twitter
    For Quick Alerts
    ALLOW NOTIFICATIONS  
    For Daily Alerts

    ರೇಪ್ ಪ್ರಕರಣದಲ್ಲಿ ಜೈಲಿನಲ್ಲಿರುವ ಹಾಲಿವುಡ್ ನಿರ್ಮಾಪಕನಿಗೆ ಕೊರೊನಾ ವೈರಸ್

    |

    ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಹಾಲಿವುಡ್‌ನ ನಿರ್ಮಾಪಕ ಹಾರ್ವಿ ವೀನ್‌ಸ್ಟೀನ್ ಅವರಿಗೆ ಅವರಲ್ಲಿ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ.

    Recommended Video

    ಸಾವಿಗೆ ಕಾರಣ ಹೇಳಿದ ನಿರ್ಮಾಪಕ ಕಪಾಲಿ ಮೋಹನ್ | Kapila mohan Ended his life | oneindia kannada

    ಅಮೆರಿಕದ ಬಫಲೊ ನಗರದಲ್ಲಿ ವೆಂಡೆ ಕರೆಕ್ಷನಲ್ ಫೆಸಿಲಿಟಿ ಕಾರಾಗೃಹದಲ್ಲಿ ಪ್ರತ್ಯೇಕ ವಾರ್ಡ್‌ನಲ್ಲಿ 68 ವರ್ಷದ ವೀನ್‌ಸ್ಟೀನ್ ಅವರನ್ನು ಇರಿಸಲಾಗಿದೆ. ಅವರ ಆರೋಗ್ಯ ತಪಾಸಣೆ ಮಾಡಿದಾಗ ಮಾರ್ಚ್ 22ರಂದು ಅವರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಕಾರಾಗೃಹದ ಕೆಲವು ಸಿಬ್ಬಂದಿಯನ್ನು ಸಹ ಪ್ರತ್ಯೇಕವಾಗಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು

    ಇಬ್ಬರು ಕೈದಿಗಳಿಗೆ ಕೊರೊನಾ

    ಇಬ್ಬರು ಕೈದಿಗಳಿಗೆ ಕೊರೊನಾ

    ಆದರೆ ವೀನ್‌ಸ್ಟೀನ್ ಅವರಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿರುವುದರ ಬಗ್ಗೆ ಅವರ ಕಾನೂನು ತಂಡಕ್ಕೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಅವರ ಪರ ವಕೀಲರು ಹೇಳಿದ್ದಾರೆ.


    ವೆಂಡೆ ಫೆಸಿಲಿಟಿಯಲ್ಲಿರುವ ಇಬ್ಬರು ಕೈದಿಗಳಲ್ಲಿ ಕೋವಿಡ್-19 ಇರುವುದು ಖಚಿತವಾಗಿದೆ ಎಂದು ಕಾರಾಗೃಹ ಅಧಿಕಾರಿಗಳು ತಿಳಿಸಿದ್ದಾರೆ.

     ಬೀದಿಗಿಳಿದ ಜನರು: 'ಯಥಾ ರಾಜ ತಥಾ ಪ್ರಜಾ' ಎಂದು ಟೀಕಿಸಿದ ಪ್ರಕಾಶ್ ರೈ ಬೀದಿಗಿಳಿದ ಜನರು: 'ಯಥಾ ರಾಜ ತಥಾ ಪ್ರಜಾ' ಎಂದು ಟೀಕಿಸಿದ ಪ್ರಕಾಶ್ ರೈ

    23 ವರ್ಷ ಶಿಕ್ಷೆ

    23 ವರ್ಷ ಶಿಕ್ಷೆ

    ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ನ್ಯಾಯಾಲಯವೊಂದು 67 ವರ್ಷದ ವೀನ್‌ಸ್ಟೀನ್ ಅವರಿಗೆ 23 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಮಹಿಳೆಯರ ಮೇಲೆ ಅನೇಕ ಬಾರಿ ದೌರ್ಜನ್ಯ ಎಸೆದ ಆರೋಪ ವೀನ್‌ಸ್ಟೀನ್ ಮೇಲಿದೆ.

    ಮೇ ತಿಂಗಳಲ್ಲಿ ಬಂಧನ

    ಮೇ ತಿಂಗಳಲ್ಲಿ ಬಂಧನ

    2013ರಲ್ಲಿ ನ್ಯೂಯಾರ್ಕ್ ಸಿಟಿ ಹೋಟೆಲ್‌ನಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಮತ್ತು 2006ರಲ್ಲಿ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಮತ್ತೊಬ್ಬ ಮಹಿಳೆಯೊಂದಿಗೆ ಬಲವಂತವಾಗಿ ಮೌಖಿಕ ಲೈಂಗಿಕ ಕ್ರಿಯೆ ನಡೆಸಿದ ಆರೋಪವಿದೆ. ಈ ಪ್ರಕರಣಗಳು 'ಮೀ ಟೂ' ಆಂದೋಲನ ಆರಂಭವಾದಾಗ ಬೆಳಕಿಗೆ ಬಂದಿದ್ದವು. 2018ರ ಮೇ ತಿಂಗಳಲ್ಲಿ ಅವರನ್ನು ಬಂಧಿಸಲಾಗಿತ್ತು.

    ನಟಿಯರಿಂದ ಆರೋಪ

    ನಟಿಯರಿಂದ ಆರೋಪ

    ಹಾಲಿವುಡ್‌ನ ಖ್ಯಾತ ನಟಿ ಆಂಜೆಲಿನಾ ಜೋಲಿ, ಸಲ್ಮಾ ಹಯೆಕ್ ಸೇರಿದಂತೆ ಸುಮಾರು 90 ಮಹಿಳೆಯರು ವೀನ್‌ಸ್ಟೀನ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. 'ಶೇಕ್‌ಸ್ಪಿಯರ್ ಇನ್ ಲವ್' ಎಂಬ ಆಸ್ಕರ್ ವಿಜೇತ ಸಿನಿಮಾ ನಿರ್ಮಿಸಿದ್ದ ವೀನ್‌ಸ್ಟೀನ್, ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 'ಮೀ ಟೂ' ಅಭಿಯಾನದ ವೇಳೆ ಅವರ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿದ್ದವು.

    English summary
    Oscar winning Hollywood producer Harvey Weinstein who is facing 23 years jail for sexual assault and rape has tested coronavirus positive.
    Saturday, May 30, 2020, 14:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X