twitter
    For Quick Alerts
    ALLOW NOTIFICATIONS  
    For Daily Alerts

    ಕ್ಯಾಮೆರಾ ಹೊತ್ತು ಅಂತರಿಕ್ಷಕ್ಕೆ ಹಾರಿದ ಚಿತ್ರತಂಡ: ಭೂಮಿಯಾಚೆ ಚಿತ್ರೀಕರಣ!

    |

    ಭೂಮಿ ಮೇಲೆ ಲಕ್ಷಾಂತರ ಸುಂದರ ಸ್ಥಳಗಳಿರುವಾಗ ರಷ್ಯಾದ ಚಿತ್ರತಂಡವೊಂದು ಅಂತರಿಕ್ಷದಲ್ಲಿ ಚಿತ್ರೀಕರಣ ಮಾಡಲು ಹೊರಟಿದೆ.

    ವಿಶ್ವ ಸಿನಿಮಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿನಿಮಾ ಒಂದರ ಚಿತ್ರೀಕರಣ ಅಂತರಿಕ್ಷದಲ್ಲಿ ನಡೆಯಲಿದೆ! ಸಿನಿಮಾದ ನಟ-ನಟಿ ಹಾಗೂ ನಿರ್ದೇಶಕ ಈಗಾಗಲೇ ಅಂತರಿಕ್ಷಕ್ಕೆ ಹಾರಿದ್ದು, 15 ದಿನಗಳ ಕಾಲ ಅಲ್ಲಿಯೇ ಚಿತ್ರೀಕರಣ ಮಾಡಿ ಮರಳಲಿದ್ದಾರೆ.

    ರಷ್ಯಾದ 'ದಿ ಚಾಲೆಂಜ್' ಹೆಸರಿನ ಸಿನಿಮಾದ ಚಿತ್ರೀಕರಣ ಅಂತರಿಕ್ಷದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಅಕ್ಟೋಬರ್ 05, ಮಧ್ಯಾಹ್ನ 2:25ಕ್ಕೆ ಚಿತ್ರತಂಡವು ಕಝಕಿಸ್ತಾನದಿಂದ ಅಂತರಿಕ್ಷಕ್ಕೆ ಹಾರಿದೆ. ಸಿನಿಮಾದ ನಿರ್ದೇಶಕ ಕ್ಲಿಮ್ ಶಿಫ್ನೆಕೊ ಹಾಗೂ ನಟಿ ಯುಲಿಯಾ ಪೆರಿಸಿಲ್ಡ್ ಚಿತ್ರೀಕರಣಕ್ಕಾಗಿ ಅಂತರಿಕ್ಷಕ್ಕೆ ಹೋದ ಮೊದಲಿಗರು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    Russian Film Director And Actress Went To Space For Shooting Film For The First Time

    ರಷ್ಯಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ರೋಸ್ಕೋಮೋಸ್, ಚಿತ್ರತಂಡವನ್ನು ಅಂತರಿಕ್ಷಕ್ಕೆ ತಲುಪಿಸುತ್ತಿದ್ದು, ಅಂತರಿಕ್ಷಕ್ಕೆ ಹಾರಿದ ಸುಜೋಯ್ ಏರ್‌ಕ್ರಾಫ್ಟ್‌ನ ನೇತೃತ್ವವನ್ನು ರಷ್ಯಾದ ಖ್ಯಾತ ಬಾಹ್ಯಾಕಾಶ ಯಾನಿ ಅಂಟೋನ್ ಶ್ಕಪ್ಲೆರೋವ್ ವಹಿಸಿದ್ದಾರೆ. ಈಗ ಹೊರಟಿರುವ ಬಾಹ್ಯಾಕಾಶ ನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ 174 ದಿನಗಳ ವರೆಗೆ ಉಳಿಯಲಿದೆ. ಆದರೆ ಚಿತ್ರತಂಡವು 12 ದಿನವಷ್ಟೆ ಅಂತರಿಕ್ಷದಲ್ಲಿದ್ದು ಅಕ್ಟೋಬರ್ 17ರಂದು ಭೂಮಿಗೆ ಮರಳಲಿದ್ದಾರೆ. ಚಿತ್ರತಂಡವನ್ನು ನೋವಿಟ್ಸ್ಕಿ ಎಂಬ ಬಾಹ್ಯಾಕಾಶ ಯಾನಿ ಭೂಮಿಗೆ ಮರಳಿ ಕರೆದುಕೊಂಡು ಬರಲಿದ್ದಾರೆ. ನೋವಿಟ್ಸ್ಕಿ, 'ದಿ ಚಾಲೆಂಜ್' ಸಿನಿಮಾದಲ್ಲಿ ಬಾಹ್ಯಾಕಾಶ ಯಾನಿಯ ಪಾತ್ರದಲ್ಲಿ ನಟಿಸಿದ್ದಾರೆ.

    'ದಿ ಚಾಲೆಂಜ್' ಸಿನಿಮಾವು ವೈದ್ಯೆಯೊಬ್ಬಾಕೆಯ ಸವಾಲಿನ ಜೀವನ ಕುರಿತಾದ ಕತೆಯನ್ನು ಹೊಂದಿದ್ದು, ಯುಲಿಯಾ ಪೆರಿಸಿಲ್ಡ್ ವೈದ್ಯೆಯ ಪಾತ್ರದಲ್ಲಿ ನಟಿಸಿದ್ದಾರೆ. ಬಾಹ್ಯಾಕಾಶ ಯಾನಿಯೊಬ್ಬರಿಗೆ ಚಿಕಿತ್ಸೆ ಕೊಡಲು ಅಂತರಿಕ್ಷಕ್ಕೆ ಹಾರುವ ದೃಶ್ಯವನ್ನು ಹಾಗೂ ಬಾಹ್ಯಾಕಾಶದ ಕ್ಲಿಷ್ಟಕರ ಸ್ಥಿತಿಯಲ್ಲಿ ಬಾಹ್ಯಾಕಾಶ ಯಾನಿಗೆ ಚಿಕಿತ್ಸೆ ನೀಡುವ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗುತ್ತದೆ.

    ಅಂತರಿಕ್ಷ ಯಾನಕ್ಕೆ ಮುನ್ನಾ ಮಾತನಾಡಿರುವ ನಟಿ ಯುಲಿಯಾ ಪೆರಿಸಿಲ್ಡ್ ''ಮೊದಲ ಕೆಲವು ಸೆಕೆಂಡ್‌ಗಳು ಬಹಳ ಭಯಾನಕವಾಗಿರುತ್ತವೆ ಆನಂತರ ಎಲ್ಲವೂ ಸುಂದರವಾಗಿರುತ್ತದೆ'' ಎಂದಿದ್ದಾರೆ. ನಿರ್ದೇಶಕ, ನಟಿಯನ್ನು ಬಿಟ್ಟರೆ ಚಿತ್ರತಂಡದ ಇನ್ಯಾರೂ ಅಂತರಿಕ್ಷ ಯಾನಕ್ಕೆ ಹೊರಟಿಲ್ಲ. ಅಲ್ಲಿನ ದೃಶ್ಯವನ್ನು ನಿರ್ದೇಶಕರೇ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಿದ್ದಾರೆ.

    ಜನಪ್ರಿಯ ನಟ ಟಾಮ್ ಕ್ರೂಸ್ ತಮ್ಮ 'ಮಿಷನ್ ಇಂಪಾಸಿಬಲ್ 7' ಸಿನಿಮಾದ ಚಿತ್ರೀಕರಣವನ್ನು ಬಾಹ್ಯಾಕಾಶದಲ್ಲಿ ಮಾಡುವುದಾಗಿ ಘೋಷಿಸಿದ್ದರು. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸಹ ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿ, ಟಾಮ್ ಕ್ರೂಸ್ ಅನ್ನು ಬಾಹ್ಯಾಕಾಶಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿತ್ತು. ಆದರೆ ಅವರು ಹೋಗುವ ಮುನ್ನವೇ ರಷ್ಯಾದ ಈ ಚಿತ್ರತಂಡ ಬಾಹ್ಯಾಕಾಶಕ್ಕೆ ಹಾರಿದೆ. ಅಮೆರಿಕ ಹಾಗೂ ರಷ್ಯಾದ ನಡುವೆ ಅಂತರಿಕ್ಷ ಯಾನಕ್ಕೆ ಸಂಬಂಧಿಸಿದಂತೆ ಈ ತಿಕ್ಕಾಟ ಇದು ಮೊದಲೇನೂ ಅಲ್ಲ. ಮೊದಲ ಅಂತರಿಕ್ಷ ಯಾನ ಮಾಡುವ ಬಗ್ಗೆ 1960 ರಿಂದಲೂ ಅಮೆರಿಕ ಹಾಗೂ ರಷ್ಯಾ ನಡುವೆ ತಿಕ್ಕಾಟ ಇದ್ದೇ ಇದೆ. ಆದರೆ ಮೊದಲ ಅಂತರಿಕ್ಷ ಯಾನದ ಸಾಧನೆ ಅಮೆರಿಕದ ನಾಸಾಗೆ ಸೇರಿದೆ. 1969ರ ಜುಲೈ 19ರಂದು ನಾಸಾವು ಮೊದಲ ಮಾನವ ಇತಿಹಾಸದಲ್ಲಿ ಮೊದಲ ಬಾರಿಗೆ ನೀಲ್ ಆರ್ಮ್ ಸ್ಟ್ರಾಂಗ್ ಅನ್ನು ಚಂದ್ರನ ಮೇಲೆ ಕಾಲಿಸಿರುವಂತೆ ಮಾಡಿತು.

    English summary
    Russian film director and actress went to space for film shooting for the first time in film history. They are shooting film in space for 15 days.
    Tuesday, October 5, 2021, 22:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X