»   » ಹಾಲಿವುಡ್ ಚಿತ್ರದಲ್ಲಿ 'ಬಾಹುಬಲಿ' ರಾಣಾ ಅಬ್ಬರ

ಹಾಲಿವುಡ್ ಚಿತ್ರದಲ್ಲಿ 'ಬಾಹುಬಲಿ' ರಾಣಾ ಅಬ್ಬರ

Posted By:
Subscribe to Filmibeat Kannada

ಅಮೇರಿಕನ್ ಸೂಪರ್ ಹೀರೋ ಚಿತ್ರವನ್ನ ಆಧರಿಸಿ ಮೂಡಿ ಬರುತ್ತಿರುವ ಹಾಲಿವುಡ್ ನ ಬಹುನಿರೀಕ್ಷೆಯ 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರ ಇದೇ ಏಪ್ರಿಲ್ 27ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ.

ಭಾರತದಲ್ಲಿ ಇಂಗ್ಲೀಷ್, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಈ ಸಿನಿಮಾ ಬಿಡುಗಡೆಯಾಗುತ್ತಿದೆ. ವಿಶೇಷ ಅಂದ್ರೆ, 'ಅವೆಂಜರ್ಸ್: ಇನ್ಫಿನಿಟಿ ವಾರ್' ಚಿತ್ರದ ತೆಲುಗು ವರ್ಷನ್ ನಲ್ಲಿ ರಾಣಾ ದಗ್ಗುಬಾಟಿ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ 'ಥಾನೋಸ್' ಪಾತ್ರಕ್ಕೆ ವಾಯ್ಸ್ ಡಬ್ ಮಾಡಿರುವ ರಾಣಾ ಅಭಿಮಾನಿಗಳನ್ನ ರಂಜಿಸಲಿದ್ದಾರೆ.

Rana Daggubati on dubbing for Avengers Infinity War

ಯೂಟ್ಯೂಬ್ ಟ್ರೆಂಡಿಂಗ್ನಲ್ಲಿ NO.1 ಸ್ಥಾನದಲ್ಲಿದೆ ಈ ಟ್ರೈಲರ್

ಅಂದ್ಹಾಗೆ, 'ಥಾನೋಸ್' ಚಿತ್ರದಲ್ಲಿ ವಿಲನ್. ಖಳನಾಯಕನ ಪಾತ್ರಕ್ಕೆ ರಾಣಾ ವಾಯ್ಸ್ ನೀಡಿರುವುದು ಅಭಿಮಾನಿಗಳನ್ನ ಮತ್ತಷ್ಟು ರಂಜಿಸಲಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಣಾ ''ನಾನು ಥಾನೋಸ್': ನನಗೆ ಈ ಜಗತ್ತನ್ನ ಆಳುವ ಶಕ್ತಿ ಇದೆ'' ಎಂದು ಖುಷಿ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಚಿತ್ರದಲ್ಲಿ ನನ್ನನ್ನ ಭಾಗವಾಗಿಸಿದ್ದಕ್ಕೆ ಸಂತಸವಾಗಿದೆ. ತುಂಬ ಚೆನ್ನಾಗಿದೆ ಈ ಅನುಭವ ಎಂದಿದ್ದಾರೆ.

ರಾಬರ್ಟ್ ಡೌನಿ ಜೂನಿಯರ್, ಕ್ರಿಸ್ ಹೆಮ್ಸ್ವರ್ತ್, ಮಾರ್ಕ್ ರುಫಲೋ, ಕ್ರಿಸ್ ಇವಾನ್ಸ್, ಸ್ಕಾರ್ಲೆಟ್ ಜೋಹಾನ್ಸನ್, ಬೆನೆಡಿಕ್ಟ್ ಕಂಬರ್ಬ್ಯಾಚ್, ಡಾನ್ ಚೀಡೆಲ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದು ತುಂಬಾ ರೋಚಕತೆ ಹುಟ್ಟುಹಾಕಿದೆ.

ಇನ್ನು ಆಂಟನಿ ರುಸ್ಸೋ ಮತ್ತು ಜೋ ರುಸ್ಸೋ ಇಬ್ಬರು ನಿರ್ದೇಶಕರು ಸೇರಿ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ. ಅಲನ್ ಸಿಲ್ವೆಸ್ಟ್ರಿ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ನೀಡಿದ್ದಾರೆ.

English summary
Telugu actor Rana Daggubati on dubbing for Thanos in Avengers Infinity War Telugu version. the movie will releasing on april 27th all over world.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X