ಮನಗೆಲ್ಲುತ್ತದೆ ಎಂದು ಯಶ್ ಹೇಳಿದ್ದಾರೆ.

Ramayana star Yash Says Toxic Will Impress Hollywood Like Sinners

ಸಿನಿಮಾಕಾನ್ ಸಮಾವೇಶದ ಬಳಿಕ The MovieReport.com ಯೂಟ್ಯೂಬ್ ಸಂದರ್ಶನದಲ್ಲಿ ಯಶ್ ಮಾತನಾಡಿದ್ದಾರೆ. "ಜೂನ್ 4ಕ್ಕೆ 'ಟಾಕ್ಸಿಕ್' ಸಿನಿಮಾ ಬಿಡುಗಡೆ ಆಗ್ತಿದೆ. ನಾನು ನಮಿತ್ ಸೇರಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಿನಿಮಾಗಳನ್ನು ಕಟ್ಟಿಕೊಡಬೇಕು ಎಂದುಕೊಂಡಿದ್ದೇವೆ. ಅದೇ ರೀತಿ 'ಟಾಕ್ಸಿಕ್' ಹಾಗೂ 'ರಾಮಾಯಣ' ಚಿತ್ರಗಳು ಶುರುವಾಯ್ತು. ಅದಕ್ಕೆ ಇಂಗ್ಲೀಷ್‌ನಲ್ಲಿ ಕೂಡ ಚಿತ್ರೀಕರಣ ಮಾಡಿದ್ದೇವೆ. 'ಟಾಕ್ಸಿಕ್' ನೋಡಲು ಗ್ಯಾಂಗ್‌ಸ್ಟರ್ ಸಿನಿಮಾ ಎನಿಸಬಹುದು. ಆದರೆ ಅದರಲ್ಲಿ ಸಾಕಷ್ಟು ಪದರಗಳಿವೆ. ಅದರಲ್ಲೂ ಒಬ್ಬ ವ್ಯಕ್ತಿಯ ವಿಭಿನ್ನ ವ್ಯಕ್ತಿತ್ವವನ್ನು ಅದರಲ್ಲೂ ಕರಾಳ ವ್ಯಕ್ತಿತ್ವವನ್ನು ಬಹಳ ವಿಭಿನ್ನವಾಗಿ ತೋರಿಸಲಾಗಿದೆ. ಬಹುತೇಕ ವಿಚಾರಗಳನ್ನು ರೂಪಕ(metaphor)ವಾಗಿ ಹೇಳಲಾಗಿದೆ" ಎಂದಿದ್ದಾರೆ.

ಮಾತು ಮುಂದುವರೆಸಿರುವ ಯಶ್ 'ಟಾಕ್ಸಿಕ್' ಚಿತ್ರದಲ್ಲಿ ವಿಶಿಷ್ಟ ಕಥೆಯಿದೆ. ಅದ್ಭುತ ಕಲಾವಿದರು ನಟಿಸಿದ್ದಾರೆ. ದೇಶದ ಜನಪ್ರಿಯ ನಟ, ನಟಿಯರು ಜೊತೆ ಹೊಸಬರು ತಂಡ ಸೇರಿಕೊಂಡಿದ್ದಾರೆ" ಎಂದಿದ್ದಾರೆ. "ಇದು ಬಹಳ ವಿಶಿಷ್ಟವಾದ ಸಿನಿಮಾ. ದೊಡ್ಡ ಆಕ್ಷನ್ ಸಿನಿಮಾ. ಮುಖ್ಯವಾಗಿ ಇದು ಒರಿಜಿನಲ್ ಸಿನಿಮಾ. 'ಸಿನ್ನರ್ಸ್' ರೀತಿ ಬಹಳ ವಿಶಿಷ್ಟವಾದ ಸಿನಿಮಾ 'ಟಾಕ್ಸಿಕ್'. ಆದರೆ ಪ್ರೇಕ್ಷಕರ ಅದನ್ನು ಒಪ್ಪಿಕೊಂಡ್ರು, ಎಂಜಾಯ್ ಮಾಡಿದ್ರು. 'ಟಾಕ್ಸಿಕ್' ಕೂಡ ಅದೇ ರೀತಿ ಒರಿಜಿನಲ್ ಸಿನಿಮಾ. ಹೊಸ ಅನುಭವ ಕೊಡುವ ಗ್ಯಾಂಗ್‌ಸ್ಟರ್ ಸಿನಿಮಾ" ಎಂದು ತಿಳಿಸಿದ್ದಾರೆ.

ಅಂದಹಾಗೆ ಈ ಬಾರಿ ಆಸ್ಕರ್‌ನಲ್ಲಿ 'ಸಿನ್ನರ್ಸ್' ಸಿನಿಮಾ ದಾಖಲೆ ಬರೆದಿತ್ತು. 16 ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಅಮೆರಿಕಾದ ಹಾರರ್ ಸಿನಿಮಾ ನಾಮಿನೇಟ್ ಆಗಿತ್ತು. ಅಂತಿಮವಾಗಿ ಅತ್ಯುತ್ತಮ ನಟ (ಮೈಕೆಲ್ ಬಿ. ಜೋರ್ಡಾನ್), ಅತ್ಯುತ್ತಮ ಒರಿಜಿನಲ್ ಸ್ಕ್ರೀನ್‌ಪ್ಲೇ (ರಿಯಾನ್ ಕೂಗ್ಲರ್), ಅತ್ಯುತ್ತಮ ಛಾಯಾಗ್ರಹಣ (ಶರತ್ಕಾಲ ಡ್ಯುರಾಲ್ಡ್ ಅರ್ಕಾಪಾ) ಮತ್ತು ಅತ್ಯುತ್ತಮ ಒರಿಜಿನಲ್ ಮ್ಯೂಸಿಕ್ (ಲುಡ್ವಿಗ್ ಗೊರಾನ್ಸನ್) ಸೇರಿ 4 ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.

ಕಥೆ ಹೇಳುವುದರಲ್ಲಿ ಒಂದು ನಿರ್ದಿಷ್ಟ ಫಾರ್ಮುಲಾ ಇದೆ. ಪ್ರೇಕ್ಷಕರನ್ನು ಸೆಳೆಯಲು ಹೀಗೆ ಮಾಡ್ತೀವಿ.. ಆದರೆ ಆಳಕ್ಕೆ ಇಳಿವುದಿಲ್ಲ. ಆದರೆ 'ಟಾಕ್ಸಿಕ್' ಸಿನಿಮಾ ಮಾಡುವಾಗ ಬೇರೆ ಬಹಳ ವಿಭಿನ್ನವಾಗಿ ಆಲೋಚಿಸಿದೆವು. ಹೊಸ ಪ್ರಪಂಚ ಸೃಷ್ಟಿಸಿದೆವು ಎಂದು ಯಶ್ ವಿವರಿಸಿದ್ದಾರೆ.

ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ 'ಟಾಕ್ಸಿಕ್' ಸಿನಿಮಾ ನಿರ್ಮಾಣ ಮಾಡಿದ್ದಾರೆ. 500 ಕೋಟಿ ರೂ.ಗೂ ಅಧಿಕ ಬಜೆಟ್‌ನಲ್ಲಿ ಸಿನಿಮಾ ತಯಾರಾಗಿದೆ ಎನ್ನಲಾಗ್ತಿದೆ. ನಯನತಾರ, ಹುಮಾ ಖುರೇಶಿ, ಕಿಯಾರಾ ಅದ್ವಾನಿ, ರುಕ್ಮಿಣಿ ವಸಂತ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಸೇರಿ ಯಶ್ ಚಿತ್ರಕಥೆ ತಿದ್ದಿದ್ದಾರೆ. ರವಿ ಬಸ್ರೂರು ಸೇರಿ ಒಟ್ಟು 5 ಮಂದಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ.

ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕಳೆದ ವರ್ಷವೇ 'ಟಾಕ್ಸಿಕ್' ಸಿನಿಮಾ ತೆರೆಗೆ ಬರಬೇಕಿತ್ತು. ಬಳಿಕ ಈ ವರ್ಷ ಮಾರ್ಚ್ 19ಕ್ಕೆ ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇರಾನ್‌-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಕೊಲ್ಲಿ ದೇಶಗಳಲ್ಲಿ ಸಮಸ್ಯೆ ಆಗಬಹುದು ಎನ್ನುವ ಕಾರಣಕ್ಕೆ ಸಿನಿಮಾ ಬಿಡುಗಡೆಯನ್ನು ಮತ್ತೆ 3 ತಿಂಗಳು ಮುಂದೂಡಲಾಗಿದೆ.

More from Filmibeat

Read more about: yash toxic
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X