ಇನ್‌ಸ್ಟಾಗ್ರಾಂ ಬ್ಯಾನ್ ಮಾಡಿದ ರಷ್ಯಾ: ಸಂಸ್ಥೆ ವಿರುದ್ಧ ತನಿಖೆ

ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ ತನ್ನ ದೇಶದಲ್ಲಿ ಇನ್‌ಸ್ಟಾಗ್ರಾಂ ಅನ್ನು ಸೋಮವಾರದಿಂದ ಬ್ಯಾನ್ ಮಾಡುತ್ತಿದೆ. ಇನ್‌ಸ್ಟಾಗ್ರಾಂ ರಷ್ಯಾದ ಜನರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುತ್ತಿದೆ ಎಂಬ ಆರೋಪವನ್ನು ರಷ್ಯಾ ಹೊರಿಸಿದೆ.

''ಉಕ್ರೇನ್‌ ಮೇಲೆ ದಾಳಿ ಮಾಡಿರುವ ರಷ್ಯಾದ ಜನರನ್ನು ಕೊಲ್ಲಿ'' (ಡೆತ್‌ ಟು ದಿ ರಷ್ಯನ್ ಇನ್‌ವೇಡರ್ಸ್) ಎಂಬ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂ ಪ್ರೊಮೋಟ್ ಮಾಡುತ್ತಿದೆ. ರಷ್ಯಾದ ಸೈನ್ಯದ ವಿರುದ್ಧ ಹಿಂಸೆಗೆ ಪ್ರೊಚೋದನೆ ನೀಡುವ ಪೋಸ್ಟ್‌ಗಳನ್ನು ಇನ್‌ಸ್ಟಾಗ್ರಾಂ ಪ್ರಚಾರ ಮಾಡುತ್ತಿದೆ'' ಎಂದು ರಷ್ಯಾದ ತನಿಖಾ ಸಂಸ್ಥೆ ಹೇಳಿದೆ. ಹಾಗಾಗಿ ಇನ್‌ಸ್ಟಾಗ್ರಾಂನ ಮೂಲ ಸಂಸ್ಥೆಯಾದ 'ಮೆಟಾ' ವಿರುದ್ಧ ದೂರು ಸಹ ದಾಖಲಿಸಿಕೊಂಡಿರುವ ರಷ್ಯಾದ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ.

ರಷ್ಯಾದಲ್ಲಿ ವಿಶೇಷವಾಗಿ ಮಾಸ್ಕೊನಲ್ಲಿ 'ಮೆಟಾ' ಒಡೆತನದ ಫೇಸ್‌ಬುಕ್ ಈಗಾಗಲೇ ಬ್ಯಾನ್ ಆಗಿದೆ. ಟ್ವಿಟ್ಟರ್‌ ಮೇಲೂ ಹಲವು ನಿರ್ಬಂಧಗಳು ಇವೆ ಆದರೆ ಇನ್‌ಸ್ಟಾಗ್ರಾಂ ಅನ್ನು ರಷ್ಯಾದ ಶೇ 80 ರಷ್ಟು ಮಂದಿ ಬಳಸುತ್ತಾರೆ. ಈಗ ಇನ್‌ಸ್ಟಾಗ್ರಾಂ ಸಹ ಬ್ಯಾನ್ ಆಗುತ್ತಿರುವ ಕಾರಣ ರಷ್ಯಾದ ಜನ ಹೊರಜಗತ್ತಿನೊಂದಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕವನ್ನು ಕಡಿದುಕೊಳ್ಳಲಿದ್ದಾರೆ.

Russia To Ban Instagram For Promoting Violent Posts Against Russian People

ಮೆಟಾ ಸಂಸ್ಥೆಯ ಫೇಸ್‌ಬುಕ್‌, ವಾಟ್ಸ್‌ಆಪ್‌, ಇನ್‌ಸ್ಟಾಗ್ರಾಂ ರಷ್ಯಾದಲ್ಲಿ ಜನಪ್ರಿಯವಾಗಿವೆ. ಆದರೆ ಫೇಸ್‌ಬುಕ್‌ ಈಗಾಗಲೇ ಬ್ಯಾನ್ ಆಗಿದ್ದು ಇದೀಗ ಇನ್‌ಸ್ಟಾ ಸಹ ಬ್ಯಾನ್ ಆಗಲಿದೆ. ಆದರೆ ಮೆಟಾ ಅವರ ಒಡೆತನದ ವಾಟ್ಸ್‌ಆಪ್‌ ಮೇಲೆ ಯಾವುದೇ ನಿರ್ಬಂಧ ಹೇರಲಾಗಿಲ್ಲ.

ಯಾವುದೇ ದೇಶದಲ್ಲಿ ಆಂತರಿಕ ಬಿಕ್ಕಟ್ಟು ರಾಜಕೀಯ ಬಿಕ್ಕಟ್ಟುಗಳು ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಹಿಂಸಾತ್ಮಕ ಪೋಸ್ಟ್‌ಗಳು ಹರಿದಾಡುವುದು ಅತ್ಯಂತ ಸಹಜ ಎಂಬಂತಾಗಿದೆ. ಇದೇ ಕಾರಣಕ್ಕೆ ಈ ಹಿಂದೆ ಹಲವು ದೇಶಗಳು ಮೆಟಾ ಸಂಸ್ಥೆಯನ್ನು ಎಚ್ಚರಿಸಿವೆ. ವಿಶ್ವಸಂಸ್ಥೆಯಲ್ಲಿಯೂ ಈ ಬಗ್ಗೆ ಚರ್ಚೆಯಾಗಿದೆ. ಆದರೆ ಬಳಕೆದಾರರ ಹಿಂಸೆಗೆ ಪ್ರೇರಣೆ ನೀಡುವ ಪೋಸ್ಟ್‌ಗಳ ಮೇಲೆ ನಿರ್ಬಂಧ ಹೇರಲು ಮೆಟಾ ಸಂಸ್ಥೆ ವಿಫಲವಾಗಿದೆ.

ಮತ್ತೊಂದೆಡೆ ಗೂಗಲ್ ಒಡೆತನದ ಯೂಟ್ಯೂಬ್, ರಷ್ಯಾದ ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ ಸ್ಪುಟ್ನಿಟ್, ಆರ್‌ಟಿ ಇನ್ನಿತರೆ ವಾಹನಿಗಳನ್ನು ಬ್ಲಾಕ್ ಮಾಡಿದೆ. ಈ ಚಾನೆಲ್‌ಗಳು ಯೂಟ್ಯೂಬ್‌ನಲ್ಲಿ ಪ್ರಸಾರವಾಗುವುದನ್ನು ಯೂಟ್ಯೂಬ್, ವಿಶ್ವದಾದ್ಯಂತ ತಡೆ ಹಿಡಿದಿದೆ. ಯೂಟ್ಯೂಬ್ ಮಾತ್ರವೇ ಅಲ್ಲದೆ ಗೂಗಲ್‌ನ ಪ್ಲೇ ಸ್ಟೋರ್ ಬಿಲ್ಲಿಂಗ್ ಇತರೆ ಕೆಲವು ಸೇವೆಗಳನ್ನು ಗೂಗಲ್ ರಷ್ಯಾನಲ್ಲಿ ತಡೆ ಹಿಡಿದಿದೆ. ರಷ್ಯಾವು ಉಕ್ರೇನ್‌ ಮೇಲೆ ದಾಳಿ ಮಾಡಿರುವದನ್ನು ಗೂಗಲ್ ಖಂಡಿಸಿದೆ.

ಉಕ್ರೇನ್‌ ದೇಶದ ಮೇಲೆ ರಷ್ಯಾದ ಅತಿಕ್ರಮಣವನ್ನು ಮನರಂಜನಾ ಲೋಕವೂ ಖಂಡಿಸಿದ್ದು, 'ದಿ ಬ್ಯಾಟ್‌ಮ್ಯಾನ್', 'ಟರ್ನಿಂಗ್ ರೆಡ್', 'ಮೋಬಿಯಸ್', 'ದಿ ಲಾಸ್ಟ್ ಸಿಟಿ', 'ಸಾನಿಕ್‌ ದಿ ಹೆಡ್ಜ್‌ ಹಾಗ್ 2', 'ಆಂಬುಲೆನ್ಸ್', 'ದಿ ಬ್ಯಾಡ್ ಗೈಸ್' ಇನ್ನೂ ಹಲವು ಸಿನಿಮಾಗಳು ರಷ್ಯಾದಲ್ಲಿ ಬಿಡುಗಡೆ ಆಗುತ್ತಿಲ್ಲ. ರಷ್ಯಾ ಯುದ್ಧವನ್ನು ನಿಲ್ಲಿಸುವವರೆಗೆ ಸಿನಿಮಾ ಪ್ರದರ್ಶನ ಮಾಡುವುದಿಲ್ಲ ಎಂದು ನಿರ್ಮಾಣ ಸಂಸ್ಥೆಗಳು ಘೋಷಿಸಿವೆ. ಕ್ಯಾನನ್ ಸಿನಿಮೋತ್ಸವವು ರಷ್ಯಾದ ಸಿನಿಮಾಗಳಿಗೆ ನಿರ್ಬಂಧ ಹೇರಿದೆ. ಯುದ್ಧ ನಿಲ್ಲಿಸಿದೇ ಇದ್ದರೆ ರಷ್ಯಾದ ಸಿನಿಮಾಗಳ ಪ್ರದರ್ಶನ ಮಾಡುವುದಿಲ್ಲ ಎಂದು ಕ್ಯಾನನ್ ಸ್ಪಷ್ಟಪಡಿಸಿದೆ. ಆದರೆ ಮತ್ತೊಂದು ಪ್ರತಿಷ್ಟಿತ ಸಿನಿಮೋತ್ಸವ ವೆನ್ನಿಸ್ ಫಿಲಂ ಫೆಸ್ಟಿವಲ್ ರಷ್ಯಾದ ಸಿನಿಮಾ ಅಥವಾ ರಷ್ಯಾ ಸಿನಿಮಾ ಕರ್ಮಿಗಳಿಗೆ ನಿಷೇಧ ಹೇರುತ್ತಿಲ್ಲ.

ಇನ್ನು ಒಟಿಟಿ ನೆಟ್‌ಫ್ಲಿಕ್ಸ್‌ ಸಹ ರಷ್ಯಾವು ಉಕ್ರೇನ್‌ ಮೇಲೆ ಮಾಡುತ್ತಿರುವ ಯುದ್ಧಕ್ಕೆ ಪ್ರತಿಭಟನಾರ್ತವಾಗಿ ರಷ್ಯಾದ ಕಂಟೆಂಟ್ ಅನ್ನು ತನ್ನ ವೀಕ್ಷಕರಿಗೆ ಪ್ರದರ್ಶಿಸುತ್ತಿಲ್ಲ. ಅಲ್ಲದೆ ರಷ್ಯಾದಲ್ಲಿ ನೆಟ್‌ಫ್ಲಿಕ್ಸ್‌ ತನ್ನೆಲ್ಲ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ಹಾಗೂ ರಷ್ಯಾದ ಸ್ಥಳೀಯ ಕಂಟೆಂಟ್ ಅನ್ನು ತೋರಿಸುವುದನ್ನು ಸಹ ಬಂದ್ ಮಾಡಿದೆ. ನೆಟ್‌ಫ್ಲಿಕ್ಸ್‌ ಮಾತ್ರವೇ ಅಲ್ಲದೆ ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಹಾಗೂ ಇತರ ಕೆಲವು ಒಟಿಟಿಗಳು ಸಹ ರಷ್ಯಾ ಮೇಲೆ ನಿರ್ಬಂಧ ಹೇರಿವೆ.

More from Filmibeat

English summary
Russia to ban Instagram for promoting violent posts against Russian people and military. It said they registered criminal case against Instagram's parent company Meta Inc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X