For Quick Alerts
  ALLOW NOTIFICATIONS  
  For Daily Alerts

  ಮೊದಲ ಇಂಗ್ಲೀಷ್ ಸಿನಿಮಾ: ಬಹಳ ಬೋಲ್ಡ್ ಪಾತ್ರದಲ್ಲಿ ಸಮಂತಾ

  |

  ಈ ಮೊದಲೆಲ್ಲ ಬಹಳ ಬೋಲ್ಡ್ ಆದ ಪಾತ್ರಗಳಲ್ಲಿ ಕಾಣಿಸಿಕೊಳ್ಳದಿದ್ದ ಸಮಂತಾ, ಪತಿ ನಾಗ ಚೈತನ್ಯ ಇಂದ ದೂರಾದ ಬಳಿಕ ವೃತ್ತಿ ಜೀವನದಲ್ಲಿ ಕೆಲವು ಬೋಲ್ಡ್ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

  'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿನಲ್ಲಿ ಕುಣಿಯುವ ನಿರ್ಧಾರ ಮಾಡಿರುವ ಸಮಂತಾ ಇದೀಗ ಬಹಳ ಬೋಲ್ಡ್ ಆದ ಪಾತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ತನ್ನ ವಾರಗೆಯ ಮತ್ಯಾವ ನಟಿಯರು ಮಾಡಲು ಹಿಂದೇಟು ಹಾಕುವ ಪಾತ್ರದಲ್ಲಿ ಸಮಂತಾ ಧೈರ್ಯದಿಂದ ನಟಿಸುತ್ತಿದ್ದಾರೆ.

  ಸಮಂತಾ ಇಂಗ್ಲೀಷ್ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು ಈ ಸಿನಿಮಾದಲ್ಲಿ ಮೊದಲ ಬಾರಿಗೆ ಉಭಯಲಿಂಗಿ (ಬೈ ಸೆಕ್ಶುವಲ್) ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಬಗ್ಗೆ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  ಬಾಫ್ಟಾ ವಿಜೇತ ನಿರ್ದೇಶಕ

  ಬಾಫ್ಟಾ ವಿಜೇತ ನಿರ್ದೇಶಕ

  ಬಾಫ್ಟಾ ಪ್ರಶಸ್ತಿ ವಿಜೇತ ಜನಪ್ರಿಯ ಹಾಲಿವುಡ್ ನಿರ್ದೇಶಕ ಫಿಲಿಪ್ ಜೋನ್ ನಿರ್ದೇಶಿಸುತ್ತಿರುವ ಹೊಸ ಇಂಗ್ಲಿಷ್ ಸಿನಿಮಾದಲ್ಲಿ ತಮಿಳು ಉಭಯಲಿಂಗಿ ಪಾತ್ರದಲ್ಲಿ ಸಮಂತಾ ನಟಿಸುತ್ತಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಖುಷಿ ಹಂಚಿಕೊಂಡಿರುವ ಸಮಂತಾ, ''12 ವರ್ಷಗಳ ಹಿಂದೆ 'ಏ ಮಾಯ ಚೇಸಾವೆ' ಸಿನಿಮಾಕ್ಕೆ ನಾನು ಆಡಿಷನ್ ನೀಡಿದ್ದೆ. ಅದಾದ ಬಳಿಕ ಈಗಲೇ ಮತ್ತೆ ಆಡಿಷನ್ ನೀಡಿದ್ದು. ಅಂದು ಎಷ್ಟು ನರ್ವಸ್ ಆಗಿದ್ದೆನೊ ಇಂದೂ ಅಷ್ಟೇ ನರ್ವಸ್ ಆಗಿದ್ದೆ. ಭಾಫ್ಟಾ ಪ್ರಶಸ್ತಿ ವಿಜೇತ, ಅತ್ಯುತ್ತಮ ನಿರ್ದೇಶಕ, ನನ್ನ ಮೆಚ್ಚಿನ 'ಡೌನ್‌ಟೌನ್ ಅಬೆ' ಸರಣಿಯ ನಿರ್ದೇಶಕ ಫಿಲಿಪ್‌ ಜಾನ್‌, ನನ್ನನ್ನು ನಿಮ್ಮ ಸಿನಿಮಾಕ್ಕೆ ಆಯ್ಕೆ ಮಾಡಿಕೊಂಡಿದ್ದಕ್ಕೆ ಧನ್ಯವಾದ'' ಎಂದಿದ್ದಾರೆ ಸಮಂತಾ.

  ಕಾದಂಬರಿಯನ್ನು ಸಿನಿಮಾ ಮಾಡಲಾಗುತ್ತಿದೆ

  ಕಾದಂಬರಿಯನ್ನು ಸಿನಿಮಾ ಮಾಡಲಾಗುತ್ತಿದೆ

  ಫಿಲಿಪ್ ಜಾನ್, 'ಅರೇಂಜ್‌ಮೆಂಟ್ಸ್ ಆಫ್ ಲವ್' ಹೆಸರಿನ ಕಾದಂಬರಿಯನ್ನು ಅದೇ ಹೆಸರಿನ ಸಿನಿಮಾ ಮಾಡುತ್ತಿದ್ದು. ಸಿನಿಮಾದಲ್ಲಿ ಸಮಂತಾರದ್ದು ಉಭಯಲಿಂಗಿ ತಮಿಳು ಮಹಿಳೆಯ ಪಾತ್ರ. ಜೊತೆಗೆ ಖಾಸಗಿ ಪತ್ತೆಧಾರಿಯೂ ಸಹ. ಕಾದಂಬರಿಯನ್ನು ತಿಮೇರಿ ಎನ್ ಮುರಾರಿ ಎಂಬುವರು 2004 ರಲ್ಲಿ ಬರೆದಿದ್ದರು. ಸಿನಿಮಾದಲ್ಲಿ ಸಮಂತಾರದ್ದು ಬಹಳ ಗಟ್ಟಿ ಪಾತ್ರವಾಗಿದ್ದು, ಸಿನಿಮಾದ ಮುಖ್ಯ ಪಾತ್ರಧಾರಿ ಅವರೇ ಆಗಿರಲಿದ್ದಾರೆ. ಅವರ ಪಾತ್ರ ಬಹಳ ಬೋಲ್ಡ್ ಆಗಿಯೂ ಇರಲಿದೆ.

  ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

  ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ

  ಇತ್ತೀಚಿನ ದಿನಗಳಲ್ಲಿ ಸಮಂತಾ ಬಹಳ ವೈವಿಧ್ಯಮಯ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. 'ಫ್ಯಾಮಿಲಿ ಮ್ಯಾನ್ 2' ವೆಬ್ ಸರಣಿಯಲ್ಲಿ ಕರುಣಾರಹಿತ ಕಿಲ್ಲರ್ ಪಾತ್ರ ಮಾಡಿದ್ದ ಸಮಂತಾ, ಇದೀಗ 'ಪುಷ್ಪ' ಸಿನಿಮಾದಲ್ಲಿ ಮೊದಲ ಬಾರಿಗೆ ಐಟಂ ಹಾಡಿಗೆ ಡ್ಯಾನ್ಸ್ ಮಾಡಲು ಒಪ್ಪಿಕೊಂಡಿದ್ದಾರೆ. ಇದೀಗ ಬೈಸೆಕ್ಶುವಲ್ ಪಾತ್ರದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಇನ್ನೂ ಭಿನ್ನ-ಭಿನ್ನ ಮಾದರಿಯ ಪಾತ್ರಗಳಲ್ಲಿ ನಟಿಸಲು ಸಮಂತಾ ಎದುರು ನೋಡುತ್ತಿದ್ದಾರೆ. ಪತಿಯಿಂದ ದೂರಾದ ಮೇಲಂತೂ ಸಮಂತಾ ಇನ್ನಷ್ಟು ಸ್ವತಂತ್ರ್ಯರಾಗಿದ್ದು ನಿರ್ಭೀತಿಯಿಂದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

  11 ವರ್ಷದ ಸಂಬಂಧಕ್ಕೆ ಪೂರ್ಣವಿರಾಮ

  11 ವರ್ಷದ ಸಂಬಂಧಕ್ಕೆ ಪೂರ್ಣವಿರಾಮ

  ಸಮಂತಾ ಹಾಗೂ ನಾಗಚೈತನ್ಯ ತಮ್ಮ ನಾಲ್ಕು ವರ್ಷಗಳ ವಿವಾಹ ಜೀವನಕ್ಕೆ ಪೂರ್ಣವಿರಾಮವಿಟ್ಟು ಪರಸ್ಪರ ಒಪ್ಪಿಗೆ ಮೇರೆಗೆ ದೂರಾದರು. 2017 ರಲ್ಲಿ ಈ ಜೋಡಿ ವಿವಾಹವಾಗಿತ್ತು. ಅದಕ್ಕೂ ಮುನ್ನ 2010 ರಿಂದಲೂ ಪರಸ್ಪರ ಪ್ರೀತಿಯಲ್ಲಿದ್ದರು. ವಿಚ್ಛೇಧನಕ್ಕೆ ಸ್ಪಷ್ಟ ಕಾರಣ ಈವರೆಗೆ ತಿಳಿದು ಬಂದಿಲ್ಲ. ಆದರೆ ವಿಚ್ಛೇಧನದ ಬಳಿಕ ಸಮಂತಾ ವಿರುದ್ಧ ಹಲವರು ಹಲವು ರೀತಿಯ ಆರೋಪಗಳನ್ನು ಮಾಡಿದರು. ಸಮಂತಾಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಸಂಬಂಧವಿದೆ ಎಂದು ಸಹ ಆರೋಪ ಮಾಡಲಾಯ್ತು. ಸಮಂತಾಗೆ ಮಕ್ಕಳು ಬೇಡವಾಗಿತ್ತು ಹಾಗಾಗಿ ವಿಚ್ಛೇಧನವಾಯ್ತು ಇನ್ನೂ ಹಲವು ಕಾರಣಗಳನ್ನು ನೀಡಲಾಯ್ತು. ಆದರೆ ಈಗ ಇಬ್ಬರೂ ಪರಸ್ಪರ ದೂರಾಗಿದ್ದು, ತಮ್ಮ ವೃತ್ತಿಯೆಡೆಗೆ ಗಮನ ಕೊಡುತ್ತಿದ್ದಾರೆ.

  English summary
  Samantha acting in a bold role in her first English movie directing by BAFTA winner Philip Jhons. Movie name is Arrangements of Love.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X