ಯೋಗ ಮಾಡುತ್ತಿದ್ದಾಗಲೇ ಸಮುದ್ರದ ಅಲೆಯಲ್ಲಿ ಕೊಚ್ಚಿ ಹೋದ ನಟಿ!

ಸಾವು ಯಾವಾಗ ಯಾವ ಮಾರ್ಗದಲ್ಲಿ ಬರುತ್ತದೆ ಎಂದು ಹೇಳುವುದು ಕಷ್ಟ. ಒಂದು ಕ್ಷಣದ ಮುಂದೆ ಬದುಕಿದ್ದವರು ಈ ಕ್ಷಣ ಇರುವುದಿಲ್ಲ. ಸಾಯಲು ವಿಮಾನ ದುರಂತವೇ ಆಗಬೇಕೆಂದಿಲ್ಲ, ರಸ್ತೆಯಲ್ಲಿ ನಡೆದು ಹೋಗುವವರು ಕೂಡ ಅಪಘಾತಗಳಲ್ಲಿ ಮೃತಪಟ್ಟ ಉದಾಹರಣೆಗಳಿವೆ. ಸದ್ಯ ನಟಿಯೊಬ್ಬರು ಸಮುದ್ರದ ಅಲೆಗಳಲ್ಲಿ ಕೊಚ್ಚಿ ಹೋಗಿದ್ದಾರೆ.

ರಷ್ಯನ್ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ತನ್ನಿಷ್ಟದ ಜಾಗಕ್ಕೆ ಪ್ರವಾಸಕ್ಕೆ ಹೋಗಿದ್ದರು. ಸಮುದ್ರದ ದಡದಲ್ಲಿ ಬಂಡೆಯ ಮೇಲೆ ಧ್ಯಾನ ಮಾಡುತ್ತಾ ಕುಳಿತ್ತಿದ್ದರು. ನಿಧಾನವಾಗಿ ಸಮುದ್ರದ ಅಲೆಗಳು ಜೋರಾಗಿದೆ. ಒಂದು ದೊಡ್ಡ ಅಲೆ ಆಕೆಯನ್ನು ಸಮುದ್ರದ ಒಳಕ್ಕೆ ಎಳೆದೊಯ್ದಿದೆ. ಕೆಲವೇ ನಿಮಿಷಗಳಲ್ಲಿ ರೆಸ್ಕೂ ತಂಡ ಅಲ್ಲಿಗೆ ಬಂದರೂ ಪ್ರಯೋಜನವಾಗಲಿಲ್ಲ.

Russian Actress Kamilla Belyatskaya tragically drowns in Thailand while performing yoga

ಥೈಲ್ಯಾಂಡ್‌ನ ಕೊಹ್ ಸಮುಯಿ ದ್ವೀಪಕ್ಕೆ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ತನ್ನ ಪ್ರಿಯಕರನ ಜೊತೆ ಹೋಗುತ್ತಿದ್ದರು. ಈ ಬಾರಿ ಅದೇ ರೀತಿ ಹೋದಾಗ ಸಮುದ್ರದ ಪಕ್ಕದ ಬಂಡೆ ಮೇಲೆ ಕಣ್ಮುಚ್ಚಿ ಧ್ಯಾನ ಮಾಡುತ್ತಿದ್ದಾಗ ದೊಡ್ಡ ಅಲೆ ಬಂದಿದ್ದು ಗೊತ್ತಾಗಲಿಲ್ಲ. ಕೆಲ ಹೊತ್ತಿನ ಬಳಿಕ ಆಕೆ ನೀರಿಗೆ ಬಿದ್ದ ಕೆಲ ಕಿಲೋಮೀಟರ್ ದೂರದಲ್ಲಿ ಮೃತದೇಹ ಸಿಕ್ಕಿತ್ತು.

ರಷ್ಯನ್ ಸಿನಿಮಾಗಳಲ್ಲಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ನಟಿಸಿದ್ದಾರೆ. ಇನ್ನು ಆಕೆ ಸಮುದ್ರದ ಬಳಿ ಬಂದಿದ್ದು ಕಾರ್‌ನಿಂದ ಇಳಿದಿದ್ದು ಎಲ್ಲವೂ ಅಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಸೆರೆಯಾಗಿದೆ. ಇನ್ನು ಆಕೆ ಬಂಡೆಯ ಮೇಲೆ ಯೋಗ ಮ್ಯಾಟ್‌ ಮೇಲೆ ಕುಳಿತ್ತಿದ್ದ ವೀಡಿಯೋ ಒಂದು ಕೂಡ ವೈರಲ್ ಆಗುತ್ತಿದೆ. ಇನ್ನು ಆಕೆ ನೀರಿಗೆ ಬಿದ್ದಿದ್ದು ಕೂಡ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಕೊಹ್ ಸಮುಯಿ ದ್ವೀಪಕ್ಕೆ ಹೋಗಲು ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ಬಹಳ ಇಷ್ಟಪಡುತ್ತಿದ್ದರು. ಆ ಜಾಗಕ್ಕೆ ಹೋದ ಬಳಿಕ ಕೂಡ ನಾನು ಇಲ್ಲಿಗೆ ಬಂದಿರುವುದು ಬಹಳ ಖುಷಿಯಾಗುತ್ತಿದೆ. ಇದು ನನ್ನ ಮನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಆಕೆ ನೀರಿಗೆ ಬಿದ್ದ ಬಳಿಕ ಈಜಿ ದಡ ಸೇರಲು ಯತ್ನಿಸಿರುವುದು ಕೂಡ ವೈರಲ್ ಆಗುತ್ತಿದೆ. ಒಟ್ಟಾರೆ ಆಕೆಯ ದಿಢೀರ್ ನಿಧನಕ್ಕೆ ಆಪ್ತರು ಶಾಕ್ ಆಗಿದ್ದಾರೆ.

More from Filmibeat

English summary
Actress Kamilla Belyatskaya swept away by a giant wave while meditating in beach
Read more about: hollywood actress english
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X