»   »  ಫಸ್ಟ್ ಲುಕ್ ಜೊತೆಗೆ ಕಿಚ್ಚನ ಹಾಲಿವುಡ್ ಚಿತ್ರದ ಸೌಂಡ್ ಟ್ಯ್ರಾಕ್ ರಿಲೀಸ್

ಫಸ್ಟ್ ಲುಕ್ ಜೊತೆಗೆ ಕಿಚ್ಚನ ಹಾಲಿವುಡ್ ಚಿತ್ರದ ಸೌಂಡ್ ಟ್ಯ್ರಾಕ್ ರಿಲೀಸ್

Posted By: Pavithra
Subscribe to Filmibeat Kannada

ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ... ಈಗಾಗಲೇ ಆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಅದೇ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ಮತ್ತು ಸೌಂಡ್ ಟ್ರಾಕ್ ರಿಲೀಸ್ ಆಗಿದೆ.

ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಸುದೀಪ್ ಅಭಿನಯದ 'ರೈಸನ್' ಚಿತ್ರದ ಫೋಟೋ ಶೂಟ್ ಮಾಡಲಾಗಿತ್ತು. ಆದ್ರೆ, ಎಲ್ಲವನ್ನೂ ಸೀಕ್ರೆಟ್ ಆಗಿಯೇ ಇಟ್ಟುಕೊಂಡಿದ್ದ ಸಿನಿಮಾ ತಂಡ ಇಂದು ತಮ್ಮ ಫೇಸ್ ಬುಕ್ ನಲ್ಲಿ ಫಸ್ಟ್ ಪೋಸ್ಟರ್ ಹಾಗೂ ಪ್ರಿವ್ಯೂ ಸೌಂಡ್ ಟ್ರ್ಯಾಕ್ ನ ಬಿಡುಗಡೆ ಮಾಡಿದ್ದಾರೆ. ಮುಂದೆ ಓದಿರಿ....

ಹಾಲಿವುಡ್ ಚಿತ್ರದ ಪೋಸ್ಟರ್ ನಲ್ಲಿ ಕಿಚ್ಚನ ಖದರ್

'ರೈಸನ್' ಸಿನಿಮಾದ ಪೋಸ್ಟರ್ ಸಖತ್ ಅಟ್ರ್ಯಾಕ್ಟಿವ್ ಆಗಿದೆ. ಫಸ್ಟ್ ಲುಕ್ ನಲ್ಲಿ ಅಭಿಮಾನಿಗಳನ್ನ ಇಂಪ್ರೆಸ್ ಮಾಡುವಂತೆ ಕಿಚ್ಚ ಕ್ಯಾಮೆರಾಗೆ ಲುಕ್ ಕೊಟ್ಟಿದ್ದಾರೆ.

ಶತ್ರುಗಳನ್ನ ಸದೆಬಡಿಯಲು ಸಿದ್ಧ

'ಹೆಬ್ಬುಲಿ' ಸಿನಿಮಾದ ನಂತರ ಕಿಚ್ಚ ಮತ್ತೆ ಕಮಾಂಡೋ ಪಾತ್ರ ನಿರ್ವಹಿಸುತ್ತಿದ್ದಾರೆ. ಪೋಸ್ಟರ್ ನಲ್ಲಿ ಅಮೇರಿಕಾ ಫ್ಲಾಗ್ ಇರುವ ಕಮಾಂಡೋ ಡ್ರೆಸ್ ನಲ್ಲಿ ಸುದೀಪ್ ಕಾಣಿಸಿಕೊಂಡಿದ್ದಾರೆ.

ಮ್ಯೂಸಿಕ್ ಕೇಳಿದವ್ರು ಫುಲ್ ಫಿದಾ

ಫಸ್ಟ್ ಲುಕ್ ಜೊತೆಯಲ್ಲಿ ನಿರ್ದೇಶಕ ಎಡ್ಡಿ ಆರ್ಯ ಸಿನಿಮಾದ ಪ್ರಿವ್ಯೂ ಸೌಂಡ್ ಟ್ರ್ಯಾಕ್ ನೂ ರಿಲೀಸ್ ಮಾಡಿದ್ದಾರೆ. ಒಂದು ನಿಮಿಷ 17 ಸೆಕೆಂಡ್ ಇರುವ ಮ್ಯೂಸಿಕ್ ಟ್ರ್ಯಾಕ್ ಎಂಥವ್ರನ್ನೂ ಮೋಡಿ ಮಾಡುತ್ತೆ.

ಸಿನಿಮಾ ಯಾವಾಗ, ಚಿತ್ರೀಕರಣ ಎಲ್ಲಿ ?

'ರೈಸನ್' ಸಿನಿಮಾವನ್ನ ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡಲು ಸಿದ್ದತೆ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಅಭಿನಯ ಚಕ್ರವರ್ತಿ ಶೂಟಿಂಗ್ ನಲ್ಲಿ ಭಾಗಿಯಾಗಲಿದ್ದಾರೆ. ಸಿನಿಮಾವನ್ನ ನಾಗೇಂದ್ರ ಜಯರಾಮ್ ನಿರ್ಮಾಣ ಮಾಡ್ತಿದ್ದಾರೆ.

ಕೃಷ್ಣ ಕಾರ್ತಿಕ್ ಕ್ಯಾಮೆರಾದಲ್ಲಿ ಸೆರೆಯಾಯ್ತು ಫಸ್ಟ್ ಲುಕ್

ಸುದೀಪ್ ಹಾಲಿವುಡ್ ಸಿನಿಮಾದ ಫೋಟೋ ಶೂಟ್ ಮಾಡಿದ್ದು ಬೆಂಗಳೂರಿನ ಕೃಷ್ಣ ಕಾರ್ತಿಕ್ ಅನ್ನೋ ಫೋಟೋಗ್ರಾಫರ್, ಹ್ಯಾರಿ ಮಾಸ್ಟರ್ ಫ್ರೇಮ್ ಸ್ಟುಡಿಯೋದಲ್ಲಿ ಫೋಟೋ ಶೂಟ್ ಮಾಡಿದ್ದು ಚಿತ್ರದ ಪೋಸ್ಟರ್ ನಲ್ಲಿ ಅಭಿನಯ ಚಕ್ರವರ್ತಿ ಬೇರೆಯದ್ದೇ ಲುಕ್ ನಲ್ಲಿ ಕಾಣಿಸ್ತಾರೆ.

English summary
Kiccha Sudeep's first look in Hollywood Film 'Risen' revealed.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X