RRR HCA Awards: 4 ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್; ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ 'RRR' ಸೆನ್ಸೇಷನ್

ರಾಜಮೌಳಿ ನಿರ್ದೇಶನದ 'RRR' ಸಿನಿಮಾ ಮತ್ತೊಮ್ಮೆ ಸುದ್ದಿಯಲ್ಲಿದೆ. ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಆಸ್ಕರ್‌ ಪ್ರಶಸ್ತಿಗೆ ಪೈಪೋಟಿ ನಡೆಸುತ್ತಿರುವ ಸಿನಿಮಾ, ಅಂತರಾಷ್ಟ್ರೀಯಮಟ್ಟದಲ್ಲಿ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿ ವೇದಿಕೆಯಲ್ಲಿ ಸದ್ದಯ ಮಾಡಿದೆ. 4 ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ಮುಡಿಗೇರಿಸಿಕೊಂಡು ಸಂಚಲನ ಸೃಷ್ಟಿಸಿದೆ.

ಬಾಕ್ಸಾಫೀಸ್‌ನಲ್ಲಿ 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ 'RRR' ಸಿನಿಮಾ ಹಾಲಿವುಡ್ ಪ್ರೇಕ್ಷಕರಿಂದಲೂ ಭೇಷ್ ಎನಿಸಿಕೊಂಡಿತ್ತು. ಜೇಮ್ಸ್ ಕ್ಯಾಮರೂನ್ ಸೇರಿದಂತೆ ಹಾಲಿವುಡ್ ಫಿಲ್ಮ್ ಮೇಕರ್ಸ್ ಕೂಡ ಸಿನಿಮಾ ನೋಡಿ ಹುಬ್ಬೇರಿಸಿದ್ದರು. ರಾಮ್‌- ಭೀಮ್ ಬ್ರೊಮ್ಯಾನ್ಸ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಚಿತ್ರದ 'ನಾಟು ನಾಟು' ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿತ್ತು. ಇದೀಗ ಹಾಲಿವುಡ್‌ನ HCA ಅವಾರ್ಡ್ಸ್‌ಗಳು ಮೌಳಿ ದೃಶ್ಯ ಕಾವ್ಯಕ್ಕೆ ಸಿಕ್ಕಿದೆ.

RRR Movie got the prestigious Hollywood Critics Association (HCA) Awards in 4 categories

ಅತ್ಯುತ್ತಮ ಆಕ್ಷನ್ ಸಿನಿಮಾ, ಅತ್ಯುತ್ತಮ ಒರಿಜಿನಲ್ ಸಾಂಗ್(ನಾಟು ನಾಟು), ಅತ್ಯುತ್ತಮ ವಿದೇಶಿ ಸಿನಿಮಾ ಹಾಗೂ ಅತ್ಯುತ್ತಮ ಸ್ಟಂಟ್ಸ್ ವಿಭಾಗಗಳಲ್ಲಿ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ 'RRR' ಚಿತ್ರಕ್ಕೆ ಸಿಕ್ಕಿದೆ. ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಅಲ್ಲೂರಿ ಸೀತಾರಾಮ ರಾಜು ಹಾಗು ಕೋಮುರಂ ಭೀಮ್‌ ಅವರನ್ನು ಆಧಾರವಾಗಿಟ್ಟುಕೊಂಡು ಕಾಲ್ಪನಿಕ ಕಥೆಯನ್ನು ಹೇಳಿ ಮೌಳಿ ಗೆದ್ದಿದ್ದರು. ರಾಮರಾಜು ಆಗಿ ರಾಮ್‌ಚರಣ್, ಕೋಮುರಂ ಭೀಮ್ ಆಗಿ ಜ್ಯೂ. ಎನ್‌ಟಿಆರ್ ಅಬ್ಬರಿಸಿದ್ದರು.

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ 'RRR' ಚಿತ್ರವನ್ನು ನಂತರ ಜೀ5, ನೆಟ್‌ಫ್ಲಿಕ್ಸ್, ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಸ್ಟ್ರೀಮಿಂಗ್ ಮಾಡಲಾಗಿತ್ತು. ಹಾಗಾಗಿ ಇದು ಹಾಲಿವುಡ್ ಪ್ರೇಕ್ಷಕರನ್ನು ದೊಡ್ಡಮಟ್ಟದಲ್ಲಿ ತಲುಪಿತ್ತು. ನೋಡ ನೋಡುತ್ತಲೇ ಹಾಲಿವುಡ್ ಮಂದಿ ಸಿನಿಮಾ ನೋಡಿ ಫಿದಾ ಆಗಿದ್ದರು. ನಂತರ ವಿದೇಶಗಳಲ್ಲಿ ಸಾಕಷ್ಟು ಸ್ಪೆಷಲ್ ಶೋಗಳನ್ನು ಏರ್ಪಡಿಸಲಾಗಿತ್ತು. ಎಲ್ಲಾ ಕಡೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇತ್ತೀಚೆಹೆ 'ಅವತಾರ್' ಸಿನಿಮಾ ಖ್ಯಾತಿಯ ಜೇಮ್ಸ್‌ ಕ್ಯಾಮರೂನ್ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು.

RRR Movie got the prestigious Hollywood Critics Association (HCA) Awards in 4 categories

ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ ಈ ಬಾರಿ ಆಸ್ಕರ್ ಪ್ರಶಸ್ತಿಗೆ 'RRR' ಚಿತ್ರದ 'ನಾಟು ನಾಟು' ಹಾಡು ನಾಮಿನೇಟ್ ಆಗಿದೆ. ಮಾರ್ಚ್ 12ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಈಗಾಗಲೇ ರಾಮ್‌ಚರಣ್, ರಾಜಮೌಳಿ ಅಮೆರಿಕಾ ಸೇರಿಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ನಡೆದ ಹಾಲಿವುಡ್ ಕ್ರಿಟಿಕ್ಸ್ ಅವಾರ್ಡ್ಸ್ ವೇದಿಕೆಯಲ್ಲಿ ಅತ್ಯುತ್ತಮ ಆಕ್ಷನ್ ಸಿನಿಮಾ ಪ್ರಶಸ್ತಿ ಸ್ವೀಕರಿಸಿ ರಾಜಮೌಳಿ ಮಾತನಾಡಿದ್ದಾರೆ. 320 ದಿನಗಳ ಕಾಲ ಶ್ರಮಪಟ್ಟು ಕೆಲಸ ಮಾಡಿದ ತಂಡಕ್ಕೆ ಧನ್ಯವಾದ ತಿಳಿಸಿದ್ದಾರೆ.

"ನಮ್ಮ ಚಿತ್ರದ ಸಾಹಸ ಸಂಯೋಜಕರಿಗೆ ನಾನು ಮೊದಲಿಗೆ ಧನ್ಯವಾದ ತಿಳಿಸುತ್ತೇನೆ. ಸಾಲ್ಮನ್ ಚಿತ್ರದ ಸ್ಟಂಟ್ ಕಂಪೋಸ್ ಮಾಡಲು ಬಹಳ ಶ್ರಮ ಹಾಕಿದ್ದಾರೆ. ಝೂಜಿ ಕ್ಲೈಮ್ಯಾಕ್ಸ್‌ನ ಕೆಲ ಸನ್ನಿವೇಶಗಳಿಗೆ ಸಹಾಯ ಮಾಡಿದರು. ನಿಕ್ ಪೊವೆಲ್ ಸೇರಿದಂತೆ ಹಲವು ಕೆಲಸ ಮಾಡಿದರು. ಕೆಲವರು ಭಾರತಕ್ಕೆ ಬಂದು ನಮ್ಮ ವಿಷನ್ ಅರ್ಥ ಮಾಡಿಕೊಂಡು, ಅವರ ವರ್ಕ್ ಸ್ಟೈಲ್ ಬದಲಿಸಿಕೊಂಡು ಕೆಲಸ ಮಾಡಿದರು. ಅದರ ಪ್ರತಿಫಲ ಇಂದು ನೋಡುತ್ತಿದ್ದೇವೆ"

RRR Movie got the prestigious Hollywood Critics Association (HCA) Awards in 4 categories

"ಖಂಡಿತ ನನ್ನ ಇಬ್ಬರು ನಟರು. ಎನ್‌ಟಿಆರ್ ಹಾಗೂ ರಾಮ್‌ಚರಣ್. ಒಂದೆರಡು ಸ್ಟಂಟ್ಸ್‌ಗೆ ಡ್ಯೂಪ್ ಬಳಸಿದ್ದು ಬಿಟ್ಟರೆ ಇಡೀ ಸಿನಿಮಾ ಅವರಿಬ್ಬರೇ ಸಾಹಸ ಸನ್ನಿವೇಶಗಳಲ್ಲಿ ಕಾಣಿಸಿಕೊಂಡರು. ಇದು ಇಡೀ ತಂಡದ ಶ್ರಮ. 320 ದಿನ ಶ್ರಮ ಹಾಕಿ ಈ ಸಿನಿಮಾ ಮಾಡಿದೆವು. ಅದರಲ್ಲಿ ಬಹುತೇಕ ದಿನಗಳು ಸ್ಟಂಟ್ಸ್ ಶೂಟ್ ಮಾಡಿದ್ದೇವೆ. ಈ ಪ್ರಶಸ್ತಿ ಬರೀ ನನಗೆ ನನಗೆ ಸಿನಿಮಾಗೆ ಮಾತ್ರವಲ್ಲ. ಇಡೀ ಭಾರತಕ್ಕೆ ಸಂದ ಗೌರವ. ಧನ್ಯವಾದಗಳು. ಮೇರಾ ಭಾರತ್ ಮಹಾನ್, ಜೈಹಿಂದ್" ಎಂದಿದ್ದಾರೆ.

More from Filmibeat

English summary
RRR Movie got the prestigious Hollywood Critics Association (HCA) Awards in 4 categories. Movie won awards in the Best International Film, Best Action Film, Best Stunts and Best Original Song (Naatu Naatu) categories. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X