ಸ್ಪೈಡರ್‌ಮ್ಯಾನ್ ಜೋಡಿ ಮದುವೆ? ಸದ್ದಿಲ್ಲದೇ ನಡೀತಾ ಎಂಗೇಜ್‌ಮೆಂಟ್?
ಹಾಲಿವುಡ್ ಮಂದಿ ಡೇಟಿಂಗ್ ನಡೆಸೋದು, ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿ ಇರೋದು ಗೊತ್ತೇ ಆಗಲ್ಲ. ಯಾವಾಗ ಯಾರಿಗೆ ಎಂಗೇಜ್‌ಮೆಂಟ್, ಮದುವೆ, ಡಿವೋರ್ಸ್ ಆಗಿಬಿಡುತ್ತದೆ ಎನ್ನುವುದೇ ಅಚ್ಚರಿ ಮೂಡಿಸುತ್ತದೆ. ಸದ್ಯ ಸ್ಪೈಡರ್‌ಮ್ಯಾನ್ ಸಿನಿಮಾ ನಟ ಟಾಮ್ ಹಾಲೆಂಡ್ ಸಹ ನಟಿ ಝೆಂಡಯಾ ಜೊತೆ ಮದುವೆ ಆಗುತ್ತಿದ್ದಾರೆ ಎಂದು ವರದಿಯಾಗಿದೆ. ಸದ್ದಿಲ್ಲದೇ ಎಂಗೇಜ್‌ಮೆಂಟ್ ಕೂಡ ನಡೆದಿದೆ ಎನ್ನಲಾಗ್ತಿದೆ.
ಝೆಂಡಯಾ 2025 ರ ಗೋಲ್ಡನ್ ಗ್ಲೋಬ್ಸ್ ಅವಾರ್ಡ್ಸ್ ವೇದಿಕೆಗೆ ವಜ್ರದ ಉಂಗುರ ಧರಿಸಿ ಬಂದಿದ್ದರು. ಆ ವಜ್ರದ ಉಂಗುರದ ಬಗ್ಗೆ ಕೇಳಿದಾಗಲೂ ನುಣುಚಿಕೊಂಡಿದ್ದರು. ಅದನ್ನು ನೋಡಿದಾಗಲೇ ಎಂಗೇಜ್‌ಮೆಂಟ್ ಬಗ್ಗೆ ಸುಳಿವು ಸಿಕ್ಕಿತ್ತು. ಮೋಸ್ಟ್ ಡಿಸೈರಬಲ್ ಕಪಲ್ಸ್ ಎಂದೇ ಜನಪ್ರಿಯರಾಗಿರುವ ಜೋಡಿ ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.

ಅಂದಹಾಗೆ ಟಾಮ್ ಹಾಲೆಂಡ್ ಹಾಗೂ ಝೆಂಡಯಾ ಜೋಡಿ 2021 ರಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗ್ತಿದೆ. ಆಗಾಗ್ಗೆ ಒಟ್ಟೊಟ್ಟಿಗೆ ಡೇಟ್ ಹೋಗುವುದು ಪಾರ್ಟಿಗಳಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ತಮ್ಮ ಪ್ರೀತಿ ಪ್ರೇಮದ ಬಗ್ಗೆ ಇಬ್ಬರೂ ಎಂದೂ ಮಾತನಾಡಿರಲಿಲ್ಲ. 'ಸ್ಪೈಡರ್‌ಮ್ಯಾನ್; ನೋ ವೇ ಟು ಹೋಮ್', 'ಸ್ಪೈಡರ್‌ಮ್ಯಾನ್; ಹೋಮ್ ಕಮ್ಮಿಂಗ್', 'ಸ್ಪೈಡರ್‌ಮ್ಯಾನ್; ಫಾರ್ ಫ್ರಂ ಹೋಮ್' ಸಿನಿಮಾಗಳಲ್ಲಿ ಟಾಮ್ ಹಾಗೂ ಝೆಂಡಯಾ ಒಟ್ಟಿಗೆ ನಟಿಸಿದ್ದಾರೆ.
ಗೋಲ್ಡನ್ ಗ್ಲೋಬ್ಸ್ ವೇದಿಕೆ ಕೇಸರಿ ಬಣ್ಣದ ಗೌನ್ ಧರಿಸಿ ಝೆಂಡಯಾ ಆಗಮಿಸಿದ್ದರು. ಅದಕ್ಕೆ ಸಂಬಂಧಿಸಿದ ವೀಡಿಯೋ, ಫೋಟೊಗಳು ವೈರಲ್ ಆಗುತ್ತಿದೆ. ಕುತ್ತಿಗೆಯಲ್ಲಿ ಡೈಮಂಟ್ ನೆಕ್ಲೆಸ್ ಹಾಗೂ ಕೈ ಬೆರಳಿನಲ್ಲಿದ್ದ ರಿಂಗ್ ಎಲ್ಲರ ಗಮನ ಸೆಳೆದಿತ್ತು. ವರದಿಗಳ ಪ್ರಕಾರ ಇಬ್ಬರ ಎಂಗೇಜ್‌ಮೆಂಟ್ ಬಹಳ ಸರಳವಾಗಿ ನಡೆದಿದೆಯಂತೆ. ಆಪ್ತರ ಸಮ್ಮುಖದಲ್ಲಿ ಉಂಗುರು ಬದಲಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.
ಝೆಂಡಯಾ ಮುಂದೆ ಮೊಣಕಾಲೂರಿ ಟಾಮ್ ಹಾಲೆಂಡ್ ಪ್ರಪೋಸ್ ಮಾಡಿದ್ದಾರೆ. ಆಕೆಯ ಮನೆಯೊಂದರಲ್ಲಿ ಇಬ್ಬರೇ ಈ ವೇಳೆ ಒಟ್ಟಿಗೆ ಇದ್ದರು ಎನ್ನಲಾಗ್ತಿದೆ. ಕುಟುಂಬ ಸದಸ್ಯರು ಕೂಡ ಇರಲಿಲ್ಲ, ಬಹಳ ರೊಮ್ಯಾಂಟಿಕ್ ಸನ್ನಿವೇಶ ಅದಾಗಿತ್ತು ಎಂದು ಹೇಳಲಾಗ್ತಿದೆ. ಕ್ರಿಸ್‌ಮಸ್- ಹೊಸ ವರ್ಷದ ನಡುವೆ ಇಬ್ಬರ ಎಂಗೇಜ್‌ಮೆಂಟ್ ನಡೆದಿದೆ ಎನ್ನುವ ಮಾತುಗಳು ಕೇಳಿಬರ್ತಿದೆ.
ಸದ್ಯಕ್ಕೆ ಮದುವೆ ಆಗುವ ಆಲೋಚನೆ ಇಲ್ಲ, ಇನ್ನಷ್ಟು ದಿನ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀವೆಗೆ ಸಂದರ್ಶನಗಳಲ್ಲಿ ಟಾಮ್ ಹಾಗೂ ಝೆಂಡಯಾ ಒಬ್ಬರ ಹೆಸರನ್ನು ಮತ್ತೊಬ್ಬರು ತೆಗೆದುಕೊಂಡು ಮಾತನಾಡುತ್ತಿದ್ದಾರೆ. ಇದನ್ನು ನೋಡಿದಾಗಲೇ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎಂದು ಗುಲ್ಲಾಗಿತ್ತು.
'ದಿ ಇಂಪಾಸಿಬಲ್' ಚಿತ್ರದ ಮೂಲಕ ಟಾಮ್ ಹಾಲಿವುಡ್ ಪ್ರವೇಶಿಸಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದರು. ಮಾರ್ವೆಲ್ ಕಾಮಿಕ್ಸ್ ಸೂಪರ್ ಹೀರೊ ಸರಣಿ ಸಿನಿಮಾಗಳಲ್ಲಿ ಸ್ಪೈಡರ್‌ಮ್ಯಾನ್ ಆಗಿ ಬಣ್ಣ ಹಚ್ಚಲು ಆರಂಭಿಸಿದರು. 'ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್' ಚಿತ್ರದಲ್ಲಿ ಪೀಟರ್ ಪಾರ್ಕರ್ ಆಗಿ ನಟಿಸಲು ಆರಂಭಿಸಿದರು. 'ಅವೆಂಜರ್ಸ್: ಇನ್ಫಿನಿಟಿ ವಾರ್' ಹಾಗೂ 'ಅವೆಂಜರ್ಸ: ಎಂಡ್‌ಗೇಮ್' ಚಿತ್ರಗಳಲ್ಲಿ ಅದೇ ಪಾತ್ರದಲ್ಲಿ ನಟಿಸಿ ಮೋಡಿ ಮಾಡಿದರು. ಮುಂದೆ ಹಾಲಿವುಡ್‌ನ ಭರವಸೆಯ ನಟನಾಗಿ ಗಮನ ಸೆಳೆದರು.
ಇನ್ನು ಝೆಂಡಯಾ ನಟಿಸಿದ ಮೊದಲ ಸಿನಿಮಾ. 'ಸ್ಪೈಡರ್‌ಮ್ಯಾನ್ ಹೋಮ್ ಕಮ್ಮಿಂಗ್'. ಅಲ್ಲಿಂದ ಮುಂದೆ ಮತ್ತಷ್ಟು ಅವಕಾಶಗಳು ಸಿಕ್ಕಿತ್ತು. ಆದರೂ ಪೀಟರ್ ಪಾರ್ಕರ್ ಗರ್ಲ್‌ಫ್ರೆಂಡ್ ಪಾತ್ರವೇ ಹೆಚ್ಚು ಜನಪ್ರಿಯತೆ ತಂದು ಕೊಟ್ಟಿದೆ.


Click it and Unblock the Notifications











