»   » ಮೋಸ್ಟ್ ಸೆಕ್ಸಿಯಸ್ಟ್ ಮಹಿಳೆಯಾಗಿ ಸ್ಕಾರ್ಲೆಟ್ ಆಯ್ಕೆ

ಮೋಸ್ಟ್ ಸೆಕ್ಸಿಯಸ್ಟ್ ಮಹಿಳೆಯಾಗಿ ಸ್ಕಾರ್ಲೆಟ್ ಆಯ್ಕೆ

By: ರವಿಕಿಶೋರ್
Subscribe to Filmibeat Kannada

ಹಾಲಿವುಡ್ ತಾರೆ ಸ್ಕಾರ್ಲೆಟ್ ಜೋಹಾನ್ಸನ್ ಅತ್ಯಂತ ಶೃಂಗಾರಭರಿತ ಮಹಿಳೆಯಾಗಿ ಎರಡನೇ ಬಾರಿ ಆಯ್ಕೆಯಾಗಿದ್ದಾರೆ. ಇಪ್ಪತ್ತೆಂಟರ ಹರೆಯದ ಯುವ ನಟಿ ಸ್ಕಾರ್ಲೆಟ್ ಈ ಕಿರೀಟವನ್ನು ಧರಿಸುವ ಮೂಲಕ ಎಸ್ಕ್ವೇರ್ ನಿಯತಕಾಲಿಕೆಯ ಮುಖಪುಟವನ್ನು ಎರಡನೇ ಬಾರಿ ಅಲಂಕರಿಸಿದ್ದಾರೆ.

2006ರಲ್ಲಿ ಸ್ಕಾರ್ಲೆಟ್ ಅವರಿಗೆ ಈ ಬಿರುದು ವರಿಸಿತ್ತು. ಈ ಸಂದರ್ಭದಲ್ಲಿ ಸ್ಕಾರ್ಲೆಟ್ ಮಾತನಾಡುತ್ತಾ, "ಇದುವರೆಗೂ ಎರಡು ಬಾರಿ ಈ ಟೈಟಲ್ ಗೆದ್ದ ಯುವತಿ ನಾನು. ತನ್ನ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಮಾಜಿ ಪತ್ರಕರ್ತ ರೋಮೈನ್ ಡ್ಯೂರಿಕ್ ಸದ್ಯಕ್ಕೆ ನನ್ನ ಜೊತೆಗಿನ ಅನುಬಂಧಕ್ಕೆ ಬೆರಗಾಗಿದ್ದಾನೆ" ಎಂದಿದ್ದಾರೆ.

 Scarlett Johansson

ಇದುವರೆಗೂ ತನ್ನಲ್ಲಿ ಇಷ್ಟು ಜಲಸಿ ಇದೆ ಎಂದು ತನಗೂ ಗೊತ್ತಿರಲಿಲ್ಲ. ಡ್ಯೂರಿಕ್ ಜೊತೆ ಮಾತ್ರ ತಾನು ಡೇಟಿಂಗ್ ಮಾಡುತ್ತಿದ್ದೇನೆ. ಆತನನ್ನು ಕೇವಲ ಪ್ರೀತಿಸುತ್ತಿಲ್ಲ, ಎಚ್ಚರಿಕೆಯಿಂದಲೂ ಆತನನ್ನು ನೋಡಿಕೊಳ್ಳುತ್ತೇನೆ ಎಂದಿದ್ದಾರೆ.

ಇದಕ್ಕೂ ಮುನ್ನ ರಿಯಾನ್ ರೇನಾಲ್ಡ್ಸ್ ಜೊತೆ ಸ್ಕಾರ್ಲೆಟ್ ಗೆ ಮದುವೆಯಾಗಿತ್ತು. ಆತನಿಗೆ ಗುಡ್ ಬೈ ಹೇಳಿ ಈಗ ಡ್ಯೂರಿಕ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಹಾಲಿವುಡ್ ನಲ್ಲಿ ಸಖತ್ ಬಿಜಿಯಾಗಿರುವ ಸ್ಕಾರ್ಲೆಟ್ ಕೆಲ ಕಾಲದಿಂದ ಸಿನಿಮಾಗಳಿಂದ ದೂರ ಉಳಿದಿದ್ದಾರೆ.

ಅನೇಕ ಹಿಟ್ ಚಿತ್ರಗಳಲ್ಲಿ ಸ್ಕಾರ್ಲೆಟ್ ಅಭಿನಯಿಸಿದ್ದಾರೆ. ಮ್ಯಾಚ್ ಪಾಯಿಂಟ್, ಐರನ್ ಮ್ಯಾನ್ 2, ದಿ ಅವೆಂಜರ್ಸ್ ನಂತಹ ಭಾರಿ ಬಜೆಟ್ ಚಿತ್ರಗಳಲ್ಲಿ ಸ್ಕಾರ್ಲೆಟ್ ತನ್ನದೇ ಆದಂತಹ ಮುದ್ರೆಯನ್ನು ಒತ್ತಿದ್ದಾರೆ. ಡಾನ್ ಜೋನ್ ಎಂಬ ಕಾಮಿಡಿ ಪೋರ್ನ್ ಅಡಿಕ್ಷನ್ ಚಿತ್ರದಲ್ಲಿ ಸಹ ನಟಿಸಿದ್ದರು. ಈ ರೀತಿಯ ಚಿತ್ರಗ್ಗಳು ಮಹಿಳೆಯರ ಗೌರವ ಘನತೆಗೆ ಎಲ್ಲೂ ಭಂಗ ತರಲ್ಲ ಎಂಬುದು ಸ್ಕಾರ್ಲೆಟ್ ಅಭಿಪ್ರಾಯ.

English summary
Don Juan star Scarlett Johansson has been named the sexiest woman alive for the second time by a magazine. The 28-year-old actress has been given the coveted title by Esquire magazine for a second year. She was first crowned with the title in 2006.
Please Wait while comments are loading...